MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಮುಟ್ಟಿನ ಸಮಯದಲ್ಲಿ ಕಪ್ಪು ಡಿಸ್ಚಾರ್ಜ್: ಇದು ನಾರ್ಮಲ್ ಅಲ್ಲ… ಹುಷಾರಾಗಿರಿ!

ಮುಟ್ಟಿನ ಸಮಯದಲ್ಲಿ ಕಪ್ಪು ಡಿಸ್ಚಾರ್ಜ್: ಇದು ನಾರ್ಮಲ್ ಅಲ್ಲ… ಹುಷಾರಾಗಿರಿ!

ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಪಿರಿಯಡ್ಸ್ ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಒಂದು ವೇಳೆ ನಿಮಗೆ ಪಿರಿಯಡ್ಸ್ ಸಮಯದಲ್ಲಿ ಕಪ್ಪು ಬಣ್ಣದಲ್ಲಿ  ಬ್ಲೀಡಿಂಗ್ ಆಗುತ್ತಿದ್ದರೆ, ಅದನ್ನು ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯೋಣ. 

3 Min read
Pavna Das
Published : May 13 2024, 03:20 PM IST
Share this Photo Gallery
  • FB
  • TW
  • Linkdin
  • Whatsapp
19

ಪಿರಿಯಡ್ಸ್ ಸಮಯದಲ್ಲಿ (Periods) ಸೆಳೆತ, ಉಬ್ಬರ, ಹೆಚ್ಚಿನ ರಕ್ತಸ್ರಾವ ಮತ್ತು ರಕ್ತದ ಬಣ್ಣದಲ್ಲಿ ಬದಲಾವಣೆಗಳು ಸಾಮಾನ್ಯ. ಕೆಲವೊಮ್ಮೆ ಈ ಬಣ್ಣವು ತಿಳಿ ಕೆಂಪು, ಕೆಲವೊಮ್ಮೆ ಗಾಢ ಕೆಂಪು, ಕೆಲವೊಮ್ಮೆ ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಸಾಮಾನ್ಯವಾಗಿ, 12 ಮತ್ತು 14 ವರ್ಷಗಳ ನಡುವೆ ಪ್ರಾರಂಭವಾಗುವ ಋತುಚಕ್ರ ಮಹಿಳೆಯರು ಪ್ರತಿ ತಿಂಗಳು ಅನುಭವಿಸಬೇಕಾದ ಆರೋಗ್ಯ ಸ್ಥಿತಿ. ಋತುಚಕ್ರವು ಯೋನಿಯ ಮೂಲಕ ಗರ್ಭಾಶಯದ ಒಳಪದರದಿಂದ ಅಂಗಾಂಶಗಳು ಮತ್ತು ರಕ್ತವನ್ನು ಹೊರಹಾಕುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ.  ಒಂದು ವೇಳೆ ನಿಮಗೆ ಕಪ್ಪು ರಕ್ತಸ್ರಾವ ಆಗ್ತಿದ್ರೆ ಅದರ ಅರ್ಥವೇನು? ತಿಳಿಯೋಣ. 

29

ಮುಟ್ಟಿನ ರಕ್ತವು ಹೇಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ
ತಜ್ಞರು ತಿಳಿಸುವಂತೆ ಮುಟ್ಟಿನ ಸಮಯದಲ್ಲಿ, ರಕ್ತದ ಬಣ್ಣದಲ್ಲಿ ಬದಲಾವಣೆ ಆಗೋದು ಸಾಮಾನ್ಯ. ಇದು ಕೆಂಪು ಬಣ್ಣದಿಂದ ಗಾಢ ಕೆಂಪು, ಕಪ್ಪು ಮತ್ತು ಕಂದು ಬಣ್ಣದಲ್ಲಿಯೂ ರಕ್ತಸ್ರಾವ ಆಗುತ್ತೆ. ಆದರೆ ನಿಮಗೆ ಕಪ್ಪು ಬಣ್ಣದ ರಕ್ತಸ್ರಾವ ಆಗುತ್ತಿದ್ದರೆ, ಅದು ದಪ್ಪ ಇರೋದ್ರಿಂದ ಸ್ರಾವವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೆ, ಇದರಿಂದ ಅದು ಆಮ್ಲಜನಕದ ಸಂಪರ್ಕಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ, ಆಕ್ಸಿಡೀಕರಿಸಿದ ರಕ್ತದ ಬಣ್ಣವು ಗಾಢ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ (black discharge) ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

