ಬಾಡಿ ಲೋಷನ್ ಇಲ್ಲಾಂದ್ರೆ ಏನಂತೆ ತೆಂಗಿನಕಾಯಿ ಹಾಲಿದ್ರೂ ಸಾಕು
First Published Dec 6, 2020, 3:58 PM IST
ಗೊಂಬೆಯಂತ ಮುಖ ನಿಮ್ಮದಾಗಬೇಕೆ? ಹಾಗಿದ್ದರೆ ನೀವು ಮುಖಕ್ಕೆ ತೆಂಗಿನ ಹಾಲನ್ನು ಬಳಸಿ. ಈ ಹಾಲಿನಲ್ಲಿ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿ ಕೊಬ್ಬು, ಖನಿಜಾಂಶ ಮುಂತಾದ ಪೌಷ್ಟಿಕಾಂಶಗಳಿವೆ. ಇದು ಚರ್ಮದಲ್ಲಿ ನೆರಿಗೆ ಮೂಡದಂತೆ ತಡೆಯುತ್ತದೆ ಮತ್ತು ಮುಖಕ್ಕೆ ಚಿನ್ನದಂತ ಕಾಂತಿಯನ್ನು ನೀಡುತ್ತದೆ. ಇದರಿಂದ ಬೇರೆ ಏನೇನು ಪ್ರಯೋಜಗಳಿವೆ ನೋಡೋಣ...

ತೆಂಗಿನ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ. ಬಳಿಕ ಮುಖವನ್ನು ಬೆರಳಿನಿಂದ ವೃತ್ತಾಕಾರವಾಗಿ ಉಜ್ಜಿ. 15 ನಿಮಿಷದ ನಂತರ ಶುಭ್ರ ಬಟ್ಟೆಯೊಂದನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ತೆಗೆದು ಅದರಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖ ಹೊಳೆಯುತ್ತದೆ.

ತೆಂಗಿನ ಹಾಲು ಬಾಡಿ ಲೋಷನ್‌ನಂತೆಯೂ ಕೆಲಸ ಮಾಡುತ್ತದೆ. ಸ್ನಾನ ಮಾಡುವ ಮುನ್ನ ಇದನ್ನು ಮೈಮೇಲೆ ಲೋಷನ್‌ನಂತೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಮೃದುವಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?