ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ

First Published 21, Jul 2020, 5:35 PM

ಸಾರ್ವಜನಿಕ ಸ್ತನಪಾನದ ಕುರಿತು ಹಬ್ಬಿರುವ ಸ್ಟಿಗ್ಮಾ ತೊಡೆದು ಹಾಕಲು ಫೇಸ್ಬುಕ್‌ನಲ್ಲೊಂದು ಪವರ್‌ಫುಲ್ ಅಭಿಯಾನ ಆರಂಭವಾಗಿದೆ. ಚಿಕಾಗೋ ಮೂಲದ ಐಶ್ವರ್ಯಾ ರಾಜನ್ ಬಾಬು ಈ ಫೋಟೋ ಅಭಿಯಾನದ ರೂವಾರಿ. ಇವರು ಫೇಸ್ಬುಕ್‌ನಲ್ಲಿ ದಿ ಮಾಮಿ ಸೀರೀಸ್ ಎಂಬ ಗ್ರೂಪ್ ಹುಟ್ಟುಹಾಕಿದ್ದು, ಅದರಲ್ಲಿ ಪ್ರಸ್ತುತ 40 ದೇಶಗಳ 4 ಸಾವಿರ ಸದಸ್ಯರಿದ್ದಾರೆ. ಆಗಸ್ಟ್ ಮೊದಲ ವಾರ ಸ್ತನ್ಯಪಾನ ವಾರವಾಗಿರುವುದರಿಂದ ಅದನ್ನು ಆಚರಿಸಲು ಐಶ್ವರ್ಯಾ ಆಸಕ್ತಿಕರ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಕವರ್ ಮಾಡಿಕೊಂಡರೂ ಮಗುವಿಗೆ ಹಾಲೂಡಿಸುವುದನ್ನು ವಿರೋಧಿಸುವವರೇ ಹಲವರು. ಅದನ್ನು ಅವಮಾನ, ಮರ್ಯಾದೆ ಇಲ್ಲದವರ ಕೆಲಸ ಎಂಬಂತೆ ನೋಡಲಾಗುತ್ತದೆ. ಈ ಕಳಂಕವನ್ನು ಹೋಗಲಾಡಿಸಲು ಐಶ್ವರ್ಯಾ ಪಣ ತೊಟ್ಟಿದ್ದು,  ಸ್ತನಪಾನದ ಮಹತ್ವ ತಿಳಿಸಲು ಭಾರತದ 9 ಫೋಟೋಗ್ರಾಫರ್‌ಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲೂಡಿಸುತ್ತಿರುವ ತಾಯಂದಿರ ಫೋಟೋಗಳನ್ನು ತೆಗೆಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ತೆಗೆಯಲ್ಪಟ್ಟ ಕೆಲ ಚೆಂದದ ಚಿತ್ರಗಳು ಇಲ್ಲಿವೆ.

ಸಾರ್ಸ್ತವಜನಿಕ ಸ್ತನಪಾನ ಕಳಂಕ ತೊಡೆಯಲು ಫೋಟೋ ಅಭಿಯಾನ ಆರಂಭಿಸಿರುವ ಐಶ್ವರ್ಯಾ.

ಬ್ರೆಸ್ಟ್‌ಫೀಡಿಂಗ್‌ನಿಂದ ವರ್ಷಕ್ಕೆ 8,23,00 ಮಕ್ಕಳು ಹಾಗೂ 20,000 ತಾಯಂದಿರ ಜೀವ ಉಳಿಸಬಹುದಾಗಿದೆ.

ಮಗು ಹುಟ್ಟಿದೊಡನೆ ಸ್ತನಪಾನಕ್ಕೆ ಅವಕಾಶ ಮಾಡಿಕೊಡುವ ಕುರಿತು ಸರ್ವೆ ಮಾಡಿದ 76 ದೇಶಗಳಲ್ಲಿ ಭಾರತ 56ನೇ ಸ್ಥಾನದಲ್ಲಿರುವುದು ದುರಂತ.

ಕೇವಲ ಶೇ.41.6 ಮಕ್ಕಳಿಗೆ ಮಾತ್ರ ಹುಟ್ಟಿದ ಗಂಟೆಯೊಳಗೆ ಎದೆಹಾಲು ಕುಡಿವ ಅವಕಾಶ ಸಿಗುತ್ತಿದೆ.

ಪ್ರತಿವರ್ಷ 99,499 ಮಕ್ಕಳು ಬೇಧಿ ಅಥವಾ ನ್ಯುಮೋನಿಯಾದಿಂದ ಸಾವನ್ನಪ್ಪುತ್ತವೆ. ಹುಟ್ಟಿದ ಕೂಡಲೇ ಎದೆ ಹಾಲು ಆರಂಭಿಸುವ ಮೂಲಕ ಈ ಸಾವನ್ನು ತಪ್ಪಿಸಬಹುದಾಗಿದೆ.

ಹೆಚ್ಚಿನ ಮಕ್ಕಳ ಸಾವು ಹಾಗೂ ಹೆಚ್ಚುತ್ತಿರುವ ಕ್ಯಾನ್ಸರ್ ಮತ್ತು ಟೈಪ್ 2 ಡಯಾಬಿಟೀಸ್‌ನಿಂದ ಸಾಯುವ ಮಹಿಳೆಯರ ಸಂಖ್ಯೆಯು ಅವರು ಸರಿಯಾಗಿ ಸ್ತನಪಾನ ಮಾಡಿಸದ ಕಾರಣ ಹೊಂದಿದೆ.

ಸ್ತನಪಾನದ ಮಹತ್ವದ ಅರಿವಿದ್ದರೂ, ಇಂದಿನ ಜೀವನಶೈಲಿ ಹಾಗೂ ಸಮಾಜದ ದೃಷ್ಟಿಕೋನ ಹಲವು ತಾಯಂದಿರಿಗೆ ಮಗುವಿಗೆ ಹಾಲು ಕುಡಿಸಲು ತೊಡಕಾಗುತ್ತಿದೆ. ಬ್ರೆಸ್ಟ್‌ಫೀಡಿಂಗನ್ನು ತಾಯಿ ಮಗುವಿನ ಆರೋಗ್ಯ ಹೆಚ್ಚಿಸುವ ಸಾಮಾನ್ಯ ಜೀವನದ ಭಾಗವಾಗಿ ಕಾಣಬೇಕಿದೆ.

loader