39

ಕಪ್ಪು ಮುಟ್ಟಿನ ರಕ್ತವು ಯಾವ ಸಮಸ್ಯೆಯ ಸೂಚನೆ? 
ಋತುಚಕ್ರದ ಸಮಯದಲ್ಲಿ ವಿವಿಧ ಸಮಯಗಳಲ್ಲಿ ಕಪ್ಪು ರಕ್ತ ವಿಸರ್ಜನೆ ಉಂಟಾಗುತ್ತೆ. ಕಪ್ಪು ರಕ್ತವು ಸಾಮಾನ್ಯವಾಗಿ ಕಡಿಮೆ ಬ್ಲೀಡಿಂಗ್ (Low Bleeding) ದಿನಗಳ ಆರಂಭದಲ್ಲಿ ಮತ್ತು ಕೊನೆಯಲ್ಲಿ ಕಂಡುಬರುತ್ತದೆ. ಇದಲ್ಲದೆ, ಪಿಐಡಿ ಅಂದರೆ ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್, ಎಸ್ಟಿಐ ಅಂದರೆ ಲೈಂಗಿಕ ಕಾಯಿಲೆ (Sexually Trasmitted Disease) ಮತ್ತು ಗರ್ಭಪಾತದ (Abortion) ನಂತರದ ಕಪ್ಪು ರಕ್ತಸ್ರಾವ ಉಂಟಾಗುವ ಸಾಧ್ಯತೆ ಇದೆ. 

49

ಕಪ್ಪು ಋತುಚಕ್ರ ಹೆಚ್ಚಾಗಲು ಕಾರಣವೇನು?
ಜೀವನಶೈಲಿಯಲ್ಲಿ ಸ್ವಲ್ಪ ಸುಧಾರಣೆ ಮತ್ತು ಸಮತೋಲಿತ ಆಹಾರದಿಂದ ಇದನ್ನು ಗುಣಪಡಿಸಬಹುದು. ಆದರೆ ಕಪ್ಪು ಋತುಸ್ರಾವ ಅಥವಾ ಜ್ವರ, ನೋವು ಅಥವಾ ದುರ್ವಾಸನೆಯಂತಹ ಯಾವುದೇ ರೋಗಲಕ್ಷಣಗಳೊಂದಿಗೆ ಹೆಚ್ಚು ಬ್ಲೀಡಿಂಗ್ (Bleeding) ಆಗುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. ಇದು ಗಂಭೀರ ಸೋಂಕಿನ ಸಂಕೇತವೂ ಆಗಿರಬಹುದು. ಜೊತೆಗೆ ಪಿರಿಯಡ್ಸ್ ಅಲ್ಲದೇ ಇತರ ದಿನಗಳಲ್ಲಿ ಗಾಢ ರಕ್ತಸ್ರಾವವಾಗುತ್ತಿದ್ದರೆ (heavy bleeding) ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳೋದು ಬೆಸ್ಟ್.

59

ಕಪ್ಪು ಋತುಚಕ್ರಕ್ಕೆ ಕೆಲವು ಸಾಮಾನ್ಯ ಕಾರಣಗಳು ಇಲ್ಲಿವೆ
ಗರ್ಭಪಾತ (Misscarriage)

ತಜ್ಞರ ಪ್ರಕಾರ, ಗರ್ಭಪಾತದ ನಂತರ, ಭ್ರೂಣದ ಅಂಗಾಂಶಗಳು ಮತ್ತು ಗರ್ಭಾಶಯದ ಒಳಪದರವನ್ನು ತೆಗೆದು ಹಾಕುವುದರಿಂದ ಕಪ್ಪು ಋತುಚಕ್ರವನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ, ರಕ್ತದ ಹರಿವು ಲೈಟ್ ಆಗಿರುತ್ತೆ, ಇನ್ನೂ ಕೆಲವೊಮ್ಮೆ ಹೆವಿ ಬ್ಲೀಡಿಂಗ್ (Heavy Bleeding) ಕೂಡ ಇರುತ್ತೆ. ಕಪ್ಪು ಋತುಚಕ್ರವು ಗರ್ಭಪಾತದ ಸಂಕೇತವೂ ಆಗಿದೆ.

