ಆಮ್ಲೆಟ್ ಸೈಡಿಗಿಡಿ, ಮೊಟ್ಟೆಯೂ ಸೌಂದರ್ಯ ವರ್ಧಕ ಎಂಬುವುದು ನೆನಪಿಡಿ
First Published Dec 4, 2020, 4:34 PM IST
ಮೊಟ್ಟೆಯು ಅತ್ಯುತ್ತಮ ಪೋಷಕಾಂಶವುಳ್ಳ ಆಹಾರ ಮಾತ್ರವಲ್ಲ ನಿಮ್ಮ ಮುಖದಲ್ಲಿ ಯೌವನ ಉಳಿಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತ್ವಚೆಯ ಹೊಳಪನ್ನು ಹೆಚ್ಚಿಸಲು ಕೂಡ ಇದು ನೆರವಾಗುತ್ತದೆ. ಇನ್ನು ಮುಂದೆ ಮೊಟ್ಟೆ ತಂದಾಗ ಅದನ್ನು ತಿನ್ನುವುದರ ಜೊತೆಗೆ ಒಂದಿಷ್ಟು, ತಲೆಗೆ, ಮೈಗೆ ಹಚ್ಚಿದರೆ ಸೌಂದರ್ಯ ಹೆಚ್ಚೋದು ಖಂಡಿತಾ. ಹಾಗಾದ್ರೆ ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣಾ..

ಮೊಟ್ಟೆಯಲ್ಲಿ ಹಲವಾರು ಪೋಷಕಾಂಶಗಳು ಅಡಗಿದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಡಯಟ್ನಲ್ಲಿ ಮೊಟ್ಟೆಯನ್ನು ಸೇರಿಸುವುದು ಉತ್ತಮ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಇದರಿಂದ ಆರೋಗ್ಯದ ಜೊತೆಗೆ ಸೌಂದರ್ಯ ಕೂಡ ಹೆಚ್ಚುತ್ತದೆ.

ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗದಲ್ಲಿ ಹತ್ತಿಯ ಉಂಡೆಯನ್ನು ಅದ್ದಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮುಖದಲ್ಲಿ ರಕ್ತದ ಪರಿಚಲನೆ ಸುಧಾರಿಸಲು ನೆರವು ನೀಡಿ ಮುಖ ತಾಜಾತನದಿಂದ ಹೊಳೆಯುವಂತೆ ಮಾಡುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?