ಗರ್ಭಿಣಿ ಮಹಿಳೆಯರೇ ಈ ಕೆಲಸ ಮಾಡುವಾಗ ಇರಲಿ ಎಚ್ಚರ
First Published Jan 12, 2021, 5:09 PM IST
ಗರ್ಭಿಣಿ ಆಗುವುದು ಎಂದರೆ ಮಹಿಳೆಯರ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ ಎಂದೇ ಹೇಳಬಹುದು. ಈ ಸಮಯದಲ್ಲಿ ಬಹಳಷ್ಟು ಆರೈಕೆ, ಕಾಳಜಿ ಮುಖ್ಯವಾಗಿದೆ. ಮೊದಲಿಗೆ ಇದ್ದಂತೆ ಈ ಸಂದರ್ಭದಲ್ಲಿ ಇರಲು ಸಾಧ್ಯವಿಲ್ಲ. ಏನೇ ಕೆಲಸ ಮಾಡಿದರೂ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಮಾಡಬೇಕು.

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರು ಕೆಲಸಗಳಿಗೆ ಕೊಂಚವಾದರೂ ಬ್ರೇಕ್ ನೀಡಬೇಕು. ಇಲ್ಲವಾದರೆ ಕೆಲವೊಂದು ಕೆಲಸಗಳನ್ನು ಮಾಡಿದರೆ ಅದು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ, ಯಾವ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡಬಾರದು ನೋಡಿ...

ಹೆಚ್ಚು ಭಾರದ ವಸ್ತುಗಳನ್ನು ಎತ್ತಬೇಡಿ. ಶಾಪಿಂಗ್ ಹೋದಾಗಲೂ ಸಹ ಭಾರವಾದ ಕವರ್‌ಗಳನ್ನು ಎತ್ತುವ ಬದಲು ಗಾಡಿಗಳನ್ನು ತಳ್ಳಿಕೊಂಡು ಹೋಗಿ. ಇಲ್ಲವಾದರೆ ಇದರಿಂದ ಹೊಟ್ಟೆ ಮತ್ತು ಬೆನ್ನಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗರ್ಭಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?