#HomeRemedies ಹೊಟ್ಟೆ ಸಮಸ್ಯೆಯಿಂದ ಹಿಡಿದು ಮನೆ ಕ್ಲೀನ್‌ವರೆಗೆ ಇದು ಬೆಸ್ಟ್
ಈಗಿನ ಜೀವನ ಶೈಲಿಯಲ್ಲಿ ನಾವು ಆರೋಗ್ಯಕರ ಆಹಾರ ಸೇವಿಸುವ ಬದಲು ಫಾಸ್ಟ್ಫುಡ್ ಮೊರೆ ಹೋಗುವುದೇ ಹೆಚ್ಚು. ಹೀಗಾಗಿಯೇ ಇತ್ತೀಚಿಗೆ ದಿನಗಳಲ್ಲಿ ದೊಡ್ಡವರು, ಸಣ್ಣವರು ಎಲ್ಲರಿಗೂ ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ಹಲವರು ಮಾತ್ರೆಗಳ ಮೊರೆ ಹೋದರೆ, ಕೆಲವರು ಮನೆ ಮದ್ದುಗಳನ್ನು ಟ್ರೈ ಮಾಡುತ್ತಾರೆ. ನೀವೂ ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಾವಿಂದು ನಿಮಗೆ ಸುಲಭ ಪರಿಹಾರವನ್ನು ನೀಡಲಿದ್ದೇವೆ. ಇದು ಕೇವಲ ಹೊಟ್ಟೆ ಸಮಸ್ಯೆಯನ್ನು ಮಾತ್ರವಲ್ಲ ಮನೆ ಕ್ಲೀನ್ ಮಾಡುವುದರಲ್ಲೂ ಸಹಾಯ ಮಾಡಲಿದೆ.

ಚಿಟಿಕಿಯಲ್ಲಿ ಸಮಸ್ಯೆ ಪರಿಹರಿಸಲಿದೆ ENO:
ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಅಥವಾ ಆಮ್ಲೀಯತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಇನೋ (ENO) ಬಳಸಿ ಕ್ಷಣ ಮಾತ್ರದಲ್ಲಿ ಅದನ್ನು ತೊಡೆದು ಹಾಕಬಹುದಾಗಿದೆ.

ಇನೋವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾತ್ರವಲ್ಲ, ಬೇಕಿಂಗ್ ಮತ್ತು ಸ್ಟೀಮ್ ಮಾಡಲು ಸಹ ಬಳಸಲಾಗುತ್ತದೆ. ಹೌದು, ಇನೋ ಉದರ ಸಂಬಂಧಿತ ಸಮಸ್ಯೆಗಳಿಗೆ ಮಾತ್ರವಲ್ಲದೆ ಸ್ವಚ್ಛತೆಯಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

ಆಭರಣಗಳು ಹೊಳೆಯುತ್ತವೆ :
ದೈನಂದಿನ ಬಳಕೆಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹೆಚ್ಚಾಗಿ ಕಲೆಗಟ್ಟುತ್ತವೆ. ಈ ಸಂದರ್ಭದಲ್ಲಿ, ಇನೋ ಸಹಾಯದಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು. ಒಂದು ಬಟ್ಟಲಿನಲ್ಲಿ ಬಿಸಿನೀರನ್ನು ತೆಗೆದುಕೊಂಡು, ಅದರಲ್ಲಿ ಒಂದು ಪ್ಯಾಕ್ ಇನೋ ಹಾಕಿ. ನಂತರ ಆಭರಣಗಳನ್ನು ಈ ನೀರಿನಲ್ಲಿ ಹಾಕಿ .

ಆಭರಣಗಳನ್ನು ಅದನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಹಾಗೆ ಬಿಡಿ. 15 ನಿಮಿಷಗಳ ನಂತರ, ಇನೋ ನೀರಿನಿಂದ ಆಭರಣಗಳನ್ನು ಹೊರತೆಗೆದಾಗ ಅದು ಹೊಳೆಯುವಂತೆ ಕಾಣುತ್ತದೆ.

ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು:
ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕೂಡ ಇನೋ ಬಳಸಬಹುದು. ಹಲವು ಬಾರಿ ಒಲೆಯ ಮೇಲೆ ಏನಾದರು ಇಟ್ಟು ಬೇರೆ ಕೆಲಸದಲ್ಲಿ ತೊಡಗಿದಾಗ ಪಾತ್ರೆ ಸುಟ್ಟು ಕರಕಲಾಗುತ್ತದೆ. ಈ ರೀತಿಯ ಪಾತ್ರೆ, ಪ್ಯಾನ್ ಮತ್ತು ಗ್ಯಾಸ್ ಬರ್ನರ್ಗಳನ್ನು ಸ್ವಚ್ಛಗೊಳಿಸಲು ಇನೋ ಉತ್ತಮ ಆಯ್ಕೆಯಾಗಿದೆ.

ಸುಟ್ಟು ಕರಕಲಾದ ಪಾತ್ರೆಗಳನ್ನು ಇನೋ ಬಳಸಿ ಸ್ವಚ್ಛಗೊಳಿಸಲು, ಒಂದು ಟಬ್‌ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ 3-4 ಪ್ಯಾಕೆಟ್ ಇನೋ ಹಾಕಿ. ಬಳಿಕ ಸುಟ್ಟ ಪಾತ್ರೆಗಳನ್ನು ಈ ಟಬ್‌ನಲ್ಲಿ ಹಾಕಿ ರಾತ್ರಿಯಿಡಿ ಬಿಡಿ. ಬೆಳಿಗ್ಗೆ ಎದ್ದು ನಿಂಬೆ ಮತ್ತು ಉಪ್ಪಿನ ಸಹಾಯದಿಂದ ಈ ಪಾತ್ರೆಗಳನ್ನು ಸ್ಕ್ರಬ್ ಮಾಡಿ. ಪಾತ್ರೆಗಳು ಹೊಸ ಪಾತ್ರೆಗಳಂತೆ ಪಳ ಪಳ ಹೊಳೆಯುತ್ತವೆ.

ಕೈಯಿಂದ ಈರುಳ್ಳಿ-ಬೆಳ್ಳುಳ್ಳಿ ವಾಸನೆ ತೆಗೆಯಲು
ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೈಯಲ್ಲಿ ಮಸಾಲೆಗಳು, ಈರುಳ್ಳಿ ಮತ್ತು ಬೆಳ್ಳುಳ್ಳಿ ವಾಸನೆ ಮೂಡುವುದು ತುಂಬಾ ಸಾಮಾನ್ಯ. ಅನೇಕ ಬಾರಿ ಈ ವಾಸನೆಯು ಕೈಯಲ್ಲಿ ದೀರ್ಘಕಾಲ ಉಳಿಯುತ್ತದೆ.

ಇನೋ ಸಹಾಯದಿಂದ, ಕೈ ವಾಸನೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ ಇನೋ ಪ್ಯಾಕ್ ಅನ್ನು ಕೈಗಳಿಗೆ ಉಜ್ಜಿ ಕೈಗಳನ್ನು ನೀರಿನಿಂದ ಸ್ವಚ್ಛಗೊಳಿಸಿ. ಕೈಯಿಂದ ಬರುವ ವಾಸನೆ ಮಾಯವಾಗುತ್ತದೆ.