- Home
- Life
- Women
- ನೀರಿನ ಗುರುತು, ಧೂಳು ಹಿಡಿದು ಕನ್ನಡಿ ಕೊಳಕಾಗಿದ್ರೆ, ಕ್ಲಿಯರ್ ಆಗಿ ಕಾಣದಿದ್ರೆ ಇಷ್ಟು ಮಾಡಿ.. ಹೊಳೆಯುತ್ತೆ
ನೀರಿನ ಗುರುತು, ಧೂಳು ಹಿಡಿದು ಕನ್ನಡಿ ಕೊಳಕಾಗಿದ್ರೆ, ಕ್ಲಿಯರ್ ಆಗಿ ಕಾಣದಿದ್ರೆ ಇಷ್ಟು ಮಾಡಿ.. ಹೊಳೆಯುತ್ತೆ
Mirror shine tips: ಸ್ನಾನಗೃಹದ ಕನ್ನಡಿ ಮೇಲೆ ಹೆಚ್ಚಾಗಿ ನೀರು ಮತ್ತು ಸೋಪಿನ ಕಲೆಗಳು ಉಂಟಾಗುತ್ತವೆ. ಅವುಗಳನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದರೆ ಕನ್ನಡಿ ಕ್ಲಿಯರ್ ಆಗಿ ಕಾಣಿಸಲ್ಲ. ಆದರೆ ಈ ಕೆಳಗಿನ ಟಿಪ್ಸ್ ಕನ್ನಡಿಯನ್ನು ಕೆಲವೇ ನಿಮಿಷದಲ್ಲಿ ಹೊಸದರಂತೆ ಹೊಳೆಯುವಂತೆ ಮಾಡುತ್ತೆ.

ಮುಖ ಕ್ಲಿಯರ್ ಆಗಿ ಕಾಣಲ್ಲ
ಜನರು ಬಾತ್ ರೂಂ ಕ್ಲೀನ್ ಮಾಡ್ತಾರೆ. ಆದರೆ ವಾಶ್ ಬೇಸಿನ್ ಮೇಲಿನ ಕನ್ನಡಿಯನ್ನೇ ಕ್ಲೀನ್ ಮಾಡಲು ಹೆಚ್ಚಾಗಿ ಮರೆತುಬಿಡುತ್ತಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಸ್ನಾನಗೃಹದ ಕನ್ನಡಿಯನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದರೆ ಹಲ್ಲುಜ್ಜುವಾಗ ಸಿಡಿಯುವ ನೀರಿನ ಗುರುತುಗಳು, ಸ್ನಾನದ ಸೋಪಿನ ಗುರುತುಗಳು ಮತ್ತು ಮುಖ ತೊಳೆಯುವಾಗಿನ ಗುರುತುಗಳು ಅಥವಾ ಮಾರ್ಕ್ ಅದರ ಮೇಲೆ ಪರ್ಮನೆಂಟ್ ಆಗಿ ಉಳಿಯುತ್ತವೆ. ಇದರಿಂದ ನಮ್ಮ ಮುಖ ಕ್ಲಿಯರ್ ಆಗಿ ಕಾಣಲ್ಲ.
ನೀರಿನಿಂದ ತೊಳಿಬೇಡಿ
ಒಂದು ವೇಳೆ ಕಲೆಗಳು ಅಥವಾ ಮಾರ್ಕ್ ಗಟ್ಟಿಯಾದರೆ, ಮೊಂಡುತನದಿಂದ ಕೂಡಿದ್ದರೆ ಸ್ವಚ್ಛಗೊಳಿಸುವುದು ತುಂಬಾ ಕಷ್ಟಕರವಾಗುತ್ತದೆ. ಆದ್ದರಿಂದ ನೀವು ಸ್ನಾನಗೃಹವನ್ನು ಸ್ವಚ್ಛಗೊಳಿಸುವಾಗಲೆಲ್ಲಾ ಕನ್ನಡಿಯನ್ನು ಸಹ ಸ್ವಚ್ಛಗೊಳಿಸಲು ಮರೆಯದಿರಿ. ಆದರೆ ಕನ್ನಡಿಯನ್ನು ನೀರಿನಿಂದ ತೊಳೆಯಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಇದು ಕಲೆಗಳನ್ನು ತೆಗೆದುಹಾಕುವುದಿಲ್ಲ ಮತ್ತು ನೀರಿನ ಗುರುತುಗಳನ್ನು ಸಹ ಬಿಡುತ್ತದೆ.
ಈ ಟಿಪ್ಸ್ ಫಾಲೋ ಮಾಡಿ
ಈ ಮೊದಲೇ ಹೇಳಿದ ಹಾಗೆ ನೀರಿನಿಂದ ಕನ್ನಡಿ ಸ್ವಚ್ಛಗೊಳಿಸುವುದರಿಂದ ಬೇಗನೆ ಹಾಳಾಗುತ್ತದೆ. ಆದ್ದರಿಂದ ಸ್ನಾನಗೃಹದ ಕನ್ನಡಿಯನ್ನು ಸ್ವಚ್ಛಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ. ಇದು ಕನ್ನಡಿಯನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.
ಸ್ವಚ್ಛಗೊಳಿಸುವುದು ಹೇಗೆ?
ಕಾಗದ ಬಳಸಿ
ಕನ್ನಡಿಯನ್ನು ಸ್ವಚ್ಛಗೊಳಿಸಲು ಉತ್ತಮ ಮಾರ್ಗವೆಂದರೆ ಮೊದಲಿಗೆ ಇಡೀ ಸ್ನಾನಗೃಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು. ನಂತರ ಕನ್ನಡಿಗೆ ಗ್ಲಾಸ್ ಕ್ಲೀನರ್ ಹಚ್ಚಿ, ಟಿಶ್ಯೂ ಪೇಪರ್‌ನಿಂದ ಚೆನ್ನಾಗಿ ಉಜ್ಜಿ. ಇದು ಕನ್ನಡಿಗೆ ಹೊಸ ಹೊಳಪನ್ನು ನೀಡುತ್ತದೆ. ನಿಮ್ಮ ಬಳಿ ಗ್ಲಾಸ್ ಕ್ಲೀನರ್ ಅಥವಾ ಟಿಶ್ಯೂ ಇಲ್ಲದಿದ್ದರೆ ಸ್ಪ್ರೇ ಬಾಟಲಿಯಲ್ಲಿ ನಿಂಬೆ ಮತ್ತು ಸೋಡಾ ನೀರಿನ ದ್ರಾವಣವನ್ನು ತಯಾರಿಸಿ. ಕನ್ನಡಿಯ ಮೇಲೆ ಲಘುವಾಗಿ ಸಿಂಪಡಿಸಿ. ಆ ನಂತರ ಪತ್ರಿಕೆಯಿಂದ ಕನ್ನಡಿಯನ್ನು ಒರೆಸಿ. ಇದು ಯಾವುದೇ ಕೊಳಕು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ ಹಾಗೂ ತೇವಾಂಶವು ಕನ್ನಡಿಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ರಬ್ಬಿಂಗ್ ಆಲ್ಕೋಹಾಲ್
ಕನ್ನಡಿ ಸ್ವಚ್ಛಗೊಳಿಸಲು ನೀವು ರಬ್ಬಿಂಗ್ ಆಲ್ಕೋಹಾಲ್ ಅನ್ನು ಸಹ ಬಳಸಬಹುದು. ಕನ್ನಡಿ ಮತ್ತು ಗಾಜಿನ ಮೇಲೆ ಸ್ವಲ್ಪ ರಬ್ಬಿಂಗ್ ಆಲ್ಕೋಹಾಲ್ ಸಿಂಪಡಿಸಿ. ಈಗ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಗಾಜು ಮತ್ತು ಕನ್ನಡಿ ಎರಡನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಬಳಸಿ. ಆ ನಂತರ ಮೃದುವಾದ ಕಾಗದವನ್ನು ಬಳಸಿ ಉಜ್ಜಿ. ಇದು ಸೋಪ್ ಮತ್ತು ಪೇಸ್ಟ್ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಕನ್ನಡಿ ಫಳ ಫಳ ಹೊಳೆಯುತ್ತದೆ.
ಪ್ರತಿ ಸಾರಿ ಕನ್ನಡಿ ಕ್ಲೀನ್ ಮಾಡಿ
ನೀವು ಸ್ನಾನಗೃಹವನ್ನು ಸ್ವಚ್ಛಗೊಳಿಸುವಾಗಲೆಲ್ಲಾ ಕನ್ನಡಿಯನ್ನು ಸಹ ಸ್ವಚ್ಛಗೊಳಿಸಿ. ಇದು ಮೊಂಡುತನದ ಕಲೆಗಳನ್ನು ತಡೆಯುತ್ತದೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
