ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚೋದು ಕಾಮನ್, ಸಿಕ್ಕಾಪಟ್ಟೆ ಹೆಚ್ಚಿದರೆ ಅಪಾಯ
ಹೊಸ ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ ತಾಯಿ ಬೊಜ್ಜು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯ. ದಿ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚುವರಿ ತೂಕವು ಪ್ಲಾಸೆಂಟಾದ ರಚನೆಯನ್ನು ಬದಲಾಯಿಸುತ್ತೆ. ಪ್ಲಾಸೆಂಟಾ ತಾಯಿಯ ಗರ್ಭದಲ್ಲಿರುವ ಮಗುವನ್ನು ಪೋಷಿಸುವ ಪ್ರಮುಖ ಅಂಗವಾಗಿದೆ. ಹೆಚ್ಚು ತಿಳಿಯಲು ಈ ಸ್ಟೋರಿ ಓದಿ.

ಗರ್ಭಾವಸ್ಥೆಯಲ್ಲಿ(Pregnancy) ಸ್ಥೂಲಕಾಯತೆ ಮತ್ತು ಗರ್ಭಾವಸ್ಥೆಯ ಮಧುಮೇಹ, ಕಳಪೆ ಗ್ಲೂಕೋಸ್ ವಿಶ್ವಾದ್ಯಂತ ಹೆಚ್ಚುತ್ತಿದೆ. ಇವೆರಡೂ ಭ್ರೂಣದ ಸಾವು, ಮಗು ಮೃತ ಜನಿಸೋದು, ಜನನದ ನಂತರ ಶಿಶು ಮರಣದಂತಹ ಅನೇಕ ತಾಯಿ ಮತ್ತು ಭ್ರೂಣದ ತೊಡಕುಗಳೊಂದಿಗೆ ಸಂಬಂಧ ಹೊಂದಿದ್ದರೂ - ಈ ತೊಡಕುಗಳು ಹೇಗೆ ಉದ್ಭವಿಸುತ್ತವೆ ಎಂಬುದು ಇನ್ನೂ ತಿಳಿದಿಲ್ಲ.
ತಾಯಿಯ ಸ್ಥೂಲಕಾಯತೆಯು ಪ್ಲಾಸೆಂಟಾ (Placenta) ರಚನೆ, ಅದರ ರಕ್ತನಾಳದ ಸಾಂದ್ರತೆ ಮತ್ತು ಮೇಲ್ಮೈ ಪ್ರದೇಶ ಮತ್ತು ತಾಯಿ ಮತ್ತು ಮಗುವಿನ ನಡುವೆ ಪೋಷಕಾಂಶಗಳನ್ನು ವಿನಿಮಯ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತೆ ಎಂದು ಅಧ್ಯಯನವು ಈಗ ತೋರಿಸಿದೆ.
ಸ್ಥೂಲಕಾಯತೆ ಮತ್ತು ಗರ್ಭಾವಸ್ಥೆಯ ಮಧುಮೇಹ (Diabetes) ಎರಡೂ ಪ್ಲಾಸೆಂಟಾ ಹಾರ್ಮೋನುಗಳು ಮತ್ತು ಉರಿಯೂತದ ಗುರುತುಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ, ಇದು ಪ್ಲಾಸೆಂಟಾ ಅಸಹಜವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತೆ.
ಸ್ಥೂಲಕಾಯತೆ (Obesity) ಮತ್ತು ಗರ್ಭಾವಸ್ಥೆ ಮಧುಮೇಹ ಹೆಚ್ಚಾಗಿ ಒಟ್ಟಿಗೆ ಸಂಭವಿಸೋದರಿಂದ, ಈ ಸ್ಟಡಿ ಗರ್ಭಧಾರಣೆ ಸಮಯದಲ್ಲಿ ಮಧುಮೇಹವನ್ನು ಬದಲಾಯಿಸುವ ತಾಯಿಯ ಸ್ಥೂಲಕಾಯತೆಯ ಮಹತ್ವ ಎತ್ತಿ ತೋರಿಸುತ್ತವೆ. ಪ್ಲಾಸೆಂಟಾ ಬದಲಾವಣೆಗಳು ತೊಡಕುಗಳನ್ನು ಹೇಗೆ ವಿವರಿಸಬಹುದು ಎಂಬುದನ್ನು ಇದು ತೋರಿಸುತ್ತೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಪ್ಲಾಸೆಂಟಾದಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ಗುರುತಿಸೋದು ಭವಿಷ್ಯದಲ್ಲಿ ಪ್ಲಾಸೆಂಟಾ-ಉದ್ದೇಶಿತ ಚಿಕಿತ್ಸೆ ಅಥವಾ ಸ್ಕ್ರೀನಿಂಗ್ ಪರೀಕ್ಷೆಗಳ(Screening test) ಸಂಭಾವ್ಯ ಅಭಿವೃದ್ಧಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.
ಗರ್ಭಾವಸ್ಥೆಯಲ್ಲಿ ಸ್ಥೂಲಕಾಯತೆ ಹೆಚ್ಚಾಗೋದ್ರಿಂದ ಅಧಿಕ ರಕ್ತದೊತ್ತಡ (High blood pressure), ಮಧುಮೇಹ, ಪ್ರಿಕ್ಲಾಂಪ್ಸಿಯಾ, ಭ್ರೂಣದ ಮ್ಯಾಕ್ರೋಸೋಮಿಯಾ, ಸಿಸೇರಿಯನ್ ಹೆರಿಗೆ, ಗಾಯದ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಅತಿಯಾದ ತೂಕದಿಂದಾಗಿ ಗರ್ಭಿಣಿ ಅಧಿಕ ತೂಕದ ಮಹಿಳೆಯರು ಗರ್ಭಪಾತದ ಅಪಾಯದಲ್ಲಿದ್ದಾರೆ. ನಿಮ್ಮ ಬಿಎಂಐ 30 ಕ್ಕಿಂತ ಹೆಚ್ಚಿದ್ದರೆ, ನೀವು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿರುವ ಚಾನ್ಸಸ್ ಕೂಡ ಇದೆ ಎಂದು ಹೇಳಲಾಗುತ್ತೆ.
ಗರ್ಭಾವಸ್ಥೆಯಲ್ಲಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಈ ಸಲಹೆ ಅನುಸರಿಸಿ :
ನಿಮ್ಮ ಆಹಾರ ಪದ್ಧತಿಯನ್ನು ನೀವು ತಕ್ಷಣ ಬದಲಾಯಿಸಲು ಸಾಧ್ಯವಿಲ್ಲ, ಆದರೆ ನೀವು ತಿನ್ನುವ ಆಹಾರದ ಪ್ರಮಾಣವನ್ನು ನೀವು ನಿಯಂತ್ರಿಸಬಹುದು.
ಸಾಮಾನ್ಯ ಅಡುಗೆ ಎಣ್ಣೆ ಬದಲು ಆಲಿವ್ ಎಣ್ಣೆ(Olive oil) ಅಥವಾ ಕಡಿಮೆ ಕೊಬ್ಬಿನ ಬೆಣ್ಣೆಯನ್ನು ಬಳಸಿ. ಅಧಿಕ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮೈದಾ ಮತ್ತು ಸಕ್ಕರೆಯ ಬದಲು ಸಂಪೂರ್ಣ ಗೋಧಿ ಬ್ರೆಡ್ ಮತ್ತು ಹಣ್ಣುಗಳನ್ನು ಸೇವಿಸಿ.
ಅಡುಗೆ ಮಾಡುವಾಗ ಸ್ವಲ್ಪ ಉಪ್ಪನ್ನು ಸೇರಿಸಿ. ದೇಹವನ್ನು ಹೈಡ್ರೇಟ್(Hydrate) ಆಗಿಡಲು, ಹೆಚ್ಚು ನೀರು ಮತ್ತು ಹಣ್ಣಿನ ರಸಗಳನ್ನು ಸೇವಿಸಿ.
ಮಸಾಲೆಯುಕ್ತ ವಸ್ತುಗಳನ್ನು ತಿನ್ನಬೇಡಿ ಏಕೆಂದರೆ ಅದು ಹೊಟ್ಟೆಯನ್ನು ಹಾಳುಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.