ಬ್ಯೂಟಿ ಸ್ಲೀಪ್, ಮಾಯಿಶ್ಚರೈಸ್.... ಸುಂದರ ತ್ವಚೆಗಾಗಿ ರಾತ್ರಿ ಹಿಂಗ್ ಮಾಡಿ ಸಾಕು...
ಬೆಳಗ್ಗಿನ ಜಾವ ಸ್ಕಿನ್ ಬಗ್ಗೆ ಎಷ್ಟೇ ಜಾಗೃತೆ ವಹಿಸಿದರೂ, ರಾತ್ರಿ ಕೇರ್ ತುಂಬಾನೆ ಅಗತ್ಯ. ರಾತ್ರಿ ವೇಳೆಯ ಸ್ಕಿನ್ ಕೇರ್ ಅಭ್ಯಾಸ ತ್ವಚೆಯು ಪ್ರತಿದಿನ ಬೆಳಿಗ್ಗೆ ಹೇಗೆ ಕಾಣುತ್ತದೆ ಮತ್ತು ಫೀಲ್ ಆಗುತ್ತದೆ ಎಂಬುದರ ಮೇಲೆ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ರಾತ್ರಿ ವೇಳೆ ತ್ವಚೆಯ ಕುರಿತಾಗಿ ಕೆಲವೊಂದು ಜಾಗರೂಕತೆ ವಹಿಸದಿದ್ದರೆ ಅದರಿಂದ ಅಡ್ಡ ಪರಿಣಾಮ ಬೀರಬಹುದು. ರಾತ್ರಿ ಯಾವ ರೀತಿಯ ತ್ವಚೆಯ ಕೇರ್ ತೆಗೆದುಕೊಳ್ಳಬೇಕು. ಕೆಲವು ಸಲಹೆಗಳು ಇಲ್ಲಿವೆ...
ಮುಖವನ್ನು ಸ್ವಚ್ಛಗೊಳಿಸಿ
ಪ್ರತಿ ರಾತ್ರಿ, ಮುಖವನ್ನು ಸ್ವಚ್ಛಗೊಳಿಸುವುದು ಮೊದಲ ಹೆಜ್ಜೆ. ಇದು ಮೊಡವೆಯ ಬ್ಯಾಕ್ಟೀರಿಯಾಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ತ್ವಚೆಯ ಆರೋಗ್ಯವೂ ಹೆಚ್ಚುತ್ತದೆ.
ಸಂಜೆ ಮುಖ ತೊಳೆಯಿರಿ.
ರಾತ್ರಿ ವೇಳೆ ಚರ್ಮವನ್ನು ತೊಳೆಯುವುದು ತುಂಬಾ ಆಯಾಸವೇ? ಬದಲಿಗೆ ಸಂಜೆ ಬೇಗ ಮಾಡಿ. ರಾತ್ರಿ ವೇಳೆ ಸ್ಕಿನ್ ಕೇರ್ ಉತ್ಪನ್ನಗಳನ್ನು ದೂರ ಮಾಡಿ, ಮುಖವನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ.
ಮಾಯಿಶ್ಚರೈಸರ್ ಮಾಡಿ
ಮುಖವನ್ನು ಖಾಲಿ ಬಿಟ್ಟಾಗ, ಚರ್ಮದ ತೇವಾಂಶ ಆವಿಯಾಗಿ ಒಣ ಚರ್ಮದ ಕೋಶ ರಚನೆಯಾಗುತ್ತದೆ. ಇದರಿಂದ ಚರ್ಮವು ಮಂಕು ಮತ್ತು ಆಯಾಸದಿಂದ ಕೂಡಿರುವಂತೆ ಮಾಡುತ್ತದೆ. ಆದುದರಿಂದ ಮಾಯಿಶ್ಚರೈಸ್ ಮಾಡುವುದನ್ನು ತಪ್ಪಿಸಬೇಡಿ.
ಎಕ್ಸ್ ಫೋಲಿಯೇಟ್ ಮಾಡಿ
ರಾತ್ರಿ ಚರ್ಮವು ವಿಶ್ರಾಂತಿಯಲ್ಲಿದ್ದಾಗ ಎಕ್ಸ್ ಫೋಲಿಯೇಟ್ ಮಾಡುವ ವಸ್ತುಗಳನ್ನು ಬಳಸಬೇಕು. ಇದರಿಂದ ಚರ್ಮ ಉತ್ತಮವಾಗಿರುತ್ತದೆ
ತಲೆಯನ್ನು ಎತ್ತರಿಸಿ ಮಲಗಿ
ಎರಡು ದಿಂಬುಗಳ ಮೇಲೆ ಮಲಗುವ ಮೂಲಕ ತಲೆಯನ್ನು ಎತ್ತರದಲ್ಲಿಟ್ಟು ಮಲಗುವುದರಿಂದ ಕಣ್ಣಿನ ಕೆಳಗೆ ಉಂಟಾಗುವಂತಹ ಉಬ್ಬು ಕಡಿಮೆಯಾಗುತ್ತದೆ. ಇದು ಕಣ್ಣಿನ ಭಾಗದಲ್ಲಿ ದ್ರವಧಾರಣೆಯನ್ನು ಕಡಿಮೆ ಮಾಡುತ್ತದೆ, ಅಂದರೆ ಕಣ್ಣುಗಳು ಬೆಳಿಗ್ಗೆ ಕಡಿಮೆ ಉಬ್ಬಿರುತ್ತದೆ.
ತಲೆದಿಂಬುಗಳನ್ನು ಬದಲಿಸಿ
ಮಲಗಿದಾಗ ಬ್ಯಾಕ್ಟೀರಿಯಾ ಮತ್ತು ಎಣ್ಣೆಯು ಚರ್ಮಕ್ಕೆ ಮತ್ತೆ ಮತ್ತೆ ಅಂಟಿಕೊಂಡು ಸ್ಕಿನ್ ಸಮಸ್ಯೆ ಎದುರಿಸಬಹುದು. ಅದರಲ್ಲೂ ಮೊಡವೆ ಇರುವವರು, ತಾಜಾ, ಸ್ವಚ್ಛವಾದ ದಿಂಬಿನ ಮೇಲೆ ಮಲಗುವುದು ಯಾವಾಗಲೂ ಉತ್ತಮ.
ಮಕ್ಕಳ ಮೃದುವಾದ ಬಟ್ಟೆ ಬಳಸಿ
ಮೃದುವಾದ ಕ್ಲೆನ್ಸಿಂಗ್ ಅನುಭವಕ್ಕಾಗಿ, ಮಕ್ಕಳ ವೈಪರ್ ಬಳಸಿ. ಚರ್ಮವು ಸೂಕ್ಷ್ಮಸಂವೇದಿಯಾಗಿರದಿದ್ದರೂ, ಅದನ್ನು ಮೃದುವಾಗಿ ಉಪಚರಿಸುವುದು ಯಾವಾಗಲೂ ಉತ್ತಮ.
ಕಣ್ಣಿನ ಕ್ರೀಮ್ ಅನ್ನು ತುಂಬಾ ಹತ್ತಿರ ಹಚ್ಚಬೇಡಿ
ಲ್ಯಾಶ್ ಲೈನ್‌ಗೆ ತುಂಬಾ ಹತ್ತಿರವಿರುವ ಐ ಕ್ರೀಮ್ ಅನ್ನು ಹಚ್ಚದಿರುವುದು ಬಹಳ ಮುಖ್ಯ, ಏಕೆಂದರೆ ಅದು ಅಂತಿಮವಾಗಿ ಕಣ್ಣುಗಳಲ್ಲಿ ಕೊನೆಗೊಳ್ಳಬಹುದು. ಇದು ಅನಗತ್ಯ ಕಿರಿಕಿರಿಯನ್ನು ಉಂಟುಮಾಡಬಹುದು.
ಬ್ಯೂಟಿ ಸ್ಲೀಪ್
ಚರ್ಮವು ಕಾಂತಿಯುತವಾಗಿರಬೇಕಾದರೆ, ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿ. ಇದನ್ನು ಸೌಂದರ್ಯ ನಿದ್ರೆ ಎಂದೂ ಕರೆಯುತ್ತಾರೆ. ನಿದ್ದೆಯ ಕೊರತೆ ಚರ್ಮ ಮಂಕಾಗಿ ಮತ್ತು ಕಾಂತಿಯ ಕೊರತೆ ಉಂಟಾದಂತೆ ಕಾಣಿಸಬಹುದು.