69

ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕೆಳಭಾಗದಲ್ಲಿ ಅಂದರೆ ಗರ್ಭಾಶಯದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಕಪ್ಪು ರಕ್ತಸ್ರಾವ ಉಂಟಾಗುತ್ತೆ. ಸಾಮಾನ್ಯವಾಗಿ, ಲೈಂಗಿಕ ಕ್ರಿಯೆಯ ನಂತರ ಮತ್ತು ಮುಟ್ಟಿನ ಸಮಯದಲ್ಲಿ ಕಪ್ಪು ರಕ್ತ ವಿಸರ್ಜನೆಯು ಗರ್ಭಕಂಠದ ಕ್ಯಾನ್ಸರ್ (cervical cancer) ನ ಸಂಕೇತವಾಗಿರಬಹುದು. ಇದು ಆಯಾಸ, ಪೆಲ್ವಿಕ್ ನೋವು (Pelvic Pain) ಮತ್ತು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

79

ಋತುಚಕ್ರದ ಅಂತ್ಯ
ಋತುಚಕ್ರದ ಕೊನೆಯ ದಿನಗಳಲ್ಲಿ ಕಪ್ಪು ರಕ್ತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ, ದೀರ್ಘಕಾಲದವರೆಗೆ ಗರ್ಭಾಶಯದಲ್ಲಿ ರಕ್ತ ಉಳಿದುಕೊಂಡಿದ್ದರೆ, ಅದರ ಬಣ್ಣ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಕ್ತಸ್ರಾವದಲ್ಲಿ ಕಪ್ಪು ರಕ್ತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಋತುಚಕ್ರದ ಆರಂಭದಲ್ಲಿಯೂ ಕಪ್ಪು ವಿಸರ್ಜನೆ (Black Discharge) ಸಂಭವಿಸುತ್ತದೆ.

89

ಸೋಂಕಿನ ಅಪಾಯ (Infection)
ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು, ಹೆಚ್ಚಿದ ಪೆಲ್ವಿಕ್ ಒತ್ತಡ, ಕಲೆ ಮತ್ತು ಯೋನಿ ತುರಿಕೆ (vaginal itching) ಎಸ್ಟಿಐಗಳಿಂದಾಗಿ ಸಹ ಕಪ್ಪು ರಕ್ತಸ್ರಾವ ಉಂಟಾಗುತ್ತೆ. ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿರುವುದು ಪಿಐಡಿ ಅಂದರೆ ಪೆಲ್ವಿಕ್ ಉರಿಯೂತದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಗರ್ಭಕಂಠ ಮತ್ತು ಗರ್ಭಾಶಯವು ಸೋಂಕಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಾಢ ಕಂದು ಮತ್ತು ಕಪ್ಪು ಬಣ್ಣದ ಬ್ಲೀಡಿಂಗ್ ಸಾಮಾನ್ಯವಾಗಿದೆ. 

99

ಕಪ್ಪು ರಕ್ತಸ್ರಾವಕ್ಕೆ ಚಿಕಿತ್ಸೆ
ಕಪ್ಪು ಪಿರಿಯಡ್ಸ್  (black periods) ಉಂಟಾದಾಗ ಕೆಟ್ಟ ವಾಸನೆ, ತುರಿಕೆ, ಸೆಳೆತ ಮತ್ತು ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ, ಋತುಬಂಧದ ಸಮಯದಲ್ಲಿ ಮತ್ತು ಹೆರಿಗೆ ನಂತರ ಆಗಾಗ್ಗೆ ಕಪ್ಪು ರಕ್ತ ವಿಸರ್ಜನೆ ಉಂಟಾಗೋದನ್ನು ನಿರ್ಲಕ್ಷಿಸಬೇಡಿ. ಇದಲ್ಲದೆ, ಮುಟ್ಟಿನ ಸಮಯದಲ್ಲಿ ಕಪ್ಪು ವಿಸರ್ಜನೆಯ ಹೆಚ್ಚಳವು ಅನಿಯಮಿತ ಋತುಚಕ್ರದ ಸಮಸ್ಯೆಯನ್ನು ಹೆಚ್ಚಿಸುತ್ತದೆ.  ಹಾಗಾಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಋತುಚಕ್ರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved