ಮೆನೋಪಾಸ್ ಟೈಮಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಂದುತ್ತಾ?
ನೈಸರ್ಗಿಕ, ಜೈವಿಕ ಪ್ರಕ್ರಿಯೆಯಾಗಿರುವ ಮೆನೋಪಾಸ್ ಋತುಚಕ್ರದ ಅಂತ್ಯವನ್ನು ಸೂಚಿಸುವ ಸಮಯ. ಸಾಮಾನ್ಯವಾಗಿ ಮಹಿಳೆಯ 40 -50 ವರ್ಷದಲ್ಲಿ ಮೆನೋಪಾಸ್ ಸಂಭವಿಸಬಹುದು.ಇದು ಮಹಿಳೆಯರ ದೇಹದ ಜೊತೆಗೆ ಮಾನಸಿಕ ಆರೋಗ್ಯದಲ್ಲಿಯೂ ಅನೇಕ ಬದಲಾವಣೆಗಳನ್ನು ತರುತ್ತದೆ. ಡಾಶಯದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯು ಕಡಿಮೆಯಾದ ಪರಿಣಾಮದ ಲಕ್ಷಣಗಳಾಗಿವೆ ಇವು. ಇರ್‌ರೆಗ್ಯುಲರ್ ಪೀರಿಯಡ್ಸ್, ಹಾಟ್ ಫ್ಲೆಶ್, ಮೂಡ್ ಸ್ವಿಂಗ್, ತೂಕ ಹೆಚ್ಚಾಗುವುದು ಅಥವಾ ವೆಜೆನಿಯಲ್ ಡ್ರೈನೆಸ್ ಈ ಸಮಯದ ಕೆಲವು ಪ್ರಮಖ ಲಕ್ಷಣಗಳು. ಮೆನೋಪಾಸ್ ಕೆಲವು ಪರಿಸ್ಥಿತಿಯಲ್ಲಿ ಅಪಾಯವನ್ನು ಹೆಚ್ಚಿಸುವ ಸಂಭವವಿದ್ದು, ಹಾಗಾದಲ್ಲಿ ಡಾಕ್ಟರ್ ಸಲಹೆ ಮಾಡುವುದು ಅವಶ್ಯಕ. ಸೆಲ್ಫ್ ಕೇರ್ ಈ ಸಮಯದಲ್ಲಿ ಅತಿ ಅವಶ್ಯಕ.
ಮೆನೋಪಾಸ್ ಅಥವಾ ಋತುಬಂಧ ಒಂದು ನೈಸರ್ಗಿಕ ಭಾಗವಾಗಿದ್ದು, ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟವು ಕುಸಿಯುವ ಕಾರಣದಿಂದ ಸಾಮಾನ್ಯವಾಗಿ 45 ರಿಂದ 55 ವರ್ಷ ವಯಸ್ಸಿನಲ್ಲಿ ಕಂಡುಬರುತ್ತದೆ,
ನಿಮ್ಮ ದೇಹದಲ್ಲಿನ ಅಂಡಾಶಯದ ಹಾರ್ಮೋನುಗಳ (ಈಸ್ಟ್ರೊಜೆನ್) ಮಟ್ಟದ ಬದಲಾವಣೆ ಆಗುವುದರಿಂದ ಅಸಮರ್ಪಕ ಮುಟ್ಟು, ಹಾಟ್ ಪ್ಲೆಶ್, ನಿದ್ರೆ ಬಾರದೆ ಇರುವುದು, ಮರೆವು, ಯೋನಿ ಶುಷ್ಕತೆ, ಮೂಡ್ ಸ್ವಿಂಗ್ ಹಾಗೂ ದೇಹದ ತೂಕದಲ್ಲಿ ಏರಿಕೆಯಂಥ ಲಕ್ಷಣಗಳು ಕಂಡು ಬರಬಹುದು.
ಮನಸ್ಥಿತಿ ಬದಲಾವಣೆಗಳು ಯಾ ಮೂಡ್ ಸ್ವಿಂಗ್ - ಈ ಸಮಯದಲ್ಲಿ ಆತಂಕ, ದುಃಖ ಅಥವಾ ಗಾಬರಿ ಸೇರಿದಂತೆ ಹಲವಾರು ಭಾವನೆಗಳ ಏರುಪೇರು ಸಾಮಾನ್ಯ.
ಹಾಟ್ ಪ್ಲೆಶ್ - ಅಂಗೈ ಅಥವಾ ಅಂಗಾಲು ಬಿಸಿಯಾಗುವುದು. ನಿದ್ರೆಯಲ್ಲಿ ಮೈ ಬೆವರಲೂ ಬಹುದು.
ತೂಕ ಏರಿಕೆ - ಹಾರ್ಮೋನ್ ಏರುಪೇರಿನಿಂದಾಗಿ ಹೆಚ್ಚಿನ ಮಹಿಳೆಯರಲ್ಲಿ ದೇಹ ತೂಕ ಹೆಚ್ಚುತ್ತದೆ.
ಮೆನೋಪಾಸ್ ಸಮಯದಲ್ಲಿ ಕೆಲವರು ನಿದ್ರೆ ಹೀನತೆಯಿಂದ ಬಳಲುತ್ತಾರೆ.
ಈ ಸಮಯದಲ್ಲಿ 400 ರಿಂದ 600 ಕ್ಯಾಲೊರಿಗಳಷ್ಟು ಕಡಿಮೆ ಸೇವನೆ ಹಾಗೂ ವ್ಯಾಯಾಮ ನಿಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ದಿನಕ್ಕೆ 20 ರಿಂದ 30 ನಿಮಿಷಗಳ ಕಾಲದ ಫಿಸಿಕಲ್ ಆಕ್ಟಿವಿಟಿ ಅಗತ್ಯ. ವಾಕಿಂಗ್, ಯೋಗ ಅಥವಾ ಇನ್ಯಾವುದೇ ತರದ ವ್ಯಾಯಾಮದ ಅವಶ್ಯಕತೆ ಇದೆ.
ಎನರ್ಜಿಲೆವಲ್ ಹೆಚ್ಚಿಸಲು, ಉತ್ತಮ ನಿದ್ರೆಗಾಗಿ, ಮೂಡ್ ಸ್ಥಿರವಾಗಿಡಲು ಮತ್ತು ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮೆನೋಪಾಸ್ ಸಮಯದಲ್ಲಿ ಆಕ್ಟೀವ್ ಆಗಿರುವುದು ಹೆಲ್ಪ್ ಆಗುತ್ತದೆ.
ಮಹಿಳೆಯರು ಪ್ರಾಣಾಯಾಮ ಹಾಗೂ ಧ್ಯಾನವನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.
ಪ್ರತಿ ನಿತ್ಯ ನಾಡಿ ಶೋದ ಪ್ರಾಣಾಯಾಮ ಮಾಡಲು ಸಹ ತಜ್ಞರು ಸಜೆಸ್ಟ್ ಮಾಡುತ್ತಾರೆ.
ಖಿನ್ನತೆ, ಆತಂಕ, ದುಃಖ, ನಿದ್ರಾಹೀನತೆ ಮತ್ತು ಯಾವುದೇ ಭಾವನೆಗಳ ಬದಲಾವಣೆಗಳು ತೀವ್ರವಾಗಿ ಕಾಡುತ್ತಿದ್ದರೆ, ಥೆರೆಪಿಸ್ಟ್ ಅಥವಾ ಮನಃಶ್ಶಾಸ್ತ್ರಜ್ಞರೊಂದಿಗೆ ಮಾತನಾಡಿ. ಈ ಸಮಯದಲ್ಲಿ ಲೈಂಗಿಕಾಸಕ್ತಿ ಕೆಲವು ಹೆಣ್ಣುಮಕ್ಕಳಿಗೆ ಕುಂದುವುದು ಸಹಜ.
ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ನಿಮ್ಮ ಆತಂಕ, ಮೂಡ್ ಸ್ವಿಂಗ್ ಅಥವಾ ಡಿಪ್ರೆಶನ್ ಬಗ್ಗೆ ಮಾತನಾಡಿ.
ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಹಾಗೂ ಎನರ್ಜಿ ಲೆವಲ್ ಉತ್ತಮಗೊಳಿಸಲು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೆಗ್ನೀಸಿಯಮ್ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಿ.
ಚರ್ಮದ ಡ್ರೈನೆಸ್ ಕಡಿಮೆ ಮಾಡಲು ಮಾಯಿಶ್ಚರೈಸರ್ ಬಳಸುವುದು ಉತ್ತಮ
ಪ್ರತಿನಿತ್ಯದ ಡಯಟ್‌ನಲ್ಲಿ ಹೆಚ್ಚು ಹಣ್ಣು ತರಕಾರಿಗಳಿರಲಿ.
ಅಗಸೆ ಬೀಜದ ಸೇವನೆ ಹೆಲ್ಪ್ ಆಗುತ್ತದೆ ಎನ್ನುತ್ತಾರೆ ಡಾಕ್ಟರ್‌ಗಳು.