ಸ್ಟೀಲ್ ಪಾತ್ರೆಗಳನ್ನು ಪಳ ಪಳ ಹೊಳೆಯುವಂತೆ ಮಾಡಲು ಇಲ್ಲಿವೆ ಸೂಪರ್ ಟ್ರಿಕ್ಸ್
First Published Dec 26, 2020, 4:21 PM IST
ಅಡುಗೆ ಮನೆಯಲ್ಲಿ ವಿವಿಧ ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಇದರಲ್ಲಿ ಸ್ಟೀಲ್, ಗಾಜು, ಪಿಂಗಾಣಿ, ಹಿತ್ತಾಳೆ, ಅಲ್ಯೂಮಿನಿಯಂ ಪಾತ್ರೆಗಳು ಇರುತ್ತವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಸ್ಟೀಲ್ ಪಾತ್ರೆಗಳನ್ನು ಬಳಸಲಾಗುತ್ತದೆ. ಆಹಾರ ತಟ್ಟೆಯಿಂದ ಹಿಡಿದು ಒಂದು ಚಿಕ್ಕ ಚಮಚವೂ ಸ್ಟೀಲ್‌ನದ್ದೇ ಆಗಿರುತ್ತದೆ. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವಲ್ಲದ, ವಿಷಕಾರಿಯಲ್ಲದ ವಸ್ತುಗಳಿಂದ ತಯಾರಿಸಲ್ಪಡುತ್ತವೆ. ಆದರೆ ಎಷ್ಟೋ ಸಲ ಸ್ಟೀಲ್ ಪಾತ್ರೆಗಳು ಹಳೆಯದಾಗಿ, ಸವೆದು ಹೋಗಿ ಬಿಡುತ್ತವೆ. ಹಾಗಿದ್ದರೆ ಹಳೆಯ ಪಾತ್ರೆಗಳು ಹೊಸ ಪಾತ್ರೆಗಳಂತೆ ಹೊಳೆಯುವಂತೆ ಮಾಡುವ ಟ್ರಿಕ್ಸ್ ಇಲ್ಲಿವೆ.

ಅಡುಗೆಯಿಂದ ಹಿಡಿದು ಆಹಾರಗಳವರೆಗೆ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಸ್ಟೀಲ್ ಪಾತ್ರೆಗಳನ್ನು ಬಳಸಲಾಗುತ್ತದೆ. ಸ್ಟೇನ್ ಲೆಸ್ ಸ್ಟೀಲ್ ನ ಬಲದಿಂದಾಗಿ, ಇದನ್ನು ಬಳಸಲು ತುಂಬಾ ಸುಲಭವಾಗುತ್ತದೆ. ಸ್ಟೀಲ್ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಬಹಳ ದಿನಗಳವರೆಗೆ ಹೊಸದರಂತೆ ರಕ್ಷಿಸುವುದು ತುಂಬಾ ಕಠಿಣ ಕೆಲಸ.

ಮೊದಲು, ಸ್ಟೀಲ್ ಪಾತ್ರೆಗಳನ್ನು ಊಟಮಾಡಿದ ನಂತರ ಆದಷ್ಟು ಬೇಗ ಸ್ವಚ್ಛಗೊಳಿಸಬೇಕು, ಇದರಿಂದ ಪಾತ್ರೆಗೆ ಆಮ್ಲಜನಕ ದೊರೆಯಬಹುದು ಮತ್ತು ಅದರ ಹೊಳಪು ಹಾಗೇ ಉಳಿಯುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?