ಒಣ ಚರ್ಮಕ್ಕೆ ಮನೆಯಲ್ಲಿಯೇ ತಯಾರಿಸಿ ಬೆಸ್ಟ್ ಫೇಸ್ ಮಾಸ್ಕ್
ಒಣ ಚರ್ಮ ಸಮಸ್ಯೆ ಹೊಂದಿದ್ದರೆ ಎಷ್ಟು ಕಷ್ಟ ಅನ್ನೋದು ಅನುಭವಿಸಿದೋರಿಗೇನೆ ಗೊತ್ತು. ಒಣ ಚರ್ಮ ಸಮಸ್ಯೆ ಇದ್ದೋರು ಯಾವ ಕ್ರೀಂ ಹಚ್ಚಿದರೂ ಸಮಸ್ಯೆ ಬೇಗ ಕಡಿಮೆಯಾಗೋದಿಲ್ಲ. ಅದಕ್ಕಾಗಿ ಕ್ರೀಂ ಬಿಟ್ಟು ಮನೆಯಲ್ಲೇ ತಯಾರಿಸಿರುವ ಫೇಸ್ ಮಾಸ್ಕ್ ನಿಂದ ಉಪಚರಿಸಿ. ಅವು ತ್ವಚೆಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯಲು ಮುಂದೆ ಓದಿ.
ಎಣ್ಣೆಯಚರ್ಮದಿಂದ ಚರ್ಮವನ್ನು ಶಪಿಸುವುದನ್ನು ಬಹುತೇಕ ಜನರು ನಿಲ್ಲಿಸಲಾರರು. ಆದರೆ ಒಣ ಚರ್ಮ ಹೊಂದಿರುವವರು ಇದಕ್ಕೆ ಹೊರತಲ್ಲ. ಒಣಚರ್ಮ ಮತ್ತು ಒರಟಾದ ಚರ್ಮವು ಟನ್ ನಷ್ಟು ಮಾಯಿಶ್ಚರೈಸರ್ ಹಚ್ಚಿದ ನಂತರವೂ ಸಹ ಹೋಗುವುದಿಲ್ಲ. ಇದು ಹಲವರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಚರ್ಮದ ವಿನ್ಯಾಸವನ್ನು ಸುಧಾರಿಸಲು ಆಳವಾದ ಮಾಯಿಶ್ಚರೈಸೇಶನ್, ಎಕ್ಸ್ ಫೋಲಿಯೇಶನ್ ಮತ್ತು ಟೋನಿಂಗ್ ಗಳು ಮುಖ್ಯವೆಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ, ಆದರೆ ಇದು ಒಣ ಚರ್ಮದ ಸಮಸ್ಯೆಯಲ್ಲ. ಈ ರೀತಿಯ ಚರ್ಮಕ್ಕೆ ಹೆಚ್ಚಿನ ಆರೈಕೆ ಯ ಅಗತ್ಯವಿದೆ. ಆದ್ದರಿಂದ, ಒಣ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುವ ಫೇಸ್ ಪ್ಯಾಕ್ ಗಳ ಕೆಲವು ಅದ್ಭುತ ರೆಸಿಪಿಗಳನ್ನು ನಾವಿಲ್ಲಿ ನೀಡಿದ್ದೇವೆ.
ಸೌತೆಕಾಯಿ ಫೇಸ್ ಪ್ಯಾಕ್ .
ಸೌತೆಕಾಯಿಯು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಇದು ಚರ್ಮವನ್ನು ತಂಪುಗೊಳಿಸುತ್ತದೆ, ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಒಣ ಚರ್ಮವಿರುವಾಗ ತುರಿಕೆಯ ಸಂವೇದನೆ ಉಂಟಾಗುತ್ತದೆ. ಅಂತಹ ಸಮಸ್ಯೆ ಇರುವವರಿಗೆ ಇದು ತುಂಬಾ ಆರಾಮ ಅನಿಸುತ್ತದೆ.
ನಿಮಗೆ ಅಗತ್ಯವಿರುವ ವಸ್ತುಗಳು
1/2 ಸೌತೆಕಾಯಿ
1 ಟೇಬಲ್ ಸ್ಪೂನ್ ಸಕ್ಕರೆ
ಹೇಗೆ ಮಾಡುವುದು
ಎಲ್ಲವನ್ನೂ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.
15 ನಿಮಿಷ ಹಾಗೆ ಬಿಡಿ.
ಬಳಿಕ ತಂಪಾದ ನೀರಿನಿಂದ ಪ್ಯಾಕ್ ತೊಳೆಯಿರಿ.
ಚಂದನ ಫೇಸ್ ಪ್ಯಾಕ್ .
ಚಂದನ (ಸ್ಯಾಂಡಲ್ ವುಡ್) ಇದು ಚರ್ಮದ ಮೇಲೆ ಒಣ ಕಲೆಗಳು, ಫ್ಲೇಕಿನೆಸ್ ಮತ್ತು ಕಿರಿಕಿರಿಯನ್ನು ನಿವಾರಿಸಲು ತುಂಬಾ ಒಳ್ಳೆಯದು. ಈ ಫೇಸ್ ಪ್ಯಾಕ್ ಅನ್ನು ಬಳಸಿದ ನಂತರ ನೀವು ಸ್ಕಿನ್ ಟೋನ್ ಮತ್ತು ಟೆಕ್ಸ್ಚರ್ ನಲ್ಲಿ ಸ್ಪಷ್ಟವಾದ ಸುಧಾರಣೆಯನ್ನು ಕಾಣಬಹುದು.
ನಿಮಗೆ ಅಗತ್ಯವಿರುವ ವಸ್ತುಗಳು
1 ಚಮಚ ಶ್ರೀಗಂಧದ ಪುಡಿ (ಚಂದನ )
1/4 ಟೀ ಚಮಚ ತೆಂಗಿನ ಎಣ್ಣೆ
1 ಚಮಚ ರೋಸ್ ವಾಟರ್
ಹೇಗೆ ಮಾಡುವುದು
ಸೌತೆಕಾಯಿಯ ಸಿಪ್ಪೆ ಸುಲಿದು, ಮ್ಯಾಶ್ ಮಾಡಿ .
ಇದಕ್ಕೆ ಸಕ್ಕರೆ ಯನ್ನು ಸೇರಿಸಿ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಡಿ.
ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ.
ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
ಮೊಟ್ಟೆಯ ಹಳದಿ ಫೇಸ್ ಪ್ಯಾಕ್ .
ಮೊಟ್ಟೆಯ ಬಿಳಿ ಭಾಗವು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ನಿವಾರಿಸಲು ಪ್ರಯೋಜನಕಾರಿಯಾದರೂ, ಹಳದಿಯನ್ನು ವಿರುದ್ಧ ಪರಿಣಾಮಕ್ಕಾಗಿ ಬಳಸಬಹುದು, ಅಂದರೆ ಒಣ ಚರ್ಮವನ್ನು ಗುಣಪಡಿಸಲು ಇದರಲ್ಲಿ ತೇವಾಂಶ ಭರಿತ ಕೊಬ್ಬು ಇದ್ದು ಒಣ ಚರ್ಮವನ್ನು ಹೈಡ್ರೇಟ್ ಮಾಡಿ ಪೋಷಣೆ ಮಾಡುತ್ತದೆ.
ನಿಮಗೆ ಅಗತ್ಯವಿರುವ ವಸ್ತುಗಳು
1 ಮೊಟ್ಟೆಯ ಹಳದಿ
ಒಂದು ಚಮಚ ಜೇನುತುಪ್ಪ
ಹೇಗೆ ಮಾಡುವುದು?
ಮೊಟ್ಟೆಯ ಹಳದಿಯನ್ನು ಜೇನಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡುವವರೆಗೆ ಬೀಟ್ ಮಾಡಿ.
ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ಕಾಲ ಒಣಗಲು ಬಿಡಿ.
ನಂತರ ನೀರಿನಿಂದ ತೊಳೆಯಿರಿ.