ತೆಂಗಿನ ಚಿಪ್ಪಿಂದಲೇ ತಿಂಗಳಿಗೆ ಲಕ್ಷಾಂತರ ಸಂಪಾದಿಸ್ತಾರೆ ಕೇರಳದ ಈ ಹುಡುಗಿ!
ಸಾಧನೆ ಮಾಡುವ ಛಲ ಒಂದಿದ್ದರೆ ಸಾಕು, ಏನು ಬೇಕಾದರೂ ಮಾಡಬಹುದು ಅಲ್ವಾ? ಅಂತಹ ಒಂದು ಸಾಧನೆಗೆ ಉದಾಹರಣೆ ಮಾರಿಯಾ ಕುರಿಯಾಕೋಸ್. ತೆಂಗಿನ ಚಿಪ್ಪಿನಿಂದ ಆರಂಭಿಸಿದ ವ್ಯಾಪಾರ ಈಗ ತಿಂಗಳಿಗೆ 7 ಲಕ್ಷ ಆದಾಯ ನೀಡುತ್ತೆ.
ಏನಾದರೂ ಸಾಧಿಸುವ ಛಲವಿದ್ದರೆ, ಹುಲ್ಲು ಕಡ್ಡಿಯಿಂದ ಸಹ ಗುಡ್ಡ ಮಾಡಬಹುದಂತೆ. ದೊಡ್ಡ ದೊಡ್ಡ ಕಂಪನಿಗಳಲ್ಲೇ ಕೆಲಸ ಮಾಡುವ ಮೂಲಕ ಹಣ ಸಂಪಾದಿಸಲು ಸಾಧ್ಯ ಎನ್ನುವುದು ನಿಜವಲ್ಲ. ತಮ್ಮ ಕನಸಿನ ಯಾವುದೋ ಒಂದು ಕೆಲಸ ಮಾಡಲು ಪಣ ತೊಟ್ಟು ಅದನ್ನು ಸಾಕಾರ ಮಾಡ ಹೊರಟರೆ, ಆ ಕೆಲಸದಲ್ಲಿ ಯಶಸ್ಸು, ಸಂಪಾದನೆ ಎಲ್ಲವೂ ಸಾಧ್ಯವಾಗುತ್ತೆ.
ಛಲಕ್ಕೆ ಉತ್ತಮ ಉದಾಹರಣೆಯೆಂದರೆ ಕೇರಳ ಮರಿಯಾ ಕುರಿಯಾಕೋಸ್. ಇವರು ತೆಂಗಿನ ಚಿಪ್ಪಿನಿಂದ (coconut shell) ಇದೀಗ ತಿಂಗಳಿಗೆ 7-8 ಲಕ್ಷ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇವರ ಯಶೋಗಾಥೆಯನ್ನು ನೀವು ಕೇಳಿದ್ರೆ, ಖಂಡಿತವಾಗಿಯೂ ಇಂಪ್ರೆಸ್ ಆಗೋದು ಗ್ಯಾರಂಟಿ.
ಕಾಯಿ ಉಪಯೋಗಿಸಿದ ಮೇಲೆ ಯಾರಿಂಗೂ ಬೇಡವೆಂದು ಬಿಸಾಕಿತ್ತೇವೆ. ಆದರೆ ಅದರಿಂದ ಲಾಭ ಪಡೆಯಲು ಸಾಧ್ಯ ಎಂದು ಸ್ಥಾಪಿಸಲಾದ ಸಂಸ್ಥೆಯೇ ಥೇಂಗಾ ಕೋಕೋ. ಥೆಂಗಾ ಕೋಕೋವನ್ನು ಆಗಸ್ಟ್ 2019 ರಲ್ಲಿ ಮರಿಯಾ ಕುರಿಯಾಕೋಸ್ (Maria Kuriakose) ಸ್ಥಾಪಿಸಿದರು. ಅವರು ಮೂಲತಃ ಕೇರಳದವರು, ಆದರೆ ಉನ್ನತ ಶಿಕ್ಷಣ ಮತ್ತು ಕೆಲಸಕ್ಕಾಗಿ ಮುಂಬೈಗೆ ವಲಸೆ ಬಂದರು. ಅವರು ಅಲ್ಲಿ ಕೆಲಸ ಮಾಡುತ್ತಿದ್ದಾಗ, ತಮ್ಮ ಊರಿಗೆ ಮರಳಲು ಮತ್ತು ಕೇರಳದ ಕೃಷಿ ಕ್ಷೇತ್ರ ಬೆಂಬಲಿಸುವ ವ್ಯವಹಾರವನ್ನು ಪ್ರಾರಂಭಿಸಲು ಏನಾದರೂ ಮಾಡಬೇಕೆಂದು ಯೋಚಿಸಿದರು.
ತೆಂಗಿನಕಾಯಿ ಕೇರಳದ ಪ್ರಮುಖ ಕೃಷಿ ಬೆಳೆಯಾಗಿರುವುದರಿಂದ ಮತ್ತು ರಾಜ್ಯಕ್ಕೆ ತೆಂಗಿನಕಾಯಿಗಳ (land of coconut) ನಾಡು ಎಂದೇ ಕರೆಯೋದರಿಂದ ಅದರಿಂದ ಏನಾದರು ಮಾಡಬೇಕೆಂದು ಯೋಚಿಸಿದರು. ಅದಕ್ಕಾಗಿಯೇ ಈ (Thenga coco) ಸಂಸ್ಥೆ ಸ್ಥಾಪಿಸಲಾಯಿತು.
