ಆತ್ಮವಿಶ್ವಾಸದ ಮುಂದೆ ಸೌಂದರ್ಯವೆಲ್ಲಿ? ಗಡ್ಡ ಬಿಟ್ಟವಳ ಹೆಸರು ಗಿನ್ನೀಸ್ ದಾಖಲೆಗೆ!

First Published 12, Mar 2020, 4:32 PM IST

ಮುಖದ ಮೇಲೆ ಒಂದು ಕೂದಲು ಜಾಸ್ತಿ ಇದ್ದರೆ ಸಾಕು ನಮಗೆ ಮುಜುಗರ. ಬ್ಯೂಟಿಪಾರ್ಲರ್‌ಗೆ ಹೋಗದೆ ಯಾವುದೇ ಫಂಕ್ಷನ್‌ಗೂ ಹೋಗೋಲ್ಲ. ಮುಖದ ಮೇಲೆ ಹೆಚ್ಚಿನ ಕೂದಲುಗಳಿಂದ ಕೀಳರಿಮೆ ಬೆಳಸಿಕೊಂಡವರು ನಮ್ಮಲ್ಲಿ ಎಷ್ಡು ಜನ ಇಲ್ಲ ಹೇಳಿ? ಅಂಥವರಿಗೆ ಹರ್ನಾಮ್‌ ಕೌರ್‌  ಮಾದರಿ. 29 ವಯಸ್ಸಿನ ಹರ್ನಾಮ್‌ ಕೌರ್‌ ಕಿರಿಯ ವಯಸ್ಸಿನ ಗಿನ್ನಿಸ್‌ ದಾಖಲೆಯ ಗಡ್ದ ಸುಂದರಿ. ತನ್ನ ಅತ್ಮವಿಶ್ವಾಸದಿಂದ ಸಾಂಪ್ರದಾಯಿಕ ಬ್ಯೂಟಿ ಸ್ಟೇಟ್‌ಮೆಂಟ್‌ಗೆ ಸೆಡ್ಡು ಹೊಡೆದ ಹರ್ನಾಮ್‌ ಕೌರ್‌ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್. 

ಹರ್ನಾಮ್ ಕೌರ್ ಪೂರ್ಣ ಗಡ್ಡವನ್ನು ಹೊಂದಿರುವ ಕಿರಿಯ ಮಹಿಳೆ ಎಂಬ ವಿಶ್ವ ದಾಖಲೆ ಇರೋ ಹೆಣ್ಣು ಮಗಳು.

1990 ರಲ್ಲಿ  ಜನಿಸಿದ ಹರ್ನಾಮ್‌ಗೆ  11ನೇ ವಯಸ್ಸಿಗೇ ಮುಖದ ಮೇಲೆ ಕೂದಲು ಬೆಳೆಯಲು  ಪ್ರಾರಂಭವಾಯಿತು.

12 ನೇ ವಯಸ್ಸಿನಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದ ಅವಳು ಬಳಲುತ್ತಿರುವುದು ಗೊತ್ತಾಯಿತು.

12 ನೇ ವಯಸ್ಸಿನಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದು ಗುರುತಿಸಲಾಯಿತು,  ಈ ಸಮಸ್ಯೆಯಲ್ಲಿ  ಗಡ್ಡಮೀಸೆಯ ಬೆಳವಣಿಗೆಗೆ ಕಾರಣವಾಗುವ ಟೆಸ್ಟೆಸ್ಟೋರೋನ್ ಹಾರ್ಮೋನ್  ಹೆಚ್ಚು ಬಿಡುಗಡೆಯಾಗುತ್ತದೆ.

ಆರಂಭದಲ್ಲಿ ನಿರಂತರ ಬುಲ್ಲಿಂಗ್‌ ಮತ್ತು ಮುಜುಗರದಿಂದ  ಕೌರ್ ಮುಖದ ಕೂದಲನ್ನು ತೆಗೆಯಲು ಪ್ರಯತ್ನಿಸಿದ್ದಳು.

ಖಿನ್ನತೆಯಿಂದ ಅತ್ಮಹತ್ಯೆಗೂ ಕೈ ಹಾಕಿದ್ದ ಹರ್ನಾಮ್ ತನ್ನ ಧ್ವನಿಯ ಮೂಲಕ ತನ್ನನ್ನು ಮತ್ತು ಇತರರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುದ್ದಾರೆ..

ಮೊದಲು ಶಾಲೆಯಲ್ಲಿ ಬೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಅವಮಾನಗಳ ಮೂಲಕವೇ ಇದೀಗ ಗೆದ್ದು ಬೀಗುತ್ತಿರುವ ಹರ್ನಾಮ್‌ ಈಗ ಇನ್‌ಸ್ಟಾಗ್ರಾಮ್ ತಾರೆ.

2014 ರಲ್ಲಿ, ಲಂಡನ್ ಫ್ಯಾಶನ್ ವೀಕ್‌ನಲ್ಲಿ ರಾಂಪ್ ನಡೆದ ಗಡ್ಡವನ್ನು ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಖಿನ್ನತೆಗೆ ಒಳಗಾದ, ಸಂಕೋಚದ ಪುಟ್ಟ ಹುಡುಗಿ ಈಗ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್, ಲೈಪ್ ಕೋಚ್, ಮೋಟಿವೇಶನಲ್ ಸ್ಪೀಕರ್ .

loader