ಪ್ಯಾರಿಸ್ ಪ್ರವಾಸದಲ್ಲಿ ರೆಡ್ ಬ್ಯೂಟಿಯಾಗಿ ಕಂಡ ಕಾಂಗ್ರೆಸ್ ನಾಯಕಿ ಕುಸುಮಾ
ದುರಂತ ಅಂತ್ಯ ಕಂಡ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ, ಇದೀಗ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿರುವ ನಾಯಕಿ ಕುಸುಮಾ ಹನುಮಂತರಾಯಪ್ಪ ಪ್ಯಾರಿಸ್ ಪ್ರವಾಸ ಮಾಡಿದ್ದಾರೆ. ರೆಡ್ ಬ್ಯೂಟಿಯಾಗಿ ಮಿಂಚಿದ್ದಾರೆ.

ಇತ್ತೀಚೆಗೆ ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ಎಸೆತ ಪ್ರಕರಣ ಸಂಬಂಧ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಎಂದು ಬಿಜೆಪಿ ಆರೋಪಿಸಿದ್ದರೆ, ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಇದು ಶಾಸಕ ಮುನಿರತ್ನ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿದ ನಾಟಕ ಎಂದು ಆರೋಪಿಸಿ ಭಾರಿ ಕೋಲಾಹಲ ಸೃಷ್ಟಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕುಸುಮಾ ಇದೀಗ ಪ್ಯಾರಿಸ್ ಪ್ರವಾಸ ಮುಗಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಘಟನೆ, ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಕುಸುಮಾ ಹನುಮಂತರಾಯಪ್ಪ ಕನಿಷ್ಠ ವರ್ಷದಲ್ಲೊಂದು ವಿದೇಶ ಪ್ರವಾಸ ಮಾಡುತ್ತಾರೆ. ಈ ಬಾರಿ ಪ್ಯಾರಿಸ್ ಪ್ರವಾಸ ಮಾಡಿದ್ದಾರೆ. ಪ್ಯಾರಿಸ್‌ನ ಅತ್ಯಂತ ಜನಪ್ರಿಯ ಐಫೆಲ್ ಟವರ್ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಪ್ಯಾರಿಸ್‌ನ ಹೆಗ್ಗುರುತಾಗಿರುವ ಐಫೆಲ್ ಟವರ್ ಮುಂದೆ ರೆಡ್ ಬ್ಯೂಟಿಯಾಗಿ ಕುಸುಮಾ ಹನುಮಂತರಾಯಪ್ಪ ಕಾಣಿಸಿಕೊಂಡಿದ್ದಾರೆ. ಮತ್ತಷ್ಟು ಯಂಗ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ಕುಸುಮಾ ಹನುಮಂತರಾಯಪ್ಪ, ಕಲೆ ಮತ್ತು ಸೌಂದರ್ಯದ ಸಮಾಗಮ ಪ್ಯಾರಿಸ್ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ.
ಪ್ಯಾರಿಸ್ ಪ್ರವಾಸದ ಎರಡು ಫೋಟೋಗಳನ್ನು ಕುಸುಮಾ ಹನುಮಂತರಾಯಪ್ಪ ಹಂಚಿಕೊಂಡಿದ್ದಾರೆ. ಒಂದು ಐಫೆಲ್ ಟವರ್ ಮುಂದೆ ಕ್ಲಿಕ್ಕಿಸಿದ ಫೋಟೋ ಆದರೆ ಮತ್ತೊಂದು ಫೋಟೋ ಫ್ಯಾರಿಸ್‌ನ ಜಗತ್ ಪ್ರಸಿದ್ಧ ಆರ್ಚ್ ಡೆ ಟ್ರೊಯಂಫೆ ಮುಂದೆ ಕ್ಲಿಕ್ಕಿಸಿದ್ದಾರೆ. ಪ್ಯಾರಿಸ್‌ನಲ್ಲಿರುವ ಐತಿಹಾಸಿಕ ಸ್ಮಾರಕ ಇದಾಗಿದೆ. ಮೊದಲ ವಿಶ್ವಯುದ್ಧದ ವೇಳೆ ಫ್ರೆಂಚ್ ಸೈನಿಕರು ವೀರಾವೇಶದಿಂ ಹೋರಾಡಿ ಗೆಲುವು ಸಾಧಿಸಿತ್ತು. ಈ ಯುದ್ದದಲ್ಲಿ ಫ್ರಾನ್ಸ್‌ನ ಸಾವಿರಾರು ಯೋಧರು ಮೃತಪಟ್ಟಿದ್ದರು. ಈ ಯೋಧರ ಸ್ಮಾರಕ ಇದಾಗಿದೆ.
ಕಳೆದ ವರ್ಷ ಕುಸುಮಾ ಹನುಮಂತರಾಯಪ್ಪ ಅಮೆರಿಕ ಪ್ರವಾಸ ಮಾಡಿದ್ದರು. ಅಮೆರಿಕದ ಹಲವು ಪ್ರವಾಸಿ ತಾಣಗಳಿಗೆ ಕುಸುಮಾ ಭೇಟಿ ನೀಡಿದ್ದರು. ಪ್ರಮುಖವಾಗಿ ನ್ಯೂಯಾರ್ಕ್‌ನ ಅರ್ಟೆಕ್ ಹೌಸ್ ಸೇರಿದಂತೆ ಹಲವು ತಾಣಗಳಿಗೆ ಬೇಟಿ ನೀಡಿದ್ದರು. ಈ ವೇಳೆ ಕುಸುಮಾ ದೇಶ ಸುತ್ತು ಕೋಶ ಓದು ಎಂದು ಬರೆದುಕೊಂಡಿದ್ದರು.
ಜೀವನದ ಹಲವು ಅಧ್ಯಾಯಗಳಿಗೆ ಮುನ್ನುಡಿ ಬರೆದ ದೇಶ ಅಮೆರಿಕ ಎಂದು ಕುಸುಮಾ ಪ್ರವಾಸದ ಕುರಿತು ಹೇಳಿಕೊಂಡಿದ್ದರು. ಇದೇ ವೇಳೆ ಅಮೆರಿಕದ ಅತ್ಯಾಧುನಿಕ ತಂತ್ರತ್ರಾನ, ಸಂವಾದಾತ್ಮಕ ಡಿಜಿಟಲ್ ಪ್ರದರ್ಶನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಕುಸುಮಾ ಆಕರ್ಷಕ ಬ್ಯೂಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕರ್ನಾಟಕದ ಜನಪ್ರಿಯ ಐಎಎಸ್ ಅಧಿಕಾರಿ ಡಿಕೆ ರವಿ ದುರಂತ ಅಂತ್ಯದ ಬಳಿಕ ಕುಸುಮಾ 2020ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಡಿಕೆ ರವಿ ಅವರ ಸಮಾಜ ಸೇವೆ ನನಗೆ ಪ್ರೇರಣೆ ಎಂದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕುಸುಮಾ ಹೇಳಿದ್ದರು.ಇದೀಗ ಕಾಂಗ್ರೆಸ್‌ನಲ್ಲಿ ಸಕ್ರೀಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.