ಚಳಿಗಾಲದಲ್ಲಿ ಸುಂದರ ತ್ವಚೆ ಪಡೆಯಲು ಕ್ಯಾರೆಟ್ ಪ್ಯಾಕ್
First Published Dec 27, 2020, 2:15 PM IST
ವಾಯುಮಾಲಿನ್ಯವು ನಿಮ್ಮ ಚರ್ಮವನ್ನು ಶುಷ್ಕ ಮಾಡಿದೆಯೇ? ಶುಷ್ಕ ಚರ್ಮ ಹೊಂದಿರುವ ಜನರು ಚರ್ಮವನ್ನು ಮೃದುಗೊಳಿಸಲು ಮಾಯಿಶ್ಚರೈಸರ್ ಅನ್ನು ಹೆಚ್ಚಾಗಿ ಬಳಸುತ್ತಾರೆ ಆದರೆ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಮತ್ತೆ ಮತ್ತೆ ಹಚ್ಚುವುದು ನಿಮಗೆ ಸಾಕಾಗಿಹೋಗಿದೆಯೇ? ಈ ರೀತಿಯಾದರೆ ಅಡುಗೆಮನೆಯಲ್ಲಿ ನೋಡಿ, ಅಲ್ಲಿ ಚಳಿಗಾಲದಲ್ಲಿ ತಿನ್ನುವ ತರಕಾರಿಗಳು ತುಂಬಿರುತ್ತವೆ. ಅವುಗಳೆ ನಿಮಗೆ ಸಹಾಯ ಮಾಡುತ್ತದೆ.

ಈ ತರಕಾರಿಗಳಲ್ಲಿ ಒಂದು ಕ್ಯಾರೆಟ್ ಆಗಿದೆ, ಚಳಿಗಾಲದಲ್ಲಿ ನೀವು ಕ್ಯಾರೆಟ್ನೊಂದಿಗೆ ನಿಜವಾಗಿಯೂ ಉತ್ತಮವಾದ ಫೇಸ್ ಪ್ಯಾಕ್ ಮಾಡಬಹುದು. ಈ ಫೇಸ್ ಪ್ಯಾಕ್ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿವೆ ಮತ್ತು ಅದನ್ನು ಹಲವು ವಿಧಗಳಲ್ಲಿ ಬಳಸಬಹುದು. ಕ್ಯಾರೆಟ್ ಫೇಸ್ ಮಾಸ್ಕ್ ಅನ್ನು ಹೇಗೆ ಬಳಸಬೇಕೆಂದು ತಿಳಿಯೋಣ.

ಕ್ಯಾರೆಟ್, ಜೇನು ಮತ್ತು ನಿಂಬೆ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ಮಾಡಲು, ಮೇಲೆ ತಿಳಿಸಿದ ವಸ್ತುಗಳನ್ನು ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಬೇಕು ಮತ್ತು ಮೃದುತ್ವಕ್ಕಾಗಿ ಒಂದು ಟೀಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ (ನಿಮ್ಮ ಚರ್ಮ ಒಣಗಿದ್ದರೆ). ಇದನ್ನು ಸ್ವಚ್ಛ ಚರ್ಮದ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ. ಪ್ಯಾಕ್ ಒಣಗಿದ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಬಹುದು. ಇದನ್ನು ಮಾಡುವುದರಿಂದ ಹೊಳೆಯುವ ಚರ್ಮವನ್ನು ಪಡೆಯುತ್ತೀರಿ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?