ಶೀತ ಚಳಿಗಾಲದಲ್ಲಿ ಊದರೂ ಕೂದಲು, ತಡೆಯೋದು ಹೇಗೆ?

First Published 3, Nov 2020, 4:57 PM

ಬಿಸಿ ಬಿಸಿ ಬೆಳಗಿನ ಕಾಫಿ ಮತ್ತು ತಂಪಾದ ತಂಗಾಳಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ...  ಆದರೆ ಅದರೊಂದಿಗೆ ಬರುವ ಸೌಂದರ್ಯದ ತೊಂದರೆಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಶೀತ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಕೂದಲು ಉದುರುವುದು. ದಿನಕ್ಕೆ 100 ಎಳೆಗಳನ್ನು ಕಳೆದುಕೊಳ್ಳುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆಯಾದರೂ, ಅದಕ್ಕಿಂತ ಹೆಚ್ಚಿನದನ್ನು ನೀವು ಕಳೆದುಕೊಳ್ಳುತ್ತಿದ್ದರೆ ಭಯಪಡುವ ಅವಶ್ಯಕತೆಯಿದೆ  ಹಾಗಾದರೆ ಆ ರೀತಿ ಕೂದಲು ಉದುರಲು ಕಾರಣ ಏನು? ಪರಿಹಾರ ಏನು ನೋಡೋಣ...

ಚಳಿಗಾಲವು ನಿಜವಾಗಿಯೂ ಕೂದಲು ಉದುರಲು ಕಾರಣವಾಗಿದೆಯೇ?

ಬ್ರಿಟಿಷ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್ ನಡೆಸಿದ ಅಧ್ಯಯನವು ಕೂದಲು ಉದುರುವಿಕೆ ಮತ್ತು ಸೀಸನ್ ಗಳ ನಡುವಿನ ಪರಸ್ಪರ ಸಂಬಂಧವನ್ನು ಪರಿಶೀಲಿಸಿದೆ. ಅಧ್ಯಯನದ ಪ್ರಕಾರ, ಕೂದಲು ಉದುರುವುದು ಬೇಸಿಗೆಯಲ್ಲಿ ಮತ್ತು ಶರತ್ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ ನಾವು ಶರತ್ಕಾಲದ ಕೊನೆಯಲ್ಲಿ ಚಳಿಗಾಲದ ಆರಂಭಕ್ಕೆ ಬದಲಾದಾಗ, ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ, ಚಳಿಗಾಲದಲ್ಲಿ, ಶುಷ್ಕ ಗಾಳಿಯು ನೆತ್ತಿಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಒಣಗುವಂತೆ ಮಾಡುತ್ತದೆ. ಒಣ ನೆತ್ತಿ ಒಡೆಯಲು ಕಾರಣವಾಗುತ್ತದೆ.

ತೆಳ್ಳನೆಯ ಕೂದಲು ಇರುವ ಜನರು ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರುವಿಕೆಯನ್ನು ಅನುಭವಿಸಬಹುದು. ಆದ್ದರಿಂದ, ಅವರು ಕೂದಲು ಉದುರುವಿಕೆ ಬಗ್ಗೆ ಹೆಚ್ಚಿನ ಜಾಗರೂಕರಾಗಿರಬೇಕು. ಚಳಿಗಾಲವು ನಿಮ್ಮ ಕೂದಲನ್ನು ಹೆಚ್ಚು ಚಪ್ಪಟೆ, ಮಂದ ಮತ್ತು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ ಮತ್ತು ನೀವು ಎಂದಿಗಿಂತಲೂ ಹೆಚ್ಚಾಗಿ ನಿಮ್ಮ ಕೂದಲಿಗೆ ಹೆಚ್ಚು ಗಮನ ಹರಿಸಬೇಕು.

ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ನಿಮ್ಮ ಹೇರ್ ಬ್ರಷ್ನಲ್ಲಿ ಕೆಲವು ಹೆಚ್ಚುವರಿ ಎಳೆಗಳನ್ನು ನೀವು ನೋಡಿದ್ದರೆ, ನೀವು ಬೋಳು ಅಂಚಿನಲ್ಲಿದ್ದೀರಿ ಎಂದು ಹೆದರುತ್ತೀರಾ.. ಆದರೆ ನಿಮ್ಮ ಚರ್ಮದಂತೆಯೇ, ನಿಮ್ಮ ಕೂದಲು ಕೂಡ ಬದಲಾವಣೆಯ ಮೂಲಕ ಸಾಗುತ್ತದೆ. ಕೂದಲು ಉದುರುವಿಕೆಯನ್ನು ತಡೆಯಲು ಅಥವಾ ಅದರ ಪರಿಣಾಮಗಳನ್ನು ತಗ್ಗಿಸಲು ನೀವು ಬಯಸಿದರೆ, ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

ನಿಯಮಿತ ಟ್ರಿಮ್ ಗಳನ್ನು  ಪಡೆಯಿರಿ

ತಜ್ಞರ ಪ್ರಕಾರ, ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಪ್ರತಿ 4-8 ವಾರಗಳಿಗೊಮ್ಮೆ ನಿಯಮಿತ ಟ್ರಿಮ್ಗಳನ್ನು ಪಡೆಯಬೇಕು. ಇದು ಕೂದಲು ಉದುರುವಿಕೆಯನ್ನು ನಿವಾರಿಸುವುದಲ್ಲದೆ, ಸ್ಪ್ಲಿಟ್ ಎಂಡ್ಸ್ ತೆಗೆದುಹಾಕಲು ಮತ್ತು ಕೂದಲಿನ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ.

ಬಿಸಿ ಎಣ್ಣೆ ಮಸಾಜ್

ಚಳಿಗಾಲವು ನಿಮ್ಮ ಕೂದಲನ್ನು ಹಾಳುಮಾಡಿದಾಗ ಬಿಸಿ ಎಣ್ಣೆ ಮಸಾಜ್ ಅತ್ಯುತ್ತಮ ಪರಿಹಾರವಾಗಿದೆ. ಕೂದಲಿನ ನೆತ್ತಿಯನ್ನು ಬಲಪಡಿಸಲು ಮತ್ತು ಪೋಷಿಸಲು ಮತ್ತು ನಿಮ್ಮ ಕೂದಲನ್ನು ಮತ್ತೆ ಹೊಳೆಯುವಂತೆ ಮಾಡಲು ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ. ತೆಂಗಿನ ಎಣ್ಣೆ ಇಲ್ಲಿ ಉತ್ತಮ ಆಯ್ಕೆಯಾಗಿದೆ.

ಸ್ಟೀಮ್

ನಿಯಮಿತವಾಗಿ ಸ್ಟೀಮ್ ಪಡೆಯುವುದರಿಂದ ಕೂದಲಿನ ಫಾಲಿಕಲ್ ತೆರೆದುಕೊಳ್ಳುತ್ತವೆ ಇದರಿಂದ ಅವು ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇದು ನಿಮ್ಮ ನೆತ್ತಿಯನ್ನು ತೇವಗೊಳಿಸಲು ಮತ್ತು ನಿಮ್ಮ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಕೂದಲಿನ ಆರೋಗ್ಯವನ್ನು ಪ್ರೇರೇಪಿಸುತ್ತದೆ ಮತ್ತು ನಿಮ್ಮ ಕೂದಲನ್ನು ಸಿಲ್ಕಿ ಸ್ಮೂತಿ ಆಗಿಸುತ್ತದೆ.

ಗಾಳಿಯಲ್ಲಿ  ನಿಮ್ಮ ಕೂದಲನ್ನು ಒಣಗಿಸಿ

ನಿಮ್ಮ ಕೂದಲನ್ನು ಹೇರ್ ಡ್ರಯರ್ ನಿಂದ ಒಣಗಿಸುವ ಬದಲು ನೈಸರ್ಗಿಕವಾಗಿ ಒಣಗಲು ಅನುಮತಿಸಿ. ನಿಮ್ಮ ಕೂದಲನ್ನು ಒಣಗಿಸಲು ಬ್ಲೋ ಡ್ರ್ಯೆರ್ ಉಪಯೋಗಿಸಿದರೆ ಕೂದಲು ಬ್ರೇಕ್ ಆಗಲು ಕಾರಣವಾಗುತ್ತದೆ ಮತ್ತು ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹೇಗಾದರೂ, ಒದ್ದೆಯಾದ ಕೂದಲಿನೊಂದಿಗೆ ಹೊರಗೆ ಹೋಗುವುದನ್ನು ನೀವು ತಪ್ಪಿಸಬೇಕು ಏಕೆಂದರೆ ಚಳಿಗಾಲದ ಶುಷ್ಕ ಗಾಳಿಯು ನಿಮ್ಮ ಕೂದಲನ್ನು ಒಣಗಿಸುತ್ತದೆ ಮತ್ತು ಬ್ರೇಕ್  ಆಗಲು ಕಾರಣವಾಗುತ್ತದೆ.

ಬಿಸಿ ನೀರಿನ ತಪ್ಪಿಸಿ :

ನಿಮ್ಮ ಕೂದಲನ್ನು ಬಿಸಿನೀರಿನಿಂದ ತೊಳೆಯುವುದು ನಿಮ್ಮ ಕೂದಲನ್ನು ಒಣಗಿಸಿ ಉಬ್ಬಿಕೊಳ್ಳುವಂತೆ ಮಾಡುತ್ತದೆ, ಇದು ಕೂದಲಿನ ಹಾನಿಗೆ ಕಾರಣವಾಗಬಹುದು. ಆದ್ದರಿಂದ, ಕೇವಲ 10 ನಿಮಿಷಗಳು ಬಿಸಿ ಸ್ನಾನ ಮಾಡುವುದು ಸರಿ.  ಅದಕ್ಕಿಂತ ಜಾಸ್ತಿ ಹೊತ್ತು ಬಿಸಿ ನೀರಿನ ಶವರ್ ಮಾಡುವುದು ಬೇಡ.

ಕನಿಷ್ಠ ವಾರಕ್ಕೊಮ್ಮೆ  ಡೀಪ್ ಕಂಡೀಷನಿಂಗ್ ಮಾಡಿ

ಕನಿಷ್ಠ ವಾರಕ್ಕೊಮ್ಮೆ  ಡೀಪ್ ಕಂಡೀಷನಿಂಗ್ ಮಾಡಿ

ನಿಮ್ಮ ನೆತ್ತಿಯ ತೇವಾಂಶವನ್ನು ಪುನಃ ತುಂಬಿಸಲು ಮತ್ತು ಕೂದಲು ಉದುರುವುದನ್ನು ತಡೆಯಲು ನಿಮ್ಮ ಕೂದಲನ್ನು ಕಂಡೀಷನಿಂಗ್ ಮಾಡುವುದು ಅತ್ಯಗತ್ಯ. ಇದು ಶೀತದ ಸೀಸನ್ ನಲ್ಲಿ ಕೂದಲಿನ ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಶೀತ ಚಳಿಗಾಲದ ಗಾಳಿಯ ಪರಿಣಾಮಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಮೂಲ ಅಡಿಗೆ ಪದಾರ್ಥಗಳ ಸಹಾಯದಿಂದ ನೀವು ಮನೆಯಲ್ಲಿ ನಿಮ್ಮ ಸ್ವಂತ ಕಂಡಿಷನರ್ ಅನ್ನು ರೆಡಿ ಮಾಡಬಹುದು.

ಮೊಸರು ಮತ್ತು ನಿಂಬೆ: ಮೊಸರಿನಲ್ಲಿ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಈ ನೈಸರ್ಗಿಕ ಕಂಡಿಷನರ್ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ನೆತ್ತಿಯ ಶುಷ್ಕತೆಯನ್ನು ಗುಣಪಡಿಸುತ್ತದೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ.

ಮೊಸರು ಮತ್ತು ಮೊಟ್ಟೆ: ಮೊಟ್ಟೆಯನ್ನು ಆರು ಚಮಚ ಮೊಸರಿಗೆ ಬೆರೆಸಿ ಮಿಶ್ರಣವನ್ನು ನಿಮ್ಮ ಕೂದಲಿಗೆ ಮಸಾಜ್ ಮಾಡಿ. ಇದನ್ನು ಸುಮಾರು 15-20 ನಿಮಿಷಗಳ ಕಾಲ ಇಟ್ಟು,ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಮೊಸರಿನಲ್ಲಿರುವ ಪ್ರೋಟೀನ್ ಅಂಶ ಮತ್ತು ಲ್ಯಾಕ್ಟಿಕ್ ಆಮ್ಲವು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಮತ್ತೊಂದೆಡೆ ಮೊಟ್ಟೆ, ಪರಿಣಾಮಕಾರಿ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಂದ ಕೂದಲಿಗೆ ಹೊಳಪನ್ನು ನೀಡುತ್ತದೆ.