MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಮಹಿಳೆಯರನ್ನು ಕಾಡುವ ಮಾರಣಾಂತಿಕ ಕ್ಯಾನ್ಸರ್ ಬಗ್ಗೆ ತಿಳಿಯಿರಿ

ಮಹಿಳೆಯರನ್ನು ಕಾಡುವ ಮಾರಣಾಂತಿಕ ಕ್ಯಾನ್ಸರ್ ಬಗ್ಗೆ ತಿಳಿಯಿರಿ

ಕ್ಯಾನ್ಸರ್ (Cancer) ಹೆಸರನ್ನು ಕೇಳಿದಾಗಲೇ ಎದೆ ನಡುಗುತ್ತದೆ. ಇದು ಒಬ್ಬ ಪುರುಷ (Men) ಅಥವಾ ಮಹಿಳೆ (Woman) ಯಾರನ್ನಾದರೂ ಬಾಧಿಸಬಹುದಾದ ಮಾರಣಾಂತಿಕ ಕಾಯಿಲೆಯಾಗಿದೆ (Life-threatening disease). ಆದಾಗ್ಯೂ, ಮಹಿಳೆಯರಿಗೆ ಕಾಡುವ ಕ್ಯಾನ್ಸರ್ ಗಳ ಬಗ್ಗೆ ಹೇಳೋದಾದ್ರೆ, ಜನರು ಸ್ತನ ಕ್ಯಾನ್ಸರ್ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುತ್ತಾರೆ. ಆದರೆ ಇದರ ಹೊರತಾಗಿ, ಮಹಿಳೆಯರು ವಲ್ವರ್ ಕ್ಯಾನ್ಸರ್ ನಿಂದ ಸಹ ಬಳಲಬಹುದು. 

3 Min read
Suvarna News
Published : Jun 05 2022, 06:00 PM IST| Updated : Jun 05 2022, 07:12 PM IST
Share this Photo Gallery
  • FB
  • TW
  • Linkdin
  • Whatsapp
110

ವಲ್ವರ್ ಕ್ಯಾನ್ಸರ್ (vulvar cancer) ನೀವು ಹೆಚ್ಚಾಗಿ ಕೇಳಿರಲಿಕ್ಕಿಲ್ಲ, ಇದೊಂದು ಅಪರೂಪದ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ, ಇದು ಸ್ತ್ರೀ ಜನನಾಂಗದ ಹೊರ ಮೇಲ್ಮೈಯಲ್ಲಿ ಬೆಳೆಯುತ್ತದೆ. ಇದೊಂದು ಕ್ಯಾನ್ಸರ್ ಆಗಿದ್ದು, ದೇಹದಲ್ಲಿ ಸಾಮಾನ್ಯವಾಗಿ ನಿಧಾನವಾಗಿ ಬೆಳೆಯುತ್ತದೆ ಮತ್ತು ಅದರ ರೋಗಲಕ್ಷಣಗಳು ಬೇಗನೆ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ ಇದನ್ನು ಮಾರಣಾಂತಿಕ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಇಂದು ಈ ಲೇಖನದಲ್ಲಿ ವಲ್ವರ್ ಕ್ಯಾನ್ಸರ್ ಮತ್ತು ಅದರ ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ನಿಮಗೆ ತಿಳಿಸುತ್ತೇವೆ.

210

ವಲ್ವರ್ ಕ್ಯಾನ್ಸರ್ ಬಗ್ಗೆ, ಸಾಮಾನ್ಯವಾಗಿ ಜನರಿಗೆ ತುಂಬಾ ಕಡಿಮೆ ತಿಳಿದಿದೆ. ಈ ಕ್ಯಾನ್ಸರ್ ಸ್ತ್ರೀ ಜನನಾಂಗದ (vaginal infection)  ಹೊರಭಾಗವಾದ ಯೋನಿಯ ಮೇಲೆ ಪರಿಣಾಮ ಬೀರುತ್ತದೆ. ಋತುಬಂಧದ ನಂತರ ಮಹಿಳೆಯರ ಜೀವನಶೈಲಿಯಲ್ಲಿ ಉಂಟಾಗುವ ಹಠಾತ್ ಬದಲಾವಣೆಗಳು ಮತ್ತು ಧೂಮಪಾನದಂತಹ ಅನಾರೋಗ್ಯಕರ ಅಭ್ಯಾಸಗಳಿಂದಾಗಿ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. 

310

ವಲ್ವರ್ ಕಾರ್ಸಿನೋಮಾ ಹೆಚ್ಚಾಗಿ ಯೋನಿಯ ಹೊರಭಾಗದ ಮೇಲೆ ಪರಿಣಾಮ ಬೀರುತ್ತದೆ. ಯೋನಿಯಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಅನ್ನು ಪ್ರಾಥಮಿಕ ವಲ್ವರ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ದೇಹದ ಮತ್ತೊಂದು ಭಾಗದಿಂದ ಯೋನಿಯವರೆಗೆ ಹರಡಿದಾಗ, ಅದನ್ನು ದ್ವಿತೀಯಕ ವಲ್ವರ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

410

ವಲ್ವರ್ ಕ್ಯಾನ್ಸರ್ ಇದ್ದಾಗ ಕೆಲವು ರೋಗಲಕ್ಷಣವು ಕಂಡುಬರುತ್ತವೆ, ಇದರ ಮೊದಲ ಲಕ್ಷಣವೆಂದರೆ ಗಡ್ಡೆ ಅಥವಾ ಹುಣ್ಣು, ಇದರಲ್ಲಿ ಮಹಿಳೆಯರಿಗೆ ಯೋನಿಯ ಬಳಿ ತುರಿಕೆ, ಅಸ್ವಸ್ಥತೆ ಅಥವಾ ರಕ್ತಸ್ರಾವವಾಗಬಹುದು. ಇದಲ್ಲದೆ, ಕ್ಯಾನ್ಸರ್ ನ ಇತರ ರೋಗಲಕ್ಷಣಗಳು ಈ ಕೆಳಗಿನಂತಿವೆ:

510

• ಸೆಕ್ಸ್ ಮಾಡುವಾಗ ತುಂಬಾನೆ ನೋವು ಇರುತ್ತದೆ. 
• ನೋವಿನಿಂದ ಕೂಡಿದ ಮೂತ್ರವಿಸರ್ಜನೆ
• ಮೊಡವೆಯಂತಹ ಬೆಳವಣಿಗೆ 
• ತುಂಬಾ ಸೂಕ್ಷ್ಮವಾದ ಚರ್ಮ 
• ಹುಣ್ಣು 
• ಚರ್ಮ ದಪ್ಪವಾಗುವುದು 

ಪ್ರತಿಯೊಬ್ಬ ಮಹಿಳೆಯಲ್ಲಿ ವೊಲ್ವರ್ ಕ್ಯಾನ್ಸರ್ ನ ಲಕ್ಷಣಗಳು ವಿಭಿನ್ನವಾಗಿರಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಯಾವುದೇ ರೋಗಲಕ್ಷಣಗಳು ಕಂಡು ಬಾರದೇ ಇರಬಹುದು. 

610

ಅಪಾಯದ ಅಂಶಗಳನ್ನು ತಿಳಿದುಕೊಳ್ಳಿ 
ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್ ಪಿವಿ) ಸೋಂಕಿಗೆ ಒಳಗಾದ ಮಹಿಳೆಯರು ವಲ್ವರ್ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ವಲ್ವರ್ ಚರ್ಮದ ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ಅಭಿವೃದ್ಧಿ ಹೊಂದುವ ಒಂದು ಅಸ್ವಸ್ಥತೆಯಾಗಿದೆ.  ವಲ್ವರ್ ಇಂಟ್ರಾಎಪಿಥೆಲಿಯಲ್ ನಿಯೋಪ್ಲಾಸಿಯಾ (ವಿಐಎನ್) ಹೊಂದಿರುವ ಮಹಿಳೆಯರು ವಲ್ವರ್ ಕ್ಯಾನ್ಸರ್ ಗೆ (vulvar cancer) ತುತ್ತಾಗುವ ಸಾಧ್ಯತೆ ಹೆಚ್ಚು. ಜೊತೆಗೆ ನಿಯಮಿತವಾಗಿ ಧೂಮಪಾನ ಮಾಡುವ ಮಹಿಳೆಯರಿಗೆ ವಲ್ವರ್ ಕ್ಯಾನ್ಸರ್ ಬರುವ ಸಾಧ್ಯತೆ ಮೂರರಿಂದ ಆರು ಪಟ್ಟು ಹೆಚ್ಚು. 

710

ವಲ್ವರ್ ಕ್ಯಾನ್ಸರ್ ನ ಹಂತವು ಹಂತ 0 ಯಿಂದ 4 ನೇ ಹಂತದವರೆಗೆ ಪ್ರಾರಂಭವಾಗಬಹುದು. ಹಂತ 0 - ಕ್ಯಾನ್ಸರ್ ಚರ್ಮದ ಮೇಲ್ಮೈಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. 

ಹಂತ 1 ಮತ್ತು 2 - ಯೋನಿಯಲ್ಲಿ ಕ್ಯಾನ್ಸರ್ (cancer) ಉಂಟಾಗುತ್ತದೆ ಮತ್ತು 2 ಸೆಂ.ಮೀ.ವರೆಗೆ ಗಾತ್ರಕ್ಕೆ ಬೆಳೆಯುತ್ತದೆ. 
ಹಂತ 3 - ಕ್ಯಾನ್ಸರ್ ಹತ್ತಿರದ ಅಂಗಾಂಶಗಳು ಮತ್ತು ಗುದದ್ವಾರ ಅಥವಾ ಯೋನಿಯಂತಹ ದುಗ್ಧರಸ ಗ್ರಂಥಿಗಳಿಗೆ ಹರಡಿರುವುದು ಕಂಡುಬಂದಿದೆ. 
ಹಂತ 4 - ತೊಡೆಯ ಎರಡೂ ಬದಿಗಳಲ್ಲಿರುವ ದುಗ್ಧರಸ ಗ್ರಂಥಿಗಳಿಗೆ ಹರಡಿದ ನಂತರ, ಕ್ಯಾನ್ಸರ್ ಕರುಳುಗಳು, ಮೂತ್ರಕೋಶ ಅಥವಾ ಮೂತ್ರನಾಳಗಳಿಗೆ ಹರಡಬಹುದು, ಇದು ಮೂತ್ರವು ದೇಹದಿಂದ ಹೊರಹೋಗುವ ಮಾರ್ಗವಾಗಿದೆ.

810

ವಲ್ವರ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಈ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು: 
ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೇಶನ್ ಥೆರಪಿ (radiation therapy) ಮತ್ತು ಜೈವಿಕ ಚಿಕಿತ್ಸೆಗಳು ವಲ್ವರ್ ಕ್ಯಾನ್ಸರ್ ಗೆ ಅತ್ಯಂತ ಸಾಮಾನ್ಯ ಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆಯು ವಲ್ವರ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವ ಪ್ರಾಥಮಿಕ ವಿಧಾನವಾಗಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ, ಅದನ್ನು ಸಣ್ಣ ಶಸ್ತ್ರಚಿಕಿತ್ಸೆಯಿಂದಲೇ ಗುಣಪಡಿಸಬಹುದು. ಒಂದು ವೇಳೆ ಕ್ಯಾನ್ಸರ್ ಹೆಚ್ಚಾದರೆ, ಮುಂದಿನ ಹಂತದಲ್ಲಿ ಮೂತ್ರನಾಳ, ಯೋನಿ ಅಥವಾ ಗುದನಾಳದಂತಹ ಅಂಗಗಳಿಗೆ ಕ್ಯಾನ್ಸರ್ ಹರಡಿದಾಗ ಶಸ್ತ್ರಚಿಕಿತ್ಸೆ ತುಂಬಾನೆ ಕಷ್ಟವಾಗುತ್ತದೆ.

910

ತಡೆಗಟ್ಟುವಿಕೆ ಕ್ರಮಗಳು:
ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮ ಎಂದು ಹೇಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಕ್ಯಾನ್ಸರ್ ನಿಂದ ದೊಡ್ಡ ಪ್ರಮಾಣದಲ್ಲಿ ರಕ್ಷಿಸಬಹುದು.

ಸುರಕ್ಷಿತ ಲೈಂಗಿಕತೆಯನ್ನು ಹೊಂದುವುದು, ಧೂಮಪಾನ ಮಾಡದಿರುವುದು, ಎಚ್ ಪಿವಿ ವಿರುದ್ಧ ಲಸಿಕೆ ಪಡೆಯುವುದು ಮತ್ತು ಸರ್ವೈಕಲ್ ಸ್ಮಿಯರ್ ಪರೀಕ್ಷೆಯನ್ನು ಪಡೆಯುವುದು ವಾಲ್ವರ್ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುವ ಕೆಲವು ಕ್ರಮಗಳಾಗಿವೆ. 

1010

ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮತ್ತು ತಕ್ಷಣವೇ ತಪಾಸಣೆಗೆ ಒಳಗಾಗುವುದು. ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಸಂಪೂರ್ಣ ದೇಹ ತಪಾಸಣೆ ಮಾಡಿಸಬೇಕು, ಇದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವ ಮೊದಲು ಅದನ್ನು ಕಂಡುಹಿಡಿಯಲು ಸುಲಭವಾಗುತ್ತೆ.

About the Author

SN
Suvarna News
ಕ್ಯಾನ್ಸರ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved