ಅಮೆರಿಕದಲ್ಲಿ ಪೈಲಟ್ ಆದ ಗುಜರಾತ್ ರೈತನ 19 ವರ್ಷದ ಪುತ್ರಿ!
ಗುಜರಾತಿನ ರೈತನೊಬ್ಬನ ಮಗಳು ಕೇವಲ 19ನೇ ವಯಸ್ಸಿನಲ್ಲಿ ಪೈಲಟ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಗಳ ಯಶಸ್ಸಿನ ಹಿಂದೆ ತಂದೆಯ ಹೋರಾಟವಿದೆ. ಅವರು ಮಗಳ ಕನಸು ಪೂರೈಸಲು ತನ್ನ ಭೂಮಿ ಮಾರಿದರು. ಪೈಲಟ್ ಆಗಿ ಆಕಾಶದಲ್ಲಿ ಹಾರಾಡಿದ ರೈತನ ಮಗಳ ಯಶೋಗಾಥೆ ಇಲ್ಲಿದೆ.
ವಾಸ್ತವವಾಗಿ, ಸೂರತ್ ನಿವಾಸಿ ಮೈತ್ರಿ ಪಟೇಲ್ ಇತ್ತೀಚೆಗೆ ಪೈಲಟ್ ಆಗಿ ಅಮೆರಿಕದಿಂದ ಮನೆಗೆ ಬಂದಿದ್ದಾರೆ. ತಂದೆ ಕಾಂತಿಭಾಯಿ ಪಟೇಲ್ ಮತ್ತು ತಾಯಿ ರೇಖಾ ಪಟೇಲ್ ಅವರು ಮಗಳು ಮೈತ್ರಿಗೆ ತಿಲಕ ಹಚ್ಚಿ ಆರತಿ ಮಾಡುವ ಮೂಲಕ ಆಶೀರ್ವದಿಸಿದರು.
ವಿಮಾನದಲ್ಲಿ ಒಮ್ಮೆ ಪ್ರಯಾಣಿಸುವಾಗ ಮೈತ್ರಿಯ ಪೈಲಟ್ ಆಗುವ ಕನಸು ಚಿಗರೊಡೆಯಿತು. ಅವರು 8ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಸೂರತ್‌ನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಸಮಯದಲ್ಲಿ, ಈ ವಿಮಾನವನ್ನು ಹೇಗೆ ಹಾರಿಸುತ್ತಾರೆ ಎಂದು ಮೈತ್ರಿ ತಮ್ಮ ತಂದೆಯನ್ನು ಕೇಳಿದರು ಮತ್ತು ತಂದೆ ಪೈಲಟ್ ಎಂದು ಉತ್ತರಿಸಿದಾಗ, ಪೈಲಟ್ ಹೇಗೆ ಆಗುತ್ತಾರೆ? ನಾನು ದೊಡ್ಡವಳಾದ ಮೇಲೆ ವಿಮಾನವನ್ನು ಹಾರಿಸುತ್ತೇನೆ ಎಂದು ಆ ಕ್ಷಮದಲ್ಲಿ ಪ್ರತಿಕ್ರಿಯಿಸಿದ್ದಾಳೆ ಪುಟ್ಟ ಹುಡುಗಿ.
ಮೈತ್ರಿ ಸೂರತ್‌ನ ಖಾಸಗಿ ಶಾಲೆಯಲ್ಲಿ 12ನೇ ತರಗತಿವರೆಗೆ ಓದಿದರು. ಇದರ ಜೊತೆಗೆ ಅವರು ಮುಂಬೈನ ವಿಮಾನಯಾನ ಕಂಪನಿಯಲ್ಲಿ ಪೈಲಟ್ ತರಬೇತಿ ಪಡೆದರು. ಇದಾದ ನಂತರ ಆಕೆ ಮುಂದಿನ
ಕೋರ್ಸ್‌ಗಳಿಗಾಗಿ ಅಮೆರಿಕಕ್ಕೆ ಹೋಗಲು ಬಯಸಿದರು. ಆದರೆ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ.
ಮಗಳ ಕನಸನ್ನು ಈಡೇರಿಸಲು ತಂದೆ ಕಾಂತಿಭಾಯ್ ಪಟೇಲ್ ಬ್ಯಾಂಕುಗಳಿಂದ ಸಾಲ ಪಡೆಯಲು ಹೋದರು, ಆದರೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿತು. ಎಲ್ಲಿಂದಲೂ ಹಣವನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಾಗ, ಮಗಳ ತರಬೇತಿ ಫೀಸ್‌ಗಾಗಿ ಮೈತ್ರಿ ತಂದೆ ತಮ್ಮ ಸಂಪೂರ್ಣ ಜಮೀನು ಮಾರಿದರು.
ಈ ರೀತಿಯಾಗಿ, 2019ರಲ್ಲಿ, ಮೈತ್ರಿ ಪೈಲಟ್ ತರಬೇತಿಗಾಗಿ ಅಮೆರಿಕಕ್ಕೆ ಹೋದರು. ಅಲ್ಲಿ ಅವರು 18 ತಿಂಗಳ ತರಬೇತಿಯನ್ನು ಕೇವಲ 11 ತಿಂಗಳಲ್ಲಿ ಕಠಿಣ ಪರಿಶ್ರಮದಿಂದ ಪೂರೈಸಿದರು. ಈ ರೀತಿಯಾಗಿ, ಅವರು ಅಲ್ಲಿ ವಿ ವಾಣಿಜ್ಯ ಪರವಾನಗಿಯನ್ನು ಸಹ ಪಡೆದರು.
ಮೈತ್ರಿ ಈಗ ಭಾರತದಲ್ಲಿ ವಿಮಾನ ಹಾರಿಸಲು ಬಯಸಿದ್ದಾರೆ. ಇದಕ್ಕಾಗಿ, ಈಗ ಅವರು ಇಲ್ಲಿ ಲೈಸೆನ್ಸ್ ಪಡೆಯಬೇಕು. ಭವಿಷ್ಯದಲ್ಲಿ ತಾನು ಕ್ಯಾಪ್ಟನ್ ಆಗಲು ಬಯಸುತ್ತೇನೆ ಮತ್ತು ಜಂಬೋ ಜೆಟ್ ಹಾರಲು ಬಯಸುತ್ತಾರಂತೆ. ಮೈತ್ರಿಯ ತಂದೆ ಕಾಂತಿಭಾಯಿ ಪಟೇಲ್ ಸೂರತ್ ಜಿಲ್ಲೆಯ ಓಲ್ಪಾಡ್ ಪ್ರದೇಶದ ಶೆರ್ಡಿ ಗ್ರಾಮದಲ್ಲಿ ರೈತ. ಮೈತ್ರಿ ಅವರ ತಾಯಿ ರೇಖಾ ಪಟೇಲ್ ಸೂರತ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಇಡೀ ಕುಟುಂಬ ಸೂರತ್‌ನಲ್ಲಿ ವಾಸಿಸುತ್ತಿದೆ.