MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bigg Boss Kannada 13
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • Life
  • Women
  • ಗರ್ಭಿಣಿಯ ಮುಖ ಹೊಳೆಯುತ್ತಿದ್ರೆ ಹೆಣ್ಣು ಮಗು ಹುಟ್ಟುತ್ತಂತೆ… ಇದು ನಿಜಾನ?

ಗರ್ಭಿಣಿಯ ಮುಖ ಹೊಳೆಯುತ್ತಿದ್ರೆ ಹೆಣ್ಣು ಮಗು ಹುಟ್ಟುತ್ತಂತೆ… ಇದು ನಿಜಾನ?

ಗರ್ಭಿಣಿ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಹೊಟ್ಟೆ ಆಕಾರದಲ್ಲಿ ಬದಲಾವಣೆ, ಮುಖದಲ್ಲಿ ಬದಲಾವಣೆ ಹೀಗೆ… ಆದರೆ ಜನರು ಒಂದಕ್ಕೊಂದು ಅರ್ಥ ಕಲ್ಪಿಸಿಕೊಂಡು ಸಲಹೆ ನೀಡುತ್ತಾರೆ. ಅವುಗಳಲ್ಲಿ ಕೆಲವು ಸುಳ್ಳಾಗಿರಬಹುದು, ಇನ್ನೂ ಕೆಲವು ಸತ್ಯ. ಗರ್ಭಧಾರಣೆಗೆ ಸಂಬಂಧಿಸಿದ ಮಿಥ್ಯೆಗಳು ಮತ್ತು ಸತ್ಯಗಳು ಯಾವುವು ಎಂದು ತಿಳಿಯಿರಿ

2 Min read
Author : Suvarna News
Published : Jan 30 2023, 05:50 PM IST
Share this Photo Gallery
  • FB
  • TW
  • Linkdin
  • Whatsapp
18

ಗರ್ಭಾವಸ್ಥೆಯಲ್ಲಿ, ಮಹಿಳೆಗೆ ನಡೆಯುವುದರಿಂದ ಹಿಡಿದು ತಿನ್ನುವುದು ಮತ್ತು ಮಲಗುವವರೆಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗುತ್ತದೆ.  ಅನೇಕ ಬಾರಿ, ಕುಟುಂಬ ಸದಸ್ಯರು ಗರ್ಭಿಣಿ ಮಹಿಳೆಗೆ ಕೆಲವು ಕೆಲಸದ ಬಗ್ಗೆ ಪದೇ ಪದೇ ಅಡ್ಡಿಪಡಿಸುತ್ತಾರೆ. ಆದರೆ ಜನರು ಹೇಳುವ ಎಲ್ಲಾ ವಿಷಯಗಳು ನಿಜವಾಗಿರೋದಿಲ್ಲ. ಕೆಲವೊಮ್ಮೆ ಅದು ಗರ್ಭಾವಸ್ಥೆಯಲ್ಲಿ (pregnancy) ಸಾಮಾನ್ಯವಾಗಿ ಕಂಡು ಬರುವ ವಿಷಯವಾಗಿರುತ್ತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಗರ್ಭಧಾರಣೆ ಸಂದರ್ಭದಲ್ಲಿ ಜನರು ನೀಡುವ ಸಲಹೆಗಳಲ್ಲಿ ಕೆಲವು ಸತ್ಯ ಮತ್ತು ಕೆಲವು ಸುಳ್ಳು ಕೂಡಿರುತ್ತವೆ. ಗರ್ಭಧಾರಣೆಗೆ ಸಂಬಂಧಿಸಿದ ಇಂತಹ ಮಿಥ್ಯೆಗಳ (pregnancy myths) ಸತ್ಯವೇನು ಎಂದು ತಿಳಿಯೋಣ. ಆ ಮೂಲಕ ನಿಮ್ಮ ಪ್ರೆಗ್ನೆನ್ಸಿ ಪಿರಿಯೇಡ್ ನ್ನು ಯಾವುದೇ ಟೇನ್ಶನ್ ಇಲ್ಲದೇನೆ ಆರಾಮವಾಗಿ ಕಳೆಯಿರಿ. 

38
ಮಗು ಯಾವುದೆಂದು ಪತ್ತೆ ಮಾಡಬಹುದು

ಮಗು ಯಾವುದೆಂದು ಪತ್ತೆ ಮಾಡಬಹುದು

ಗರ್ಭಾವಸ್ಥೆಯಲ್ಲಿ ಬೇಬಿ ಬಂಪ್ (baby bump)ಆಕಾರವು ಗರ್ಭಾಶಯದೊಳಗಿನ ಮಗುವಿನ ಸ್ಥಾನವನ್ನು ಅವಲಂಬಿಸಿರುತ್ತದೆ. ಆದರೂ ಹೆಚ್ಚಿನ ಜನ ಗರ್ಭಿಣಿಯ ಹೊಟ್ಟೆಯ ಆಕಾರವನ್ನು ನೋಡಿ ಮಗು ಹೆಣ್ಣೋ, ಗಂಡು ಎಂಬುದನ್ನು ಹೇಳುತ್ತಾರೆ. ಆದರೆ ನಿಜವಾಗಿಯೂ ಹೊಟ್ಟೆ ನೋಡುವ ಮೂಲಕ ಮಗುವಿನ ಲಿಂಗವನ್ನು ಗುರುತಿಸಲಾಗುವುದಿಲ್ಲ. 

48
ಮುಖದ ಹೊಳೆಯುತ್ತಿದ್ದರೆ ಹೆಣ್ಣು ಮಗು

ಮುಖದ ಹೊಳೆಯುತ್ತಿದ್ದರೆ ಹೆಣ್ಣು ಮಗು

ಗರ್ಭಾವಸ್ಥೆಯಲ್ಲಿ ಮಹಿಳೆಯ ಮುಖದ ಹೊಳಪನ್ನು (shining face) ನೋಡುವುದು ಮಗುವಿನ ಲಿಂಗವನ್ನು ಬಹಿರಂಗಪಡಿಸುತ್ತದೆ ಎಂದು ಜನರು ಹೇಳುತ್ತಾರೆ. ತಜ್ಞರ ಪ್ರಕಾರ, ಇದು ಸುಳ್ಳು. ಗರ್ಭಾವಸ್ಥೆಯನ್ನು ಮಹಿಳೆ ತಿನ್ನುವ ಆಹಾರದಿಂದಾಗಿ ಮುಖದಲ್ಲಿ ಹೊಳಪು ಮೂಡುತ್ತದೆ. ಇದು ಹುಟ್ಟಲಿರುವ ಮಗು ಹೆಣ್ಣು, ಗಂಡು ಎಂಬುದನ್ನು ನಿರ್ಧರಿಸೋದಿಲ್ಲ.
 

58
ಮಾರ್ನಿಂಗ್ ಸಿಕ್ ನೆಸ್

ಮಾರ್ನಿಂಗ್ ಸಿಕ್ ನೆಸ್

ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ನಾವು ಮಾರ್ನಿಂಗ್ ಸಿಕ್ ನೆಸ್ (morning sickness) ಸಮಸ್ಯೆ ಕಂಡಿರುತ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ತಲೆತಿರುಗಿದ ಅನುಭವ ಆಗೋದು, ಆಹಾರದ ಪರಿಮಳ ಬಂದ ಕೂಡಲೇ ವಾಕರಿಕೆ ವಾಂತಿಯ ಅನುಭವ ಆಗುತ್ತೆ. ಆದರೆ ಮಾರ್ನಿಂಗ್ ಸಿಕ್ ನೆಸ್ ನಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಹುಟ್ಟಲಿರುವ ಮಗುವಿಗೆ ಬೇಕಾದ ಪೌಷ್ಠಿಕಾಂಶ ಪಡೆಯುವುದಿಲ್ಲ ಎಂಬುದು ತಪ್ಪು. 
 

68
ಸಾಮಾನ್ಯ ಸಮಸ್ಯೆ

ಸಾಮಾನ್ಯ ಸಮಸ್ಯೆ

ಮಾರ್ನಿಂಗ್ ಸಿಕ್ ನೆಸ್ ಅನ್ನೋದು ಗರ್ಭಿಣಿಯರಿಗೆ ಮೊದಲ ತ್ರೈ ಮಾಸಿಕದಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ ಎಂದು ವೈದ್ಯರು ನಂಬುತ್ತಾರೆ. ಇದರಿಂದ ಹೊಟ್ಟೆಯಲ್ಲಿರುವ ಮಗು ಸರಿಯಾದ ಪೋಷಕಾಂಶ ಪಡೆಯೋದಿಲ್ಲ ಅನ್ನೋದೆಲ್ಲ ನಿಜವಲ್ಲ. 

78
ವ್ಯಾಯಾಮದಿಂದ ಹಾನಿ

ವ್ಯಾಯಾಮದಿಂದ ಹಾನಿ

ಗರ್ಭಾವಸ್ಥೆಯಲ್ಲಿ ವ್ಯಾಯಾಮ (exercise in pregnancy) ಮಾಡುವುದರಿಂದ ಮಗುವಿಗೆ ಹಾನಿಯಾಗುತ್ತದೆ ಅನ್ನೋದನ್ನು ನಾವು ಹೆಚ್ಚಾಗಿ ಕೇಳಿರುತ್ತೇವೆ, ಆದರೆ ಅದು ಸಂಪೂರ್ಣವಾಗಿ ತಪ್ಪು. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಮಹಿಳೆಯರಿಗೆ ಪ್ರಯೋಜನಕಾರಿ. ಇದರಿಂದ ನಾರ್ಮಲ್ ಡೆಲಿವರಿಯಾಗಲು ಸಹಾಯವಾಗುತ್ತೆ.

88
ಪ್ರೆಗ್ನೆನ್ಸಿ ಮತ್ತು ಕಾಫಿ (pregnancy and coffee)

ಪ್ರೆಗ್ನೆನ್ಸಿ ಮತ್ತು ಕಾಫಿ (pregnancy and coffee)

ಪ್ರೆಗ್ನೆನ್ಸಿಯಲ್ಲಿ ಹೈಡ್ರೇಟ್ ಆಗಿರೋದು ತುಂಬಾ ಮುಖ್ಯ, ಹಾಗಂತ ಕೆಫೆನ್ ಹೆಚ್ಚಿರುವ ಪಾನೀಯ ಹೆಚ್ಚಿನ ಪ್ರಮಾಣದಲ್ಲಿ ಸೇವಿಸೋದು ಹಾನಿಕಾರಕ. ಗರ್ಭಿಣಿಯರು ಸಣ್ಣ ಪ್ರಮಾಣದಲ್ಲಿ ಕಾಫಿ ಕುಡಿದರೆ ಯಾವುದೇ ಹಾನಿಯಿಲ್ಲ. ಆದರೆ, ದಿನಕ್ಕೆ ಮೂರು ಕಪ್ ಗಿಂತ ಹೆಚ್ಚು ಚಹಾ ಅಥವಾ ಕಾಫಿ ಕುಡಿಯಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಜೀವನಶೈಲಿ
ಗರ್ಭಿಣಿ ಮಹಿಳೆ
 

Latest Videos
Recommended Stories
Recommended image1
ಮುಖದ ಮೇಲಿನ ಮೊಡವೆ ಸುಲಭವಾಗಿ ನಿವಾರಿಸಲು ಈ ಮನೆಮದ್ದು ಬಳಸಿ
Recommended image2
ರವೆ ಇದ್ರೆ ಸಾಕು ದಿಢೀರ್ ಅಂತ ಮಾಡಬಹುದು ಆರೋಗ್ಯಕರ ತರಕಾರಿ ಕಡುಬು
Recommended image3
Pattu Saree Blouse Designs: ಯುವತಿಯರಿಗಾಗಿ ಟ್ರೆಂಡಿಂಗ್ ರೇಷ್ಮೆ ಸೀರೆ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved