ಬ್ಲಾಕ್ ಹೆಡ್ಸ್ ಕಿರಿಕಿರಿ: ಈ ಸಮಸ್ಯೆಯನ್ನು ಹೀಗೆ ನಿವಾರಿಸಿ
First Published Dec 6, 2020, 3:43 PM IST
ಬ್ಲ್ಯಾಕ್ ಹೆಡ್ ಎಂಬುದು ಚರ್ಮದ ನಿರ್ಬಂಧಿತ ಬೆವರು / ಸೆಬಾಸಿಯಸ್ ನಾಳವಾಗಿದ್ದು, ಇದನ್ನು ವೈದ್ಯಕೀಯವಾಗಿ ಓಪನ್ ಕಾಮೆಡೊ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಹೆಡ್ ಕಣ್ಣಿಗೆ ಕಾಣಿಸುತ್ತವೆ ಮತ್ತು ಅವುಗಳನ್ನು ನಿವಾರಣೆ ಮಾಡುವುದು ನೋವಿನ ಸಂಗತಿಯಾಗಿದೆ. ಅವು ಮೂಲತಃ ಚರ್ಮದ ರಂಧ್ರಗಳಾಗಿವೆ, ಅದು ಸತ್ತ ಚರ್ಮ ಮತ್ತು ಎಣ್ಣೆಯಿಂದ ಮುಚ್ಚಿಹೋಗುತ್ತದೆ, ಗಾಳಿಗೆ ಒಡ್ಡಿಕೊಳ್ಳುವುದರಿಂದ ಇವು ಕಪ್ಪು ಬಣ್ಣದಿಂದ ಕೂಡಿರುತ್ತದೆ.

ನೀವು ಬ್ಲಾಕ್ ಹೆಡ್ ನಿವಾರಣೆ ಮಾಡಲು ಫಾಸಿಯಾಲ್ ಅಥವಾ ಮೂಗಿನ ಸ್ಟ್ರಿಪ್ ಆರಿಸುವ ಬದಲು, ಅವುಗಳನ್ನು ನೈಸರ್ಗಿಕವಾಗಿ ಮತ್ತು ನೋವು ಇಲ್ಲದೆ ತೊಡೆದುಹಾಕಬಹುದು. ಹೌದು, ಇದು ನಿಜ. ಬ್ಲಾಕ್ ಹೆಡ್ ಸಮಸ್ಯೆ ನಿವಾರಣೆ ಮಾಡಲು ನೀವು ಮನೆಯಲ್ಲಿಯೇ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು. ಆ ಮೂಲಕ ಸುಲಭವಾಗಿ ಯಾವುದೇ ನೋವು ಇಲ್ಲದೆ ಬ್ಲಾಕ್ ಹೆಡ್ ನಿವಾರಣೆ ಮಾಡಬಹುದು.

ಅಡುಗೆ ಸೋಡಾ: ಮೊಡವೆಗಳ ವಿರುದ್ಧ ಹೋರಾಡುವುದರ ಹೊರತಾಗಿ, ಅಡಿಗೆ ಸೋಡಾವನ್ನು ಬ್ಲಾಕ್ ಹೆಡ್ ನಿವಾರಣೆ ಮಾಡಲು ಸಹ ಬಳಸಬಹುದು. ಅಡಿಗೆ ಸೋಡಾ ನೈಸರ್ಗಿಕ ಎಫ್ಫೋಲಿಯೇಟರ್ ಆಗಿದೆ, ಮತ್ತು ಅದರ ಗುಣಲಕ್ಷಣಗಳು ಯಾವುದೇ ಕಿರಿಕಿರಿ ಮತ್ತು ಸೋಂಕು ಮೊದಲಾದ ಯಾವುದೇ ಸಮಸ್ಯೆ ನೀಡುವುದಿಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?