ರಾತ್ರೋರಾತ್ರಿ ಸುಂದರಿ ಆಗ್ಬೇಕು ಅಂದ್ರೆ ಈ ಹಕ್ಕಿಯ ಪಿಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಳ್ಳಬೇಕಂತೆ!
ಬ್ಯೂಟಿ ಹೆಚ್ಚಿಸಿಕೊಳ್ಳಲು ಏನ್ ಏನ್ ಮಾಡ್ತಾರೆ ನೋಡಿ. ಜಪಾನ್‌ನಲ್ಲಿದೆ ಸಿಕ್ಕಾಪಟ್ಟೆ ಮುಂದುವರೆದ ಬ್ಯೂಟಿ ಫೇಸ್ ಪ್ಯಾಕ್....

ಸುಂದರವಾಗಿ ಕಾಣಿಸಬೇಕು ಮುಖದಲ್ಲಿ ಮೊಡವೆ ಇರಬಾರದು ಡಾರ್ಕ್ ಸರ್ಕಲ್ ಕಾಣಿಸಬಾರದು ಅದಾ ಪಳಪಳ ಹೊಳೆಯಬೇಕು ಅನ್ನೋದು ಪ್ರತಿಯೊಬ್ಬರಿಗೂ ಇರುವ ಆಸೆ.
ಹೀಗಾಗಿ ಮಾರ್ಕೆಟ್‌ನಲ್ಲಿ ಮಾರಾಟವಾಗುವ ಪ್ರತಿ ಬ್ಯೂಟಿ ಪ್ರಾಡೆಕ್ಟ್‌ಗಳನ್ನು ಪ್ರಯೋಗಿಸುತ್ತಾರೆ. ಅಷ್ಟೇ ಅಲ್ಲದೆ ಬ್ಯೂಟಿ ಪಾರ್ಲರ್‌ನಲ್ಲಿ ಒಂದು ಗಂಟೆ ಕಳೆಯುತ್ತಾರೆ ಹಾಗೂ ವೈದ್ಯರನ್ನು ಸಂಪರ್ಕಿಸುತ್ತಾರೆ.
ಏನನ್ನು ಛೀ ಅಂತ ನಾವು ದೂರ ಮಾಡುತ್ತೀವಿ ಅದನ್ನು ಬಳಸಿಕೊಂಡು ಜಪಾನ್‌ನಲ್ಲಿ ವಿಶೇಷ ಫೇಸ್ ಪ್ಯಾಕ್ ತಯಾರಿಸಿದ್ದಾರೆ. ಕೇಳೋಕೆ ಶಾಕ್ ಆಗ್ಬೋದಿ ಆದರೆ ಇದರ ಫಲಿತಾಂಶ 100% ಇದೆ.
ಹೌದು! ನೈಟಿಂಗೇಲ್/ಕೂಗಿಲೆಯ ಹಿಕ್ಕೆಗಳನ್ನು ಬಳಸಿ ಪೂಪ್ ಫೇಶಿಯಲ್ ಎಂದು ಜಪಾನ್‌ನಲ್ಲಿ ತಯಾರಿಸಿದ್ದಾರೆ. ಇದು ಪ್ರಾಚೀನ ಕಾಲದ ಚಿಕಿತ್ಸಾ ವಿಧಾನವಾಗಿದು ಈ ಮತ್ತೆ ಬಳಸುತ್ತಿದ್ದಾರೆ.
ಈಗ ಟ್ರೆಂಡ್‌ನಲ್ಲಿರುವ ಈ ಫೇಶಿಯಲ್‌ನ 17ನೇ ಶತಮಾನದಲ್ಲಿದ್ದ ಕಲಾವಿದರು ಮತ್ತು ನೃತ್ಯಗಾರರು ಮೇಕಪ್ ತೆಗೆದು ನಂತರ ಚರ್ಮದ ಮೇಲೆ ಹಚ್ಚಿಕೊಳ್ಳುತ್ತಿದ್ದರು.
ಈಗ ಹುಡುಗಿಯರು ಬ್ಯೂಟಿ ಕಾನ್ಶಿಯಸ್ ಆಗಿದ್ದು ಏನ್ಬೇಕಿದ್ರು ಹಚ್ಚಿಕೊಳ್ಳುತ್ತೀವಿ ನಾವು ಸುಂದರವಾಗಿ ಕಾಣಿಸಿದರೆ ಸಾಕು ಅನ್ನೋ ಮಟ್ಟಕ್ಕೆ ಬಂದಿದ್ದಾರೆ. ಹೀಗಾಗಿ ಇದು ಮತ್ತೆ ಟ್ರೆಂಡ್ ಆಗುತ್ತಿದೆ.
ಜಪಾನ್ ದೇಶದ ಕ್ಯುಶು ದ್ವೀಪದಲ್ಲಿ ಮಾತ್ರ ಕಂಡು ಬರುವ ಕೊಗಿಲೆ ಪಿಕ್ಕೆಯನ್ನು ಫೇಸಿಯಲ್‌ಗೆ ಬಳಸುತ್ತಾರೆ. ಮುಖಕ್ಕೆ ಹಚ್ಚಿ ಮೊದಲು ಮಸಾಜ್ ಕೂಡ ಮಾಡುತ್ತಾರೆ.
ನಮ್ಮ ದೇಶದಲ್ಲಿ ಈ ಫೇಶಿಯಲ್ ಮಾಡಿಸಿಕೊಳ್ಳಲು ಸುಮಾರು 14 ರಿಂದ 18 ಸಾವಿರ ರೂಪಾಯಿಗಳು ಆಗುತ್ತದೆ. ಸೆಲೆಬ್ರಿಟಿಗಳು ಕೂಡ ಇದನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.