ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ!
9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ ಘಟನೆಯೊಂದು ವರದಿಯಾಗಿದೆ. ಹಲಿಮಾ ಸಿಸ್ಸೆ ಎಂಬ ಮಹಿಳೆ ಮೇ ತಿಂಗಳಲ್ಲಿ ಮೊರೊಕನ್ ಆಸ್ಪತ್ರೆಯಲ್ಲಿ ಈ ಶಿಶುಗಳಿಗೆ ಜನ್ಮ ನೀಡಿದರು. ಇದು ಮಾಲಿ ಎಂಬ ದಕ್ಷಿಣ ಅಫ್ರಿಕಾದ ಮಹಿಳೆ ಒಂದೇ ಬಾರಿಗೆ ಅತಿ ಹೆಚ್ಚು ಮಕ್ಕಳನ್ನು ಜನ್ಮ ನೀಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.
ಮೇ ತಿಂಗಳಲ್ಲಿ ಜನಿಸಿದ ಮಕ್ಕಳು ಇನ್ನೂ ಎರಡು ತಿಂಗಳು ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಮಕ್ಕಳು ಹುಟ್ಟಿದ ಸಮಯದಲ್ಲಿ ಹಲೀಮಾಳ ಸಹೋದರಿ ಆಯೆಷಾ ತುಂಬಾ ಬೆಂಬಲ ನೀಡಿದ್ದರು. ಏಕೆಂದರೆ ಆಕೆಯ ಪತಿ ಕಾದರ್ ಅರ್ಬಿ ಲಾಕ್‌ಡೌನ್‌ನಿಂದಾಗಿ ಮನೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. 2017 ರಲ್ಲಿ ವಿವಾಹವಾದ ಹಲಿಮಾ ಸಿಸ್ಸೆಗೆ ಈಗಾಗಲೇ ಎರಡೂವರೆ ವರ್ಷದ ಮಗಳು ಇದ್ದಾಳೆ.
ಹಲೀಮಾರ ಎಲ್ಲ ಮಕ್ಕಳ ತೂಕ 500 ಗ್ರಾಂನಿಂದ 1 ಕಿಲೋಗ್ರಾಂ ವರೆಗೆ ಇದೆ. ನರ್ಸ್‌ಗಳು ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.
ಈ ವಿಷಯವನ್ನು ಪ್ರಕಟಿಸಿದ ಡೈಲಿ ಮೇಲ್ ಹಲೀಮಾ ಸಿಸ್ಸೆಗೆ (Halima Cisse) ತಾನು ಒಂಬತ್ತು ಮಕ್ಕಳ ತಾಯಿಯಾಗಲಿರುವ ವಿಷಯ ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ ಎಂದು ಹೇಳಿದೆ. ಎಲ್ಲಾ ಮಕ್ಕಳು ಸಿಸೇರಿಯನ್ ಮೂಲಕ ಜನಿಸಿದರು. ಈ ಬಗ್ಗೆ ಅವರಿಗೆ ಕೆಲವೇ ನಿಮಿಷಗಳ ಹಿಂದೆ ತಿಳಿಸಲಾಯಿತು.
ಹಲೀಮಾ ಮೇ 5 ರಂದು 9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡುವ ಮೂಲಕ ಹಳೆಯ ವಿಶ್ವ ದಾಖಲೆಯನ್ನು ಮುರಿದರು. ಈ ಮೊದಲು ದಾಖಲೆ 2009 ರಲ್ಲಿ8 ಮಕ್ಕಳಿಗೆ ಜನ್ಮನೀಡಿದ್ದ ನಾಡಿಯಾ ಸುಲ್ತಾನ್ ಹೆಸರಿನಲ್ಲಿತ್ತು.
ಹಲೀಮಾಳ ಸಿಸೇರಿಯನ್ ಆಪರೇಷನ್ ಮಾಡಿದ ವೈದ್ಯರು ಕೂಡ ಆಕೆ ಗರ್ಭದಲ್ಲಿ 9 ಮಕ್ಕಳನ್ನು ಹೊಂದಿದ್ದರು ಎಂದು ಕೊನೆಯ ಕ್ಷಣದಲ್ಲಿ ತಿಳಿದುಬಂದಿದೆ. ಮೊದಲು ಅವರು 7 ಎಂದು ಭಾವಿಸಿದ್ದರು ಎಂದು ಹೇಳಿದ್ದಾರೆ.
ಈ ಮಕ್ಕಳಿಗೆ ಪ್ರತಿದಿನ 100 ಡೈಪರ್ ಮತ್ತು ಆರು ಲೀಟರ್ ಹಾಲು ಬೇಕಾಗುತ್ತದೆ. ಮಕ್ಕಳನ್ನು ಬೆಳೆಸುವ ಬಗ್ಗೆ ಹಲೀಮಾ ಗಾಬರಿಯಾಗಿದ್ದಾರೆ. 9 ಮಕ್ಕಳನ್ನು ಹೇಗೆ ಬೆಳೆಸುವುದು ಎಂದು ಅವರಿಗೆ ದೊಡ್ಡ ತಲೆ ನೋವಾಗಿದೆ.
ಮಕ್ಕಳ ಆರೈಕೆಯ ವೆಚ್ಚವನ್ನು ಸದ್ಯಕ್ಕೆ ಮಾಲಿ ಸರ್ಕಾರ ಇನ್ನೂ ಭರಿಸುತ್ತಿದೆ. ಇಲ್ಲಿಯವರೆಗೆ ಭಾರತೀಯ ಕರೆನ್ಸಿಯ ಪ್ರಕಾರ 10 ಕೋಟಿ ರೂಪಾಯಿಗಳವರೆಗೆ ಇವುಗಳಿಗಾಗಿ ಖರ್ಚು ಮಾಡಲಾಗಿದೆ.