ನೀತಾ ಅಂಬಾನಿ ಬಗ್ಗೆ ನಿಮಗೆ ತಿಳಿಯದೇ ಇರೋ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇವು!
ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷೆ ಮತ್ತು ಸ್ಥಾಪಕ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರಾಗಿರುವ ನೀತಾ ಅಂಬಾನಿ ಭಾರತದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿ ನಿಮಗೆ ತಿಳಿಯದೇ ಇರುವ ನೀತಾ ಅಂಬಾನಿಯವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ಪ್ರತಿಭಾನ್ವಿತ ಭರತನಾಟ್ಯ ನೃತ್ಯಗಾರ್ತಿ (Bharata Natya Dancer)
ನೀತಾ ಅಂಬಾನಿ ಒಬ್ಬ ಬ್ಯುಸಿನೆಸ್ ವುಮೆನ್ ಅನ್ನೋದು ಇಡೀ ಜಗತ್ತಿಗೆ ತಿಳಿದಿದೆ. ಆದರೆ ಅವರು ಚಿಕ್ಕವರಿದ್ದಾಗ ಶಾಸ್ತ್ರೀಯ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು ಅನ್ನೋದು ಗೊತ್ತಾ? ಇವರು ಹಲವಾರು ಭರತನಾಟ್ಯ ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ.
ಧೀರೂಭಾಯಿ ಅಂಬಾನಿ (Dheerubhai Ambani) ತಮ್ಮ ಕಾರ್ಯಕ್ರಮವೊಂದರಲ್ಲಿ ನೀತಾಳನ್ನು ನೋಡಿದ್ದರು. ಅಲ್ಲಿಯೇ ಅವರು ಈಕೆಯೇ ನಮ್ಮ ಮನೆ ಸೊಸೆ ಅನ್ನೋದನ್ನು ಯೋಚಿಸಿದ್ದರು. ಕಾರ್ಯಕ್ರಮದ ನಂತರ ಧೀರೂಭಾಯಿ ಅಂಬಾನಿ ಕರೆ ಮಾಡಿದಾಗ, ಯಾರೋ ತಮಾಷೆ ಮಾಡುತ್ತಿದ್ದಾರೆಂದು ಭಾವಿಸಿ ನೀತಾ 'ನೀವು ಧೀರೂಭಾಯಿ ಅಂಬಾನಿ ಆಗಿದ್ದರೆ ನಾನು ಎಲಿಜಬೆತ್ ಟೇಲರ್' ಎಂದು ಹೇಳಿ ಫೋನ್ ಡಿಸ್ ಕನೆಕ್ಟ್ ಮಾಡಿದ್ದರು. ನೀತಾ ತಂದೆ ಕರೆ ಸ್ವೀಕರಿಸಿದ ಬಳಿಕವೇ ಅವರಿಗೆ ನಿಜ ಗೊತ್ತಾಗಿದ್ದು, ನಂತರ ಧೀರು ಭಾಯಿ ಅಂಬಾನಿಯವರೇ ಆಕೆಯನ್ನು ಮನೆಗೆ ಕರೆಯಿಸಿ, ಮಗನನ್ನು ಭೇಟಿ ಮಾಡಿಸಿದ್ದರು.
ಮಧ್ಯಮ ವರ್ಗದ ಹೆಣ್ಣು (middle class woman)
ರವೀಂದ್ರಭಾಯಿ ದಲಾಲ್ ಮತ್ತು ಪೂರ್ಣಿಮಾ ದಲಾಲ್ ದಂಪತಿಗಳ ಮಗಳಾಗಿ ಮುಂಬೈನ ಮಧ್ಯಮ ವರ್ಗದ ಗುಜರಾತಿ ಕುಟುಂಬದಲ್ಲಿ ನೀತಾ ಜನಿಸಿದರು. ಇವರ ಸಹೋದರಿ ಇನ್ನೂ ಸಹ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಕಿಯಾಗಿದ್ದರು ನೀತಾ
ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಶಾಲಾ ಶಿಕ್ಷಕಿಯಾಗಿ (teacher) ಕೆಲಸ ಮಾಡುತ್ತಿದ್ದರು. ಅಷ್ಟೇ ಯಾಕೆ, ಮದುವೆಯಾದ ಸ್ವಲ್ಪ ನಂತರವೂ ಕೆಲವು ಸಮಯದವರೆಗೆ ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದರು.
ರಿಲಯನ್ಸ್ ಫೌಂಡೇಶನ್ ನ ಸ್ಥಾಪಕರೂ ಮತ್ತು ಅಧ್ಯಕ್ಷರೂ ಹೌದು
ನಿತಾ 2010ರಲ್ಲಿ ರಿಲಯನ್ಸ್‌ನ ಸಿಎಸ್ಆರ್ ವಿಭಾಗವನ್ನು ಸ್ಥಾಪಿಸಿದರು. ಇದನ್ನು ಮೊದಲು ಧೀರೂಭಾಯಿ ಅಂಬಾನಿ ಫೌಂಡೇಶನ್ ಎಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ ಇವರು ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್ (Dheerubhai Ambani International School) ಸ್ಥಾಪಕರೂ ಹೌದು.
ರಿಲಯನ್ಸ್ ಮಂಡಳಿಯಲ್ಲಿ ಮಹಿಳಾ ನಿರ್ದೇಶಕಿ
ನೀತಾ ಅಂಬಾನಿ 2014 ರಲ್ಲಿ ರಿಲಯನ್ಸ್ ಮಂಡಳಿಯ ಮೊದಲ ಮಹಿಳಾ ನಿರ್ದೇಶಕರಾದರು. ಅಷ್ಟೇ ಅಲ್ಲ ಇವರು 2016 ರಲ್ಲಿ, ನೀತಾ ಫೋರ್ಬ್ಸ್ 'ಏಷ್ಯಾದ ಅತ್ಯಂತ ಪ್ರಭಾವಶಾಲಿ ಮಹಿಳಾ ಬ್ಯುಸಿನೆಸ್ ಲೀಡರ್’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
'ಹರ್ ಸರ್ಕಲ್' (her circle)
ಡಿಜಿಟಲ್ ಸಾಧನಗಳ ಮೂಲಕ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ರಿಲಯನ್ಸ್ ಫೌಂಡೇಶನ್‌ನ ಉಪಕ್ರಮದ ಭಾಗವಾಗಿ ನೀತಾ ಅಂಬಾನಿ 2022 ರಲ್ಲಿ ಮಹಿಳಾ ದಿನದಂದು 'ಹರ್ ಸರ್ಕಲ್' ಅನ್ನು ಸ್ಥಾಪಿಸಿದರು. ಇದು ಮಹಿಳೆಯರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತೆ.
ಐಒಸಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ
2016 ರಲ್ಲಿ, ಅಂಬಾನಿ ಬಾಹು ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಂಡಳಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.