ಭಾರತದ ಬಿಲಿಯನೇರ್ ಮಹಿಳೆ ಈಕೆ, 21620 ಕೋಟಿ ಆದಾಯ; ಅಂಬಾನಿ, ಟಾಟಾ, ಅದಾನಿಗೇ ಕಾಂಪಿಟೇಶನ್!
ಭಾರತದ ಬಿಲಿಯನೇರ್ ಮಹಿಳೆ ಈಕೆ. ಫೋರ್ಬ್ಸ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯ ಪ್ರಕಾರ ಜಗತ್ತಿನಲ್ಲಿ ಇರೋ ಬಿಲಿಯನೇರ್‌ಗಳಲ್ಲಿ ಕೇವಲ 13 ಮಂದಿ ಭಾರತೀಯ ಮಹಿಳೆಯರಿದ್ದಾರೆ. ಅದರಲ್ಲಿ ಇವರೂ ಒಬ್ಬರು. 21620 ಕೋಟಿ ಆದಾಯದ ತಮ್ಮ ಬಿಸಿನೆಸ್ ಮೂಲಕ ಅಂಬಾನಿ, ಟಾಟಾ, ಅದಾನಿಗೇ ಕಾಂಪಿಟೇಶನ್ ಕೊಡ್ತಾರೆ.
ಫೋರ್ಬ್ಸ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯ ಪ್ರಕಾರ ಜಗತ್ತಿನಲ್ಲಿ ಇರೋ ಬಿಲಿಯನೇರ್‌ಗಳಲ್ಲಿ ಕೇವಲ 13 ಮಂದಿ ಭಾರತೀಯ ಮಹಿಳೆಯರಿದ್ದಾರೆ. ಅವರಲ್ಲಿ ಒಬ್ಬರು ಮಾತ್ರ ಪ್ರಸ್ತುತ ಸಿಇಒ ಆಗಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಭಾರತೀಯ ಸ್ಟಾರ್ಟ್‌ಅಪ್ ಲ್ಯಾಂಡ್‌ಸ್ಕೇಪ್‌ನ ಕ್ವೀನ್ ಫಲ್ಗುಣಿ ನಾಯರ್. Nykaa ಸಂಸ್ಥಾಪಕರು.
ಭಾರತದ ಅತಿದೊಡ್ಡ ಸೌಂದರ್ಯವರ್ಧಕ ವ್ಯವಹಾರಗಳಲ್ಲಿ ಒಂದಾದ ನೈಕಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ, ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 49ನೇ ವಯಸ್ಸಿನಲ್ಲಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದ ಅವರು ಬಿಸಿನೆಸ್ ಮಾಡಲು ಬಯಸುವ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ.
ಭಾರತದ ಕೆಲವು ಶ್ರೀಮಂತ ಮಹಿಳೆಯರು ತಮ್ಮ ಸಂಪತ್ತನ್ನು ದೈತ್ಯ ಕಾರ್ಪೊರೇಶನ್‌ಗಳಲ್ಲಿನ ದೊಡ್ಡ ಪಾಲುಗಳಿಂದ ಸರಳವಾಗಿ ಸೆಳೆಯುತ್ತಿದ್ದರೆ, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಮತ್ತು ಲೀನಾ ತಿವಾರಿ ಅವರಂತಹವರು ಈಗ ವೃತ್ತಿಪರ ಸಿಇಒಗಳ ನೇತೃತ್ವದ ತಮ್ಮ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಕ್ರಿಯ ಸಿಇಒ ಆಗಿರುವ ಏಕೈಕ ಬಿಲಿಯನೇರ್ ಭಾರತೀಯ ಮಹಿಳೆ ಫಲ್ಗುಣಿ ನಾಯರ್. ಅಂದಾಜು 21,600 ಕೋಟಿ ರೂ ($2.6 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಫಲ್ಗುಣಿ ನಾಯರ್, ಐಐಎಂ ಹಳೆಯ ವಿದ್ಯಾರ್ಥಿ, ಅಹಮದಾಬಾದ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ ಪಡೆದಿದ್ದಾರೆ. ಹೂಡಿಕೆ ಬ್ಯಾಂಕಿಂಗ್ ಮತ್ತು ಬ್ರೋಕಿಂಗ್‌ನಲ್ಲಿ ಸುಮಾರು 2 ದಶಕಗಳ ವೃತ್ತಿಜೀವನದ ನಂತರ, ನಾಯರ್ ಅವರು 50ಕ್ಕೆ ತಲುಪುವ ಮೊದಲು ಇ-ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರು.
ಫಲ್ಗುಣಿ ನಾಯರ್, ಉದ್ಯಮಿಯಾಗುವ ಮೊದಲು ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಸಂಸ್ಥೆಯ ಎಂಡಿ ಆಗಿ ಸೇವೆ ಸಲ್ಲಿಸಿದರು. 2012ರಲ್ಲಿ, ಅವರು ಸೌಂದರ್ಯ ಉತ್ಪನ್ನಗಳಲ್ಲಿ ಪರಿಣತಿ ಹೊಂದಿರುವ ಆನ್‌ಲೈನ್ ವ್ಯವಹಾರವಾಗಿ Nykaaವನ್ನು ಸ್ಥಾಪಿಸಿದರು.
ಉದ್ಯಮಿಯಾಗಿ ಕೇವಲ 10 ವರ್ಷಗಳ ಪ್ರಯಾಣದಲ್ಲಿ, ನಾಯರ್ ದೇಶದ ಅಗ್ರ ಸಂಪತ್ತು ಗಳಿಸಿದವರಲ್ಲಿ ಒಬ್ಬರಾದರು. ಆಕೆಯ ಸಂಸ್ಥೆಯ ಯಶಸ್ಸು ಕೇವಲ ಒಂದೇ ವರ್ಷದಲ್ಲಿ ಶೇಕಡಾ 345ರಷ್ಟು ಏರಿಕೆ ಕಂಡಿತು.
ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಫಲ್ಗುಣಿ 100ಕ್ಕೂ ಹೆಚ್ಚು ಸ್ಥಾನ ಪಡೆದರು. ನೈಕಾ ಯಶಸ್ಸಿನೊಂದಿಗೆ ನಾಯರ್ ಅವರ ಸಂಪತ್ತು ಗಗನಕ್ಕೇರಿತು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಗುರುತಿಸಿಕೊಂಡ 7ನೇ ಭಾರತೀಯ ಮಹಿಳೆಯಾಗಿದ್ದಾರೆ. Nykaa ಭಾರತದ ಮೊದಲ ಮಹಿಳೆ ನೇತೃತ್ವದ ಯುನಿಕಾರ್ನ್ ಎಂಬ ಗಣ್ಯ ಟ್ಯಾಗ್ ಅನ್ನು ಸಹ ಹೊಂದಿದೆ. ಪ್ರಸ್ತುತ ಕಂಪನಿಯು 37,664 ಕೋಟಿ ರೂ. ವ್ಯವಹಾರ ಮಾಡ್ತಿದೆ.
Nykaaಈಗ ನೇರವಾಗಿ ರತನ್ ಟಾಟಾ ನೇತೃತ್ವದ ಟಾಟಾ ಗ್ರೂಪ್‌ನ ಸೌಂದರ್ಯ ಉತ್ಪನ್ನಗಳ ಅಂಗಡಿಯೊಂದಿಗೆ ಇಕಾಮರ್ಸ್ ಆರ್ಮ್ ಟಾಟಾ ಕ್ಲಿಕ್ ಜೊತೆಗೆ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ನ ಹೊಸ ಬ್ಯೂಟಿ ಬ್ರ್ಯಾಂಡ್ ತಿರಾದೊಂದಿಗೆ ಸ್ಪರ್ಧಿಸುತ್ತದೆ.