ಹೀಗಾದ್ರೆ ಅಂಬಾನಿ ಆಸ್ತಿ ಮುಗಿದೇ ಹೋಗುತ್ತಾಂತ, ನೀತಾ ಅಂಬಾನಿ ವಾಚ್ ಬೆಲೆ ನೀವ್ ಗೆಸ್ ಮಾಡೋಕು ಸಾಧ್ಯವಿಲ್ಲ!
ಬಿಲಿಯನೇರ್ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಲಕ್ಷ, ಕೋಟಿ ಬೆಲೆ ಬಾಳುವ ಅವರ ಸೀರೆ, ಹ್ಯಾಂಡ್ ಬ್ಯಾಗ್, ಆಕ್ಸೇಸರೀಸ್ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ನೀತಾ ಧರಿಸುವ ವಾಚ್‌ವೊಂದರ ಬೆಲೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಬಿಲಿಯನೇರ್ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಲಕ್ಷ, ಕೋಟಿ ಬೆಲೆ ಬಾಳುವ ಅವರ ಸೀರೆ, ಹ್ಯಾಂಡ್ ಬ್ಯಾಗ್, ಆಕ್ಸೇಸರೀಸ್ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ನೀತಾ ಧರಿಸುವ ವಾಚ್‌ವೊಂದರ ಬೆಲೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಸೆಲೆಬ್ರಿಟಿಗಳು ಎಂದ ಮೇಲೆ ಅವರ ಉಡುಪು, ಅವರು ಧರಿಸುವ ವಾಚ್, ನೆಕ್ಲೆಸ್, ಹ್ಯಾಂಡ್ ಬ್ಯಾಗ್ ಅವರು ಓಡಾಡುವ ಕಾರು ಎಲ್ಲವೂ ದುಬಾರಿ. ಅದರಲ್ಲೂ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರು ತಮ್ಮ ಲೈಫ್ ಸ್ಟೈಲ್ ಹಾಗೂ ದುಬಾರಿ ವಸ್ತುಗಳ ಕಲೆಕ್ಷನ್ ನಿಂದ ಸದಾ ಸುದ್ದಿಯಲ್ಲಿರುತ್ತಾರೆ.
ನೀತಾ ಅಂಬಾನಿಯವರು ಪತ್ನಿಯಾಗಿ, ಉದ್ಯಮಿಯಾಗಿ, ನೃತ್ಯಗಾರ್ತಿಯಾಗಿ ಹಾಗೂ ತಾಯಿಯಾಗಿ ಎಲ್ಲ ರಂಗದಲ್ಲಿಯೂ ಸಕ್ಸಸ್ ಆಗಿದ್ದಾರೆ. ಈ ವಯಸ್ಸಿನಲ್ಲೂ ಅವರಿಗಿರುವ ಫ್ಯಾಷನ್ ಹಾಗೂ ಅವರ ದುಬಾರಿ ಕಲೆಕ್ಷನ್ ಗಳು ಫ್ಯಾಷನ್ ಪ್ರಿಯರ ನಿದ್ದೆಗೆಡಿಸುತ್ತದೆ. ಅವರು ಧರಿಸುವ ಉಡುಪು, ನೆಕ್ಲೆಸ್, ಅವರು ಬಳಸುವ ಹ್ಯಾಂಡ್ ಬ್ಯಾಗ್, ಚಪ್ಪಲಿ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಸಧ್ಯಕ್ಕೆ ನೀತಾ ಅಂಬಾನಿಯವರು ಕಟ್ಟಿಕೊಂಡ ದುಬಾರಿ ಬೆಲೆಯ ಕಾರ್ಟಿಯರ್ ವಾಚ್ ಎಲ್ಲರ ಗಮನ ಸೆಳೆದಿದೆ.
ನೀತಾ ಅಂಬಾನಿ ಅವರು ಐಷಾರಾಮಿ ಪಾಟೆಕ್ ಫಿಲಿಪ್ ನಾಟಿಲಸ್ ವಾಚ್ ಅನ್ನು ಹೊಂದಿದ್ದಾರೆ. ಇದು ರೋಸ್ ಗೋಲ್ಡ್ ಡೈಮಂಡ್-ಎನ್‌ಕ್ರಸ್ಟೆಡ್ ವಾಚ್ ಆಗಿದೆ. ಇದರ ಬೆಲೆ ಬರೋಬ್ಬರಿ 1.05 ಕೋಟಿ ಎಂದು ಹೇಳಲಾಗ್ತಿದೆ. ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅವರು ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಮಾಲೀಕರಾಗಿದ್ದಾರೆ.
ಐಪಿಎಲ್ ಪಂದ್ಯವೊಂದರಲ್ಲಿ, ನೀತಾ ಅಂಬಾನಿ ತಮ್ಮ ಐಪಿಎಲ್ ತಂಡವಾದ ಮುಂಬೈ ಇಂಡಿಯನ್ಸ್‌ಗೆ ಚಿಯರ್‌ಲೀಡರ್ ಆಗಿ ಮಾರ್ಪಟ್ಟರು. ಕಸ್ಟಮೈಸ್ ಮಾಡಿದ ಜರ್ಸಿಯನ್ನು ಧರಿಸಿದ್ದರು. ನೀತಾ ತನ್ನ ಒಟ್ಟಾರೆ ನೋಟವನ್ನು ಕನಿಷ್ಠವಾಗಿ ಇರಿಸಿಕೊಳ್ಳಲು ಆದ್ಯತೆ ನೀಡಿದರೂ, ಅವರ ವಾಚ್ ಎಲ್ಲರ ಗಮನ ಸೆಳೆಯಿತು. ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ಫೋಟೋದಲ್ಲಿ ನೀತಾ ಅಂಬಾನಿ ಐಷಾರಾಮಿ ಗಡಿಯಾರ ಧರಿಸಿರುವುದನ್ನು ನೋಡಬಹುದು.
ನೀತಾ ಅಂಬಾನಿ ಪಾಟೆಕ್ ಫಿಲಿಪ್ ನಾಟಿಲಸ್ 7118/1200ಆರ್ ವಾಚ್‌ನ್ನು ಧರಿಸಿದ್ದರು. ಬೆರಗುಗೊಳಿಸುವ ವಿನ್ಯಾಸದೊಂದಿಗೆ, ಗಡಿಯಾರವು 18k ಗುಲಾಬಿ ಚಿನ್ನದ ಕೇಸ್ ಮತ್ತು ಹೊಂದಾಣಿಕೆಯ ಬ್ರೇಸ್‌ಲೆಟ್‌ನೊಂದಿಗೆ ಬರುತ್ತದೆ. ಇದಲ್ಲದೆ, ವಾಚ್ ಡಯಲ್ ಪರ್ಲ್ ಡೈಮಂಡ್-ಎಂಬೆಡೆಡ್ ಡಯಲ್ ಅನ್ನು ಹೊಂದಿದೆ.
ಚಿನ್ನದ ಓಪಲೈನ್ ಡಯಲ್ ನಯಗೊಳಿಸಿದ ಗುಲಾಬಿ ಚಿನ್ನದ ಕೈಗಳು ಮತ್ತು ಕೌಂಟರ್‌ಗಳನ್ನು ಸಹ ಹೊಂದಿದೆ. ನೀವು Nautilus 7118/1200R ಅನ್ನು ಖರೀದಿಸಲು ಬಯಸಿದರೆ, ಅದು USD 1,27,680 ಮೌಲ್ಯದ್ದಾಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ರೂ. 1,05,93,181.87 ಎಂದರೆ ಬರೋಬ್ಬರಿ 1.05 ಕೋಟಿ ಬೆಲೆ ಬಾಳುತ್ತದೆ.
ನೀತಾ ಅಂಬಾನಿ ಕೆಲ ದಿನಗಳ ಹಿಂದೆ ತಮ್ಮ ವಿಭಿನ್ನ ಲುಕ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆ ಸಂದರ್ಭದಲ್ಲಿ ನೀತಾ ಅಂಬಾನಿ ನೀಲಿ ಬಣ್ಣದ ಟಾಪ್ ಒಂದನ್ನು ಧರಿಸಿದ್ದರು. ಆ ಟಾಪ್ ಮೇಲೆ ಚಿನ್ನದ ಕಸೂತಿಯಿಂದ MI ಎಂದು ಬರೆಯಲಾಗಿತ್ತು. ಇದರ ಜೊತೆಗೆ ಅವರು ಬಳಸಿದ್ದ ಹ್ಯಾಂಡ್ ಬ್ಯಾಗ್ ಮತ್ತು ವಾಚ್ ಎಲ್ಲರ ಕಣ್ಣುಕುಕ್ಕುವಂತಿತ್ತು.
ಈ ವೇಳೆ ನೀತಾ ಅಂಬಾನಿಯವರು ಧರಿಸಿದ್ದ ಕೈ ಗಡಿಯಾರ ಕ್ಲೆ ಡಿ ಕಾರ್ಟಿಯರ್ ಕಂಪನಿಯದ್ದು ಎಂಬುದು ಪತ್ತೆಯಾಗಿದೆ. ಇದು ಗುಲಾಬಿ ಬಣ್ಣದ ವಾಚ್ ಆಗಿದ್ದು 18 ಕ್ಯಾರೆಟ್ ಚಿನ್ನದ ಅನ್ ಕಟ್ ಡೈಮಂಡ್ ಬ್ರೆಸ್ಲೆಟ್ ಅನ್ನು ಹೊಂದಿದೆ. ಈ ಐಷಾರಾಮಿ ವಾಚ್ ಫ್ಲಿಂಕ್ ಸನ್ ರೇ ಎಫೆಕ್ಟ್ ಡಯಲ್ ಮತ್ತು ನೀಲಿ ರೋಮನ್ ನ್ಯುಮರಲ್ ಹವರ್ ಮಾರ್ಕರ್ ಗಳನ್ನು ಹೊಂದಿದೆ.