ಪ್ರಿ ಮೆನ್ಸ್ರುವಲ್ ಸಿಂಡ್ರೋಮ್: ಮುಟ್ಟಿನ ಮೊದಲಾಗೋ ನೋವಿಂದ ಬಚಾವಾಗೋದೇಗೆ?
First Published Dec 8, 2020, 4:00 PM IST
ಪ್ರಿ ಮೆನ್ಸ್ರುವಲ್ ಸಿಂಡ್ರೋಮ್ ಅನ್ನು ಪಿಎಮ್ ಎಸ್ ಎಂದೂ ಕರೆಯುತ್ತಾರೆ. ಪಿಎಮ್ ಎಸ್ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುವ ಸಮಸ್ಯೆಯಾಗಿದೆ, ಇದು ತಿಂಗಳ ಪಿರಿಯಡ್ಸ್ ಪ್ರಾರಂಭವಾಗುವ ಮೊದಲು ಪ್ರತಿ ತಿಂಗಳು ಸಂಭವಿಸುತ್ತದೆ. ಈ ರೋಗದ ಲಕ್ಷಣಗಳು ಮಹಿಳೆಯಿಂದ ಮಹಿಳೆಗೆ ಬದಲಾಗುತ್ತವೆ. ಇದಕ್ಕೆ ಏನು ಕಾರಣ. ಹೇಗೆ ಇದರಿಂದ ಹೊರಬರೊದು ಎಂದು ಯೋಚನೆ ಮಾಡ್ತಾ ಇದೀರಾ?

ಪಿಎಂಎಸ್ ಸಮಸ್ಯೆಯಲ್ಲಿ ಮಹಿಳೆಯರು ಖಿನ್ನತೆ, ಕಿರಿಕಿರಿ, ಮೂಡ್ ಚೆಂಜ್ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿಎಮ್ ಎಸ್ ಮಹಿಳೆಯರ ಕೆಲಸ ಮತ್ತು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ತಿಂಗಳು ನೀವು ಸಹ ಈ ತೊಂದರೆಗಳನ್ನು ಎದುರಿಸುತ್ತೀರಿ ಎಂದಾದರೆ ಕೆಲವು ವಿಶೇಷ ಸಲಹೆಗಳ ಬಗ್ಗೆ ಹೇಳುತ್ತಿದ್ದೇವೆ, ಇದನ್ನು ನೀವು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅನ್ನು ನಿಯಂತ್ರಣದಲ್ಲಿಡಬಹುದು.

ಉಪ್ಪು ಸೇವನೆ ಕಡಿಮೆ ಮಾಡಿ: ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ. ನೀವು ತ್ವರಿತ ಆಹಾರ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆ ಇರುತ್ತದೆ. ನೀವು ಹೊರಗಿನ ಆಹಾರವನ್ನು ತಿನ್ನುವುದನ್ನು ಕಡಿಮೆ ಮಾಡಬೇಕು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?