ಗರ್ಭಿಣಿಗೆ ಹಿಂಗಾದರೆ ಹುಟ್ಟೋ ಮಗು ಹೆಣ್ಣೋ, ಗಂಡೋ ಎಂಬುದನ್ನು ಸೂಚಿಸುತ್ತಂತೆ!
ಗರ್ಭಧಾರಣೆಯು ಒಂದು ತಾಯಿಯಾಗುವವಳಿಗೆ ಒಂದು ಅದ್ಭುತ ಅನುಭವ. ಹೊಸ ಮಗುವಿನ ಆಗಮನಕ್ಕಾಗಿ ಕಾಯುವುದು, ಅವರಿಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ಅಥವಾ ಮುದ್ದಾದ ಶಿಶುವಿನ ಬಟ್ಟೆಗಳನ್ನು ಖರೀದಿಸುವುದು ಹೀಗೆ ತಾಯಿ ಹಲವು ಕೆಲಸಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಳ್ಳುತ್ತಾಳೆ. ಅಂತರ್ಜಾಲದ ಪ್ರಕಾರ, ನೀವು ಗಂಡು ಅಥವಾ ಹೆಣ್ಣು ಮಗುವನ್ನು ಹೊಂದಿದ್ದೀರಾ ಎಂದು ತಿಳಿಸುವ ಕೆಲವು ಗರ್ಭಾವಸ್ಥೆ ಲಕ್ಷಣಗಳು ಇವೆ! ಅವುಗಳಲ್ಲಿ ಎಲ್ಲವೂ ನಿಜವಲ್ಲದಿರಬಹುದು. ಆದರೆ ಇಂಥ ನಂಬಿಕೆ ಜನರಲ್ಲಿ ಇದೆ.
ಕೇವಲ ಮೋಜಿಗಾಗಿಯಾದರೂ, ಈ ಆಟಗಳು ಮತ್ತು ಚಿಹ್ನೆಗಳು ಮಗುವಿನ ಆಗಮನವನ್ನು ಸಂಭ್ರಮಿಸಲು ಒಂದು ಮೋಜಿನ ವಿಧಾನವಾಗಿರಬಹುದು! ಗರ್ಭಿಣಿ ತಾಯಿ ನೋಡಬೇಕಾದ ಕೆಲವು ಚಿಹ್ನೆಗಳ ಬಗ್ಗೆ ಹೇಳುತ್ತೇವೆ. ಇದು ನೂರಕ್ಕೆ ನೂರು ಸತ್ಯ ಎನ್ನಲಾಗುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಸತ್ಯವಾಗಿದ್ದೂ ಇವೆ.
ಗರ್ಭಾವಸ್ಥೆಯ ಹೊಳಪು
ಮುಖದಲ್ಲಿ ಅವ್ಯಕ್ತವಾದ ಹೊಳಪು ಇದೆಯೆ? ಒಂದು ಗಂಡು ಮಗುವನ್ನು ಪಡೆಯಲು ಹೊರಟಿದ್ದೀರಿ ಎಂದರ್ಥ! ಒಂದು ವೇಳೆ, ನಯವಾದ ಮುಖ ಮತ್ತು ಮೊಡವೆಗಳು, ಹೆಣ್ಣು ಮಗುವಿನ ಜನನದೊಂದಿಗೆ ಸಂಬಂಧ ಹೊಂದಿದೆ!
ಆಹಾರ ಬಯಕೆಗಳ ವಿಧ
ಪ್ರತಿ ತಾಯಂದಿರು ಗರ್ಭಧಾರಣೆಯ ವಿಚಿತ್ರ ಬಯಕೆಗಳನ್ನು ಅನುಭವಿಸುತ್ತಾರೆ. ಆಹಾರ ಆಯ್ಕೆಗಳು ಮಗುವಿನ ಲಿಂಗವನ್ನು ಊಹಿಸಲೂ ಸಹಾಯ ಮಾಡಬಹುದು, ಎನ್ನುತ್ತಾರೆ ಹಿರಿಯರು.
ಉದಾಹರಣೆಗೆ- ಅತಿಯಾದ ಸಕ್ಕರೆ ಆಹಾರ ತಿನ್ನೋ ಬಯಕೆಗಳು ಹೆಣ್ಣು ಮಗುವನ್ನು ಹೊಂದಿರಬಹುದು! ಹುಳಿ ಆಹಾರಗಳ ಹಂಬಲವಾಗಿದ್ದರೆ, ಅದು ಗಂಡು ಮಗುವಿನ ಬರುವಿಕೆ ಎಂದು ಸೂಚಿಸುತ್ತದೆ.
ಮಗುವಿನ ಹೃದಯ ಬಡಿತ
ಮುಂದಿನ ಬಾರಿ ವೈದ್ಯರ ಬಳಿ ಹೋದಾಗ, ಮಗುವಿನ ಹೃದಯ ಬಡಿತದ ಬಗ್ಗೆ ಗಮನ ಕೊಡಿ. ಪ್ರತಿ ನಿಮಿಷಕ್ಕೆ 140ಕ್ಕೂ ಹೆಚ್ಚು ಬಾರಿ ಬಡಿದುಕೊಂಡರೆ ಹೊಟ್ಟೆಯಲ್ಲಿ ಇರೋ ಮಗು ಹೆಣ್ಣು. ಗಂಡು ಶಿಶುವಿನ ಹೃದಯ ಬಡಿತ ನಿಧಾನವಾಗಿರುತ್ತದೆ.
ಬೆಳಗಿನ ಕಾಯಿಲೆಯ ತೀವ್ರತೆ
ವಾಕರಿಕೆ ಮತ್ತು ಮಾರ್ನಿಂಗ್ ಸಿಕ್ನೆಸ್ ಗರ್ಭಿಣಿಯರಲ್ಲಿ ಸಾಮಾನ್ಯ, ಭಯಾನಕ ಗರ್ಭಧಾರಣೆಯ ಚಿಹ್ನೆಗಳು! ತೀವ್ರವಾದ ಬೆಳಗಿನ ಕಾಯಿಲೆಯಿಂದ ಬಳಲುತ್ತಿದ್ದರೆ, ಮೊದಲ ಮೂರು ತಿಂಗಳ ನಂತರವೂ ಸಹ ಅದು ಹಾಗೆ ಮುಂದುವರೆದರೇ ಹೆಣ್ಣು ಮಗುವೆಂದೇ ಗೆಸ್ ಮಾಡುತ್ತಾರೆ.
ಹೊಟ್ಟೆಯ ಗೋಚರತೆ
ಹೊಕ್ಕಳ ಕೆಳಗೆ ಮತ್ತು ಹೊಟ್ಟೆ ಸುತ್ತ ಕಪ್ಪು ಗೆರೆ ಗುರುತಿಸಿದರೆ, ಗಂಡು ಮಗುವನ್ನು ಹೊಂದಬಹುದು ಎಂದು ಸಾಮಾನ್ಯವಾಗಿ ಪರಿಗಣಿಸಲಾಗುವುದು!
ಹೆಚ್ಚು ಅಥವಾ ಕಡಿಮೆ ತೂಕ :
ಕೆಲವು ಪುರಾಣಗಳ ಪ್ರಕಾರ, ಕಡಿಮೆ ತೂಗುವ ಹೊಟ್ಟೆ ಗಂಡು ಮಗುವನ್ನು ಸೂಚಿಸುತ್ತದೆ, ಆದರೆ ಹೆಚ್ಚು ಹೊಟ್ಟೆ ಎಂದರೆ ಹೆಣ್ಣು ಮಗುವಿನ ಬರುವಿಕೆ ಸೂಚಿಸುತ್ತದೆ.
ಯಾವ ಬದಿಯಲ್ಲಿ ಮಲಗುತ್ತೀರಿ?
ಗರ್ಭಿಣಿ ಹೊಟ್ಟೆಯೊಂದಿಗೆ ನಿದ್ರೆ ಮಾಡುವುದು ಕಷ್ಟದ ಸಂಗತಿಯೇ ಆಗಿದೆ. ಎಡಭಾಗದಲ್ಲಿ ಮಲಗುವ ಮಹಿಳೆಯರು ಗಂಡು ಮಗುವನ್ನು ಹೊಂದಿರಬಹುದು, ಬಲ ಮಗುಲಲ್ಲಿ ಮಲಗಲು ಇಷ್ಟಪಡುವವರು ಹೆಣ್ಣು ಮಗುವನ್ನು ನಿರೀಕ್ಷಿಸುತ್ತಾರೆ ಎಂದು ಅಜ್ಜಿಯರು ಹೇಳುತ್ತಾರೆ!