ಬುದ್ಧೀವಂತ ಮಗು ಬೇಕಾದರೆ ಗರ್ಭಿಣಿ ನಗ್ ನಗ್ತಾನೇ ಇರಬೇಕು!
ನಗುವು ಆರೋಗ್ಯಕ್ಕೆ ಅತ್ಯುತ್ತಮ ಔಷಧಿ ಎಂಬ ಮಾತನ್ನು ನೀವು ಕೇಳಿರಬಹುದು. ಅದಕ್ಕಾಗಿಯೇ ಜನರು ನಗು ಚಿಕಿತ್ಸೆ (ಲಾಫ್ಟರ್ ಥೆರಪಿ) ಮತ್ತು ನಗು ವ್ಯಾಯಾಮಗಳನ್ನು ಮಾಡುವುದನ್ನು ಆಗಾಗ್ಗೆ ನೋಡಿರುತ್ತೀರಿ. ನಗುವುದು ಪ್ರತಿಯೊಬ್ಬರ ಆರೋಗ್ಯಕ್ಕೆ ಪ್ರಯೋಜನಕಾರಿ. ಗರ್ಭಾವಸ್ಥೆಯಲ್ಲಿ ನಗುವುದು ಮತ್ತು ಸಂತೋಷವಾಗಿರುವುದೂ ತಾಯಿಗೆ ಮಾತ್ರವಲ್ಲ, ಮಗುವಿಗೂ ಪ್ರಯೋಜನಕಾರಿ. ಆದ್ದರಿಂದಲೇ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ನಕ್ಕು ಸಂತೋಷವಾಗಿರಲು ಸಲಹೆ ನೀಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ನಗುವ ಮೂಲಕ ತಾಯಂದಿರು ಮತ್ತು ಮಕ್ಕಳು ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ನೋಡೋಣ.
ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ
ಗರ್ಭಿಣಿ ಮಹಿಳೆಯರು ಆದಷ್ಟು ನಕ್ಕು ಗರ್ಭಾವಸ್ಥೆಯಲ್ಲಿ ಸಂತೋಷವಾಗಿರಬೇಕು. ಇದು ಮಹಿಳೆಯ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಹುಟ್ಟಲಿರುವ ಮಗುವನ್ನು ಹೆಚ್ಚು ಸಕ್ರಿಯವಾಗಿರಿಸುತ್ತದೆ ಮತ್ತು ಮಗು ಚೆನ್ನಾಗಿ ಬೆಳೆಯುತ್ತದೆ. ಆರೋಗ್ಯಕರ ಮಗುವಿಗೆ ತಾಯಿ ಜನ್ಮ ನೀಡುತ್ತಾಳೆ.
ಮಗುವಿನ ಮೆದುಳ ಬೆಳವಣಿಗೆ
ಮಗು ಸಂಪೂರ್ಣ ಆರೋಗ್ಯವಾಗಿ, ಬುದ್ಧಿವಂತನಾಗಿರಬೇಕೆಂದು ಬಯಸಿದರೆ, ತೋಷವಾಗಿರಬೇಕು ಮತ್ತು ಗರ್ಭಾವಸ್ಥೆಯಲ್ಲಿ ನಗಬೇಕು. ತಾಯಿ ನಗುತ್ತಿದ್ದಂತೆ, ಮಗುವಿನ ಮೆದುಳಿನ ಜೀವಕೋಶಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಒತ್ತಡ ಕಡಿಮೆಯಾಗುತ್ತದೆ
ಗರ್ಭಾವಸ್ಥೆಯಲ್ಲಿ, ಗರ್ಭಿಣಿ ಮಹಿಳೆಗೆ ಕೆಲವೊಮ್ಮೆ ಮನಸ್ಥಿತಿ ದುರ್ಬಲಗೊಳ್ಳುತ್ತದೆ ಮತ್ತು ಸಣ್ಣ ವಿಷಯಗಳ ಮೇಲೆ ಒತ್ತಡಕ್ಕೊಳಗಾಗಿ ತೊಂದರೆಯಾಗುತ್ತದೆ, ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಒತ್ತಡ ನಿವಾರಣೆಯಾಗಬೇಕು ಎಂದಾದರೆ ನಗುವುದು ಬಹಳ ಮುಖ್ಯ. ಇದಕ್ಕಾಗಿ ಹಾಸ್ಯ ಚಿತ್ರಗಳನ್ನೂ ನೋಡಬೇಕು ಅಥವಾ ಹಾಸ್ಯಗಳನ್ನು ಓದಿ ಕೇಳಬಹುದು. ಇದರಿಂದ ಒತ್ತಡ ವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ನೋವು ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ
ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ, ಗರ್ಭಿಣಿ ಮಹಿಳೆಯರಿಗೆ ತಲೆನೋವು, ಬೆನ್ನು ನೋವು, ಕಾಲುಗಳು ಅಥವಾ ದೇಹದಲ್ಲಿ ಊತ ಮತ್ತು ಆಯಾಸದಂತಹ ಸಮಸ್ಯೆಗಳು ಸಹ ಇರುತ್ತದೆ. ಈ ಸಂದರ್ಭದಲ್ಲಿ, ನಗುವಿನ ಔಷಧಿ ತೆಗೆದುಕೊಳ್ಳಿ.
ಪ್ರತಿದಿನ ನಗು ಚಿಕಿತ್ಸೆಯ ಸಹಾಯವನ್ನು ತೆಗೆದುಕೊಂಡರೆ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮ ಗಮನವನ್ನು ನೋವಿನಿಂದ ಬೇರೆಡೆಗೆ ತಿರುಗಿಸುತ್ತದೆ ಮತ್ತು ಉತ್ತಮ ಭಾವನೆಯನ್ನು ನೀಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಗರ್ಭಾವಸ್ಥೆಯಲ್ಲಿ ಸಂತೋಷವಾಗಿ ಮತ್ತು ನಗುವುದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದು ತಾಯಿ ಮತ್ತು ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ತಾಯಿ ಮತ್ತು ಮಗು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ರಕ್ತದೊತ್ತಡ ಸಾಮಾನ್ಯವಾಗುತ್ತದೆ
ಗರ್ಭಧಾರಣೆಯ ಅವಧಿಯಲ್ಲಿ, ಮಹಿಳೆಯರ ರಕ್ತದೊತ್ತಡವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಎಲ್ಲಾ ರೀತಿಯ ತೊಂದರೆಗಳ ಅಪಾಯವನ್ನು ಒಡ್ಡುತ್ತದೆ.
ನೀವು ನಿಮ್ಮನ್ನು ಸಂತೋಷವಾಗಿಡಲು ಮತ್ತು ನಗುವುದರಲ್ಲಿ ತೊಡಗಿಸಿಕೊಂಡರೆ, ಇದು ರಕ್ತದೊತ್ತಡವನ್ನು ಸಾಮಾನ್ಯವಾಗಿಡಲು ಸಹಾಯ ಮಾಡುತ್ತದೆ.