ಕೇರಳದ ತ್ರಿಶೂರ್‌ನಲ್ಲಿ ಮಾರಿಯಾ ಕುರಿಯಾಕೋಸ್ 2019ರಲ್ಲಿ ಸ್ಥಾಪಿಸಿದ ಥೆಂಗಾ ಕೊಕೊ (Thenga Coco) ಎಂಬ ಸ್ಟಾರ್ಟ್ಅಪ್, ಎಸೆಯಲ್ಪಟ್ಟ ತೆಂಗಿನ ಚಿಪ್ಪುಗಳಿಂದ ಪರಿಸರ ಸ್ನೇಹಿ ದೈನಂದಿನ ಉತ್ಪನ್ನಗಳು ಮತ್ತು ಆಭರಣಗಳನ್ನು ರಚಿಸಲು ಸಮರ್ಪಿತವಾಗಿದೆ. ಸಂಸ್ಕರಣಾ ಘಟಕದಲ್ಲಿ ತೆಂಗಿನ ಚಿಪ್ಪುಗಳನ್ನು ಸುಡುವುದನ್ನು ಅಥವಾ ಎಸೆಯುವುದನ್ನು ನೋಡಿದ ನಂತರ ಅವರು ತೆಂಗಿನ ಚಿಪ್ಪಿನಿಂದ ಏನಾದರೂ ಮಾಡಬೇಕೆಂಬ ಆಲೋಚಿಸಿದರು.
ತೆಂಗಿನ ಹೊಟ್ಟು ಮತ್ತು ಚಿಪ್ಪುಗಳ ನವೀನ ಉಪಯೋಗಗಳನ್ನು ಕಂಡು ಹಿಡಿಯುವುದು ಅವರ ದೃಷ್ಟಿಕೋನವಾಗಿತ್ತು, ಅವುಗಳನ್ನು ಪ್ರಾಥಮಿಕವಾಗಿ ದುಬಾರಿ ಕರಕುಶಲ ವಸ್ತುಗಳಾಗಿ ಪರಿವರ್ತಿಸಲಾಯಿತು, ಅವುಗಳನ್ನು ಮಾಡಲು ಹೆಚ್ಚಿನ ಶ್ರಮ ವಹಿಸಬೇಕಾದುದರಿಂದ ನುರಿತ ಕುಶಲಕರ್ಮಿಗಳ ಅಗತ್ಯವಿತ್ತು. ಕಪ್ ಗಳು, ಸಾಸರ್ ಗಳು, ಸಾಬೂನು ಹೋಲ್ಡರ್ ಮತ್ತು ಕಟ್ಲರಿಗಳಂತಹ ಪ್ರಾಯೋಗಿಕ ವಸ್ತುಗಳ ಮೇಲೆ ಕೇಂದ್ರೀಕರಿಸಲು ಮರಿಯಾ ನಿರ್ಧರಿಸಿದರು.
ಪ್ರಾರಂಭವಾದ ವರ್ಷಗಳಿಂದ ಮಾರಿಯಾ ಅವರ ಪರಿಸರ ಪ್ರಜ್ಞೆಯ ಸ್ಟಾರ್ಟ್ಅಪ್ ಥೆಂಗಾ ಕೊಕೊ ಈಗ ಪ್ರತಿ ತಿಂಗಳು 4,000 ರಿಂದ 5,000 ತೆಂಗಿನ ಚಿಪ್ಪು ಉತ್ಪನ್ನಗಳನ್ನು ಮಾರುತ್ತವೆ. ಇದು ಸುಮಾರು 7-8 ಲಕ್ಷ ರೂ.ಗಳ ಆದಾಯ ಗಳಿಸುತ್ತದೆ ಎಂದು ಇಂಡಿಯಾ ಟೈಮ್ಸ್ ನ್ಯೂಸ್ ವರದಿ ಮಾಡಿದೆ.
ಪರಿಸರ ಸ್ನೇಹಿ ಮತ್ತು ಸುಸ್ಥಿರ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಗುರಿಯನ್ನು ಮರಿಯಾ ಹೊಂದಿದ್ದಾರೆ, ಮತ್ತು ಹೆಚ್ಚುತ್ತಿರುವ ಪರಿಸರ ಜಾಗೃತಿ ಮತ್ತು ಸುಸ್ಥಿರತೆಯಿಂದಾಗಿ ಈ ವಸ್ತುಗಳ ಬೇಡಿಕೆ ಭವಿಷ್ಯದಲ್ಲಿ ಹೆಚ್ಚಲಿದೆ. ಥೆಂಗಾ ಕೊಕೊ ತನ್ನ ಪರಿಸರ ಸ್ನೇಹಿ (eco friendly) ಕೊಡುಗೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಉತ್ಪನ್ನ ಶ್ರೇಣಿ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ.