ಗಗನಯಾತ್ರಿ ವಧು, ಎಐ ತಂತ್ರಜ್ಞಾನದಲ್ಲಿ ಮೂಡಿದ ಕಲಾವಿದನ ಕೈ ಚಳಕ ವೈರಲ್
ಇತ್ತೀಚಿನ ಕೆಲ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿ ವಿಭಿನ್ನ ರೀತಿಯ ಕಲೆಯನ್ನು ಪ್ರದರ್ಶಿಸುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಸದ್ಯ ಇದೇ ರೀತಿ ಗಗನಯಾತ್ರಿಯ ಎಐ ಫೋಟೋಸ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ.
ಕಲಾವಿದರ ಕಲ್ಪನೆಗಳೇ ಅದ್ಭುತ. ತಮ್ಮ ಕಲ್ಪನೆಯನ್ನು ವಾಸ್ತವದೊಂದಿಗೆ ಸೇರಿಸಿದಾಗ ಅದು ಇನ್ನಷ್ಟು ಅದ್ಭುತವಾಗಿರುತ್ತದೆ. ತಮ್ಮ ಕಲ್ಪನಾಲೋಕದೊಂದಿಗೆ ವಾಸ್ತವವನ್ನು ಸಂಧಿಸುತ್ತ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಇವರ ಕಲ್ಪನೆಗೆ ಒತ್ತಾಸೆ ನೀಡುತ್ತಿರುವ ಕೃತಕ ಬುದ್ಧಿಮತ್ತೆಯಂತೂ (Artificial Intelligence) ಮಾಂತ್ರಿಕಲೋಕವನ್ನೇ ಸೃಷ್ಟಿಸುತ್ತಿದೆ. ಸದ್ಯ ವೈರಲ್ ಆಗಿರೋ ಫೋಟೋದಲ್ಲಿ ಗಗನಯಾತ್ರಿಗಳನ್ನು ಕಲಾವಿದರೊಬ್ಬರು AI ತಂತ್ರಜ್ಞಾನದ ಮೂಲಕ ವಧುವಿನಂತೆ ಸೃಷ್ಟಿಸಿದ್ಧಾರೆ.
ಜಯೇಶ್ ಸಚ್‌ದೇವ್ ಎಂಬ ಕಲಾವಿದ ಗಗನಯಾತ್ರಿಗಳನ್ನು ವಧುವಿನಂತೆ ಚಿತ್