ಆಕೆಯ ಡ್ಯಾನ್ಸ್ ನೋಡಿದ್ರೆ ಜನ ಅಮಲೇರಿ ಕುಣಿಯುತ್ತಾರಂತೆ, ಯಾರು ಈ ಗೌತಮಿ ಪಾಟೀಲ್
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಲಾವಣಿ ನೃತ್ಯ ಕುರಿತಂತೆ ಭಾರಿ ವಿವಾದ ಸೃಷ್ಟಿಯಾಗಿತ್ತು. ಗೌತಮಿ ಪಾಟೀಲ್ ಎಂಬ ಲಾವಣಿ ನೃತ್ಯಗಾರ್ತಿಯಿಂದಾಗಿ ಕಾಂಟ್ರವರ್ಸಿ ಉಂಟಾಗಿತ್ತು. ಆಕೆ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯ ಮಾಡುತ್ತಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ಗೌತಮಿ ಪಾಟೀಲ್ ಯಾರು ಅನ್ನೋದನ್ನು ನೋಡೋಣ.

ಮಹಾರಾಷ್ಟ್ರ ಎಂದರೆ ನೆನಪಾಗೋದು ಅಲ್ಲಿನ ಜನಪದ ನೃತ್ಯ ಲಾವಣಿ (Lavani Dance). 18 ಮತ್ತು 19 ನೇ ಶತಮಾನದಲ್ಲಿ ಮಹಾರಾಷ್ಟ್ರ ರಾಜ್ಯವು ಸಂಘರ್ಷ ಮತ್ತು ಪ್ರಕ್ಷುಬ್ಧತೆಯಲ್ಲಿ ಸಿಲುಕಿದಾಗ ಹೋರಾಡುತ್ತಿರುವ ಸೈನಿಕರಿಗೆ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ರೂಪವಾಗಿ ಲಾವಣಿ ನೃತ್ಯವು ಹುಟ್ಟಿಕೊಂಡಿತು.
ಈಗ ಮಹಾರಾಷ್ಟ್ರದಲ್ಲಿ ಲಾವಣಿ ನೃತ್ಯ ಕಾಂಟ್ರವರ್ಸಿ ಹುಟ್ಟು ಹಾಕಿದೆ. ಇದಕ್ಕೆ ಕಾರಣ ಗೌತಮಿ ಪಾಟೀಲ್. ಸೋಶಿಯಲ್ ಮೀಡಿಯಾದಲ್ಲಿ ಸಕತ್ ಪಾಪ್ಯುಲರ್ ಆಗಿರುವ ಗೌತಮಿ ಪಾಟೀಲ್ (Gauthami Patil)ಯಾಕೆ ಈಗ ಕಾಂಟ್ರವರ್ಸಿಗೆ ಒಳಗಾಗಿದ್ದಾರೆ ಅಂದ್ರೆ ಅವರು ಮಾಡೊ ಅಶ್ಲೀಲ ನೃತ್ಯದಿಂದಾಗಿ.
ಗೌತಮಿ ಪಾಟೀಲ್ ಒಬ್ಬ ನರ್ತಕಿಯಾಗಿದ್ದು, ಲಾವಣಿ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಲಾವಣಿ ನೃತ್ಯದಲ್ಲಿ ಅಶ್ಲೀಲ ಚಲನೆಗಳನ್ನು ತೋರಿಸಿದ್ದರಿಂದ ಅವರ ಒಂದು ವೀಡಿಯೊ ವೈರಲ್ ಆಗಿತ್ತು. ಅವರು ಅನೇಕ ಉತ್ಸವ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಗೌತಮಿ ಪಾಟೀಲ್ ಅವರು 1996 ರಲ್ಲಿ ಭಾರತದ ಮಹಾರಾಷ್ಟ್ರದ ಧುಲೆಯ ಶಿಂಡ್ಖೇಡಾದಲ್ಲಿ ಜನಿಸಿದರು ಮತ್ತು ಈಕೆಗೆ ಕೇವಲ ಇಪ್ಪೇತೇಳು ವರ್ಷ. ಗೌತಮಿ ಪಾಟೀಲ್ ಖಾಂಡೇಶ್ನ ಶಿಂಧ್ಖೇಡಾ ಗ್ರಾಮದವರು. ಆಕೆಯ ತಂದೆಯ ಗ್ರಾಮ ಚಾಪ್ಲಾ. ಶಿಂಡ್ಖೇಡಾ ಅವಳ ತಾಯಿಯ ಗ್ರಾಮವಾಗಿದೆ.
ಗೌತಮಿಯ ತಂದೆ ಅವಳು ಮಗುವಾಗಿದ್ದಾಗ ಯಾವುದೋ ಕಾರಣಕ್ಕಾಗಿ ಅವಳನ್ನು ತೊರೆದಿದ್ದರು. ಆಕೆ ತನ್ನ ಸೋದರಮಾವನೊಂದಿಗೆ ಬೆಳೆದಳು. ಗೌತಮಿ ಎಂಟನೇ ತರಗತಿಯಲ್ಲಿದ್ದಾಗ ಪುಣೆಗೆ ಬಂದಿದ್ದಳು. ಮನೆಯಲ್ಲಿನ ಪರಿಸ್ಥಿತಿಯಿಂದಾಗಿ ಅವಳು ಶಿಕ್ಷಣದಲ್ಲಿ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ, ಬಳಿಕ ಆಕೆ ನೃತ್ಯದತ್ತ ಒಲವು ತೋರಿದಳು.
ಗೌತಮಿ ಮೊದಲು ಬ್ಯಾಕ್ ಡ್ಯಾನ್ಸರ್ (back dancer)ಆಗಿ ಕೆಲಸ ಮಾಡಿದರು. ಬಳಿಕ ಅವರು ಲಾವಣಿ ನೃತ್ಯದ ಮೂಲಕ ಜನಪ್ರಿಯತೆ ಗಳಿಸಿದರು. ಇತ್ತೀಚೆಗೆ ಗೌತಮಿ ಪಾಟೀಲ್ ಅವರ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಅವರು ನೃತ್ಯದಲ್ಲಿ ಕೆಲವು ಅಶ್ಲೀಲ ಕ್ರಿಯೆಗಳನ್ನು ಮಾಡಿದುದರಿಂದ ವಿವಾದಕ್ಕೆ ಕಾರಣವಾಗಿದ್ದಾರೆ.
ಇದು ವಿವಾದಕ್ಕೆ ಗುರಿಯಾಗಿರೋದಕ್ಕೂ ಒಂದು ಕಾರಣ ಇದೆ. ಲಾವಣಿ ಅನ್ನುವುದು ಒಂದು ಜಾನಪದ ಹಾಡು ಮತ್ತು ನೃತ್ಯ ಪ್ರಕಾರ (folk dance). ಹೆಚ್ಚಾಗಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುವ ಗೌತಮಿ ಪಾಟೀಲ್ ಡ್ಯಾನ್ಸ್ ನೋಡಲು ಯುವಜನತೆ ಕಿಕ್ಕಿರಿದು ಸೇರುತ್ತಾರೆ. ಇವಳ ಡ್ಯಾನ್ಸ್ ನೋಡಿ ಡ್ರಗ್ಸ್ ತೆಗೆದುಕೊಂಡವರಂತೆ ಅಮಲೇರಿ ಕುಣಿಯುತ್ತಾರೆ.
ಇದೀಗ ಜನಪದ ನೃತ್ಯದಲ್ಲಿ ಅಶ್ಲೀಲತೆ ಪ್ರದರ್ಶಿಸಿದಕ್ಕಾಗಿ ಆಕೆಯ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ಕಳೆದ ವಾರ ಎನ್‌ಸಿಪಿಯ ಸಾಂಸ್ಕೃತಿಕ ಘಟಕದ (NCP Cultural Wing) ಸಭೆಯಲ್ಲಿ ಖ್ಯಾತ ಲಾವಣಿ ನೃತ್ಯಗಾರ್ತಿ ಮೇಘಾ ಘಾಡ್ಗೆ ಎಂಬಾಕೆ ಇದರ ಬಗ್ಗೆ ಸಿಡಿದುಬಿದ್ದಳು. ಆಕೆಯ ದೂರನ್ನು ಪವಾರ್ ಗಂಭೀರವಾಗಿ ಪರಿಗಣಿಸಿದರು. ತಮ್ಮ ಪಕ್ಷದಲ್ಲಿ ಲಾವಣಿ ಮಾಡೋದನ್ನು ನಿಷೇಧಿಸಿದ್ದಾರೆ.
ಗೌತಮಿ ಅಶ್ಲೀಲ ನೃತ್ಯದ ವಿಡಿಯೋ ವೈರಲ್ (video viral) ಆದ ಬಳಿಕ ಈಕೆ ಸಿಕ್ಕಾಪಟ್ಟೆ ಫೆಮಸ್ ಆಗಿದ್ದರು. ಆದರೆ ವಿವಾದಕ್ಕೆ ತುತ್ತಾದ ಬಳಿಕ ಈಕೆ ತನ್ನ ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಳು. 'ನಾನು ತಪ್ಪು ಮಾಡಿದೆ. ಕ್ಷಮೆ ಯಾಚಿಸಿದ್ದೇನೆ ಮತ್ತು ನಾನು ಬದಲಾಗಿದ್ದೇನೆ. ಮತ್ತೆಂದೂ ಹಾಗೆ ಮಾಡೋದಿಲ್ಲ ಎಂದು ಆಕೆ ಹೇಳಿದ್ದಾಳೆ.