Health Tips: ಗರ್ಭಿಣಿ ಮಹಿಳೆಯರು ಈ ಆಹಾರ ಸೇವಿಸುವ ಮುನ್ನ ಯೋಚಿಸಿ
ಗರ್ಭಾವಸ್ಥೆಯಲ್ಲಿ (pregnancy), ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಕೆಲವು ಆಹಾರಗಳು ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡಬಹುದು. ನೀವು ಸೇವಿಸುವ ಆಹಾರ ಮಗುವಿನ ಆರೋಗ್ಯ ಉತ್ತಮವಾಗಿರುವುದರ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಆಹಾರದ ಬಗ್ಗೆ ನೀವು ಗಮನ ಹರಿಸಲೇಬೇಕು.

ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ಕೆಲವು ಆಹಾರಗಳಿವೆ, ಇದರ ಸೇವನೆಯು ತಾಯಿ ಮತ್ತು ಮಗು ಇಬ್ಬರಿಗೂ ಹಾನಿ ಮಾಡುತ್ತದೆ, ಮತ್ತು ಗರ್ಭಪಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದುದರಿಂದ ನೀವು ಸೇವಿಸುವ ಆಹಾರದ ಕಡೆಗೆ ಗಮನ ಹರಿಸೋದು ಮುಖ್ಯ. ಇಲ್ಲವಾದರೆ ಮುಂದೆ ನೀವು ಪಶ್ಚಾತ್ತಾಪ ಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅನಾನಸ್ ಸೇವಿಸಬೇಡಿ
ಅನಾನಸ್ (pineapple) ಹಣ್ಣಿನಲ್ಲಿ ಬ್ರೋಮೆಲೈನ್ ಎಂಬ ಕಿಣ್ವವಿದೆ, ಇದರ ಸೇವನೆಯು ಗರ್ಭಾಶಯದಲ್ಲಿ ತೀಕ್ಷ್ಣವಾದ ಸಂಕೋಚನಗಳಿಗೆ ಕಾರಣವಾಗಬಹುದು, ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ. ಆದುದರಿಂದ ನಿಮಗೆ ಇಷ್ಟವಿದ್ದರೂ ಸಹ ಅನಾನಸ್ ಸೇವನೆ ಮಾಡುವ ಯೋಚನೆ ಮಾಡಬೇಡಿ.
ಹುಣಸೆಹಣ್ಣು ಹಾನಿಯನ್ನುಂಟುಮಾಡಬಹುದು
ಗರ್ಭಿಣಿಯಾಗಿರುವಾಗ ಮಹಿಳೆಯರಿಗೆ ಹೆಚ್ಚು ಹೆಚ್ಚು ಉಪ್ಪು ಹುಳಿ ತಿನ್ನುವ ಮನಸಾಗುತ್ತದೆ ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಆದರೆ ಹುಣಸೆಹಣ್ಣಿನಲ್ಲಿರುವ (tamarind) ವಿಟಮಿನ್ ಸಿ ಪ್ರೊಜೆಸ್ಟರಾನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಆದ್ದರಿಂದ ಹುಣಸೆಹಣ್ಣನ್ನು ಹೆಚ್ಚು ಸೇವಿಸಬೇಡಿ.
ಪಪ್ಪಾಯಿ ಕೂಡ ಅಪಾಯಕಾರಿ
ಗರ್ಭವಾಸ್ಥೆಯಲ್ಲಿ ಪಪ್ಪಾಯಿ ತಿನ್ನೋದು ಅಪಾಯಕಾರಿ ಎನ್ನುವುದನ್ನು ನೀವು ಹಿರಿಯರು ಹೇಳಿರುವುದನ್ನು ನೀವು ಕೇಳಿರುವಿರಿ. ಪಪ್ಪಾಯಿಯ ಸೇವನೆಯು ಗರ್ಭಾಶಯದಲ್ಲಿ ಸಂಕೋಚನ ಅಥವಾ ರಕ್ತಸ್ರಾವಕ್ಕೆ ಕಾರಣವಾಗಬಹುದು, ಇದು ಗರ್ಭಪಾತಕ್ಕೆ ಕಾರಣವಾಗಬಹುದು. ಆದುದರಿಂದ ಇದನ್ನು ಅವಾಯ್ಡ್ ಮಾಡುವುದು ಉತ್ತಮ.
ಬಾಳೆಹಣ್ಣು ತಿನ್ನಬೇಡಿ
ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಇದರಿಂದ ಗರ್ಭಿಣಿ ಮಹಿಳೆಯರಿಗೆ (pregnant women) ಅಪಾಯವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಅಲರ್ಜಿಗಳಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಬಾಳೆಹಣ್ಣನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಬಾಳೆಹಣ್ಣು ಸೇವನೆ ಮುನ್ನ ನೀವು ವೈದ್ಯರಲ್ಲಿ ಪರೀಕ್ಷೆ ನಡೆಸುವುದು ಮುಖ್ಯವಾಗಿದೆ.
ಕಲ್ಲಂಗಡಿ ಕೂಡ ಅಪಾಯಕಾರಿ
ನೀವು ಗರ್ಭಧಾರಣೆಯ ಮಧುಮೇಹಕ್ಕೆ ಬಲಿಯಾಗಿದ್ದರೆ, ಕಲ್ಲಂಗಡಿ ಹಣ್ಣನ್ನು ಸೇವಿಸಬೇಡಿ. ಏಕೆಂದರೆ ಕಲ್ಲಂಗಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಯಾಕೆಂದರೆ ಕಲ್ಲಂಗಡಿಯಲ್ಲಿ ಸಕ್ಕರೆ ಅಂಶ ಇರುವುದರಿಂದ ಅದರ ರುಚಿ ಸಿಹಿಯಾಗಿರುತ್ತದೆ. ಆದುದರಿಂದ ಇದನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ.
ಖರ್ಜೂರ ಸೇವಿಸುವುದನ್ನು ತಪ್ಪಿಸಿ
ಗರ್ಭಕೋಶದಲ್ಲಿ ಸಂಕೋಚನಗಳನ್ನು ಉಂಟುಮಾಡುವುದರಿಂದ ಗರ್ಭಿಣಿಯರಿಗೆ ಖರ್ಜೂರದ ಸೇವನೆಯನ್ನು ತಪ್ಪಿಸಲು ಸೂಚಿಸಲಾಗಿದೆ. ಆದುದರಿಂದ ಇದನ್ನು ಅವಾಯ್ಡ್ ಮಾಡುವುದು ಉತ್ತಮ ಯೋಜನೆಯಾಗಿದೆ. ತಿನ್ನಲೇ ಬೇಕು ಎಂದಾದರೆ ವೈದ್ಯರ ಬಳಿ ಪರೀಕ್ಷಿಸಿ ಇದನ್ನು ಸೇವಿಸಿ.
ಪ್ರೊಜನ್ ಹಣ್ಣುಗಳನ್ನು ತಿನ್ನಬೇಡಿ
ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಪ್ರೊಜನ್ ಹಣ್ಣುಗಳ (frozen fruits) ಸೇವನೆಯನ್ನು ತಪ್ಪಿಸಬೇಕು. ನೀವು ಬಯಸಿದರೆ ನೀವು ತಾಜಾ ಹಣ್ಣುಗಳನ್ನು ತಿನ್ನಬಹುದು. ತಾಜಾಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿದೆ, ಆದುದರಿಂದ ಸಾಧ್ಯವಾದಷ್ಟು ಪ್ರೆಶ್ ಆಗಿರುವ ಹಣ್ಣುಗಳನ್ನು ಸೇವಿಸುವಂತೆ ನೋಡಿಕೊಳ್ಳಿ.