ಅಂದ ಹೆಚ್ಚಿಸಲು ಖರ್ಚು ಮಾಡ್ಬೇಡಿ, ಮನೆಯಲ್ಲಿಯೇ ಸ್ಪಾ ಮಾಡ್ಕೊಳ್ಳಿ
ಸಾಂಕ್ರಾಮಿಕ ರೋಗದಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿ ಕಳೆದರೂ ಜನರು ಬಿಡುವಿಲ್ಲದ ಕೆಲಸ, ಕಠಿಣ ದಿನಚರಿಗಳನ್ನು ಹೊಂದಿದ್ದಾರೆ. ಈ ಎಲ್ಲದರ ನಡುವೆ ತ್ವಚೆ ಮತ್ತು ಕೂದಲಿನ ಆರೈಕೆ ಮಾಡಬೇಕು. ಹಾಗಾಗಿ, ತ್ವಚೆ ಮತ್ತು ಕೂದಲನ್ನು ಆರೈಕೆ ಮಾಡಲು ನೀವೇ ಮನೆಯಲ್ಲೇ ಮಾಡಬಹುದಾದ ಸ್ಪಾ ರಹಸ್ಯಗಳನ್ನು ನೀಡುತ್ತಿದ್ದೇವೆ. ಇದು ದುಬಾರಿಯಾಗಬೇಕಾಗಿಲ್ಲ, ನೀವು ಅದಕ್ಕೆ ಸಮರ್ಪಿತರಾಗಿರಬೇಕು. ಮಾಡಿದರೆ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೋಗ್ಯವು ಹೇಗೆ ಉತ್ತಮವಾಗಿರುತ್ತದೆ ಎಂಬುದನ್ನು ನೀವು ನೋಡಬಹುದು.
ಹೇರ್ ಸ್ಪಾ
ನಿಮ್ಮ ಕೂದಲನ್ನು ಮಾಯಿಶ್ಚರೈಸ್ ಮಾಡಲು ಅತ್ಯುತ್ತಮ ವಿಧಾನವೆಂದರೆ ಹಾಲಿನ ಹೇರ್ ಬಾತ್ ಅನ್ನು ತೆಗೆದುಕೊಳ್ಳುವುದು. ನಂತರ ಹಾಲಿನಲ್ಲಿ ಕೂದಲನ್ನು 10-15 ನಿಮಿಷ ನೆನೆಸಿಡಿ.
ಸ್ಟೀಮರ್ ಅನ್ನು ಆನ್ ಮಾಡಿ ಮತ್ತು ನಂತರ ಕಂಡೀಷನರ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದನ್ನು ತಣ್ಣೀರಿನಿಂದ ತೊಳೆಯಿರಿ. ಈ ವಿಧಾನ ಕೂದಲನ್ನು ಮೃದುಗೊಳಿಸುತ್ತದೆ. ಕೂದಲು ಮೃದುವಾಗಿದ್ದು ನಿಮಗೇ ಗೊತ್ತಾಗುತ್ತೆ.
ಎಣ್ಣೆ ತ್ವಚೆಗಾಗಿ ಫೇಸ್ ಸ್ಪಾ
ಎಣ್ಣೆತ್ವಚೆ ಹೊಂದಿರುವವರು ನೀವಾಗಿದ್ದರೆ, ಮಣ್ಣಿನ ಮಾಸ್ಕ್ ನಿಮಗೆ ಅತ್ಯುತ್ತಮ. ಕಾಫಿ, ಮುಲ್ತಾನಿ ಮಿಟ್ಟಿ ಮತ್ತು ಸ್ವಲ್ಪ ಜೇನುತುಪ್ಪ ಬೆರೆಸಿ ಮನೆಯಲ್ಲಿ ಮಣ್ಣಿನ ಪ್ಯಾಕ್ ತಯಾರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.
5-7 ನಿಮಿಷಗಳ ಕಾಲ ನಿಮ್ಮ ಮುಖವನ್ನು ಹಬೆಯಲ್ಲಿಟ್ಟು, ನಂತರ ಚೆನ್ನಾಗಿ ಕ್ಲೆನ್ಸರ್‌ನಿಂದ ತೊಳೆಯಿರಿ. ಈ ಮಾಸ್ಕ್ ನಲ್ಲಿ ಉತ್ಕರ್ಷಣ ನಿರೋಧಕಗಳು ಇದೆ, ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
ಒಣ ತ್ವಚೆಗಾಗಿ ಫೇಸ್ ಸ್ಪಾ
ಒಣ ಚರ್ಮ ಹೊಂದಿರುವವರು ಮುಖಕ್ಕೆ ಅಲೋವೆರಾವನ್ನು ಬಳಸಬೇಕು. ಸ್ವಲ್ಪ ಅಲೋವೆರಾ ಜೆಲ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹಬೆಯನ್ನು ತೆಗೆದುಕೊಂಡು 10 ನಿಮಿಷ ಆರಲು ಬಿಡಿ.
ಅಲೋವೆರಾ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಜೇನುತುಪ್ಪ ಮುಖವನ್ನು ಮೃದುವಾಗುವಂತೆ ಮಾಡುತ್ತದೆ. ಜೊತೆಗೆ ಇವೆರಡು ಸೇರಿದರೆ ಮುಖ ಸ್ವಚ್ಛವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಶುಷ್ಕ ತ್ವಚೆಗಾಗಿ ಬಾಡಿ ಸ್ಪಾ
ನಿಮ್ಮದು ಶುಷ್ಕ ತ್ವಚೆಯಾಗಿದ್ದರೆ, ಚಳಿಗಾಲದಲ್ಲಿ ಇದರಿಂದ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಂತ ನೀವು ಹೆಚ್ಚು ತಲೆ ಬಿಸಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಶುಷ್ಕ ತ್ವಚೆಯ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟ್ರಿಕ್.
ನಿಮಗೆ ಸ್ವಲ್ಪ ಸಮುದ್ರ ಉಪ್ಪು ಅಥವಾ ಸ್ನಾನದ ಉಪ್ಪು ಬೇಕು ಮತ್ತು ಸ್ಕ್ರಬ್ ಮಾಡಲು ಕ್ಲೆನ್ಸರ್ ಅಥವಾ ಬಾಡಿ ಲೋಷನ್ ನೊಂದಿಗೆ ಮಿಶ್ರಣ ಮಾಡಿ. ಈ ಸ್ಕ್ರಬ್ ಬಳಸಿ ದೇಹಕ್ಕೆ ಮಸಾಜ್ ಮಾಡಿದ ನಂತರ ಸ್ನಾನ ಮಾಡಿ ಮತ್ತು ನಂತರ ಒಳ್ಳೆಯ ಬಾಡಿ ಲೋಷನ್ ಬಳಸಿ.
ಎಣ್ಣೆ ತ್ವಚೆಗಾಗಿ ಬಾಡಿ ಸ್ಪಾ
ಎಣ್ಣೆ ಚರ್ಮದವರು ಕ್ಲೆನ್ಸರ್ ಅಥವಾ ಬಾಡಿ ಲೋಷನ್ ರೂಪದಲ್ಲಿ ಸಕ್ಕರೆಯನ್ನು ಬಳಸಬೇಕು. ಈ ಸ್ಕ್ರಬ್ ಅನ್ನು ದೇಹಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಚೆನ್ನಾಗಿ ಸ್ನಾನ ಮಾಡಿ. ನಂತರ ಮಾಯಿಶ್ಚರೈಸರ್ ಅನ್ನು ಬಳಸಿ. ಸಕ್ಕರೆ ಕಣಗಳು ದಪ್ಪವಾಗಿದ್ದು ಎಣ್ಣೆಯ ಚರ್ಮದ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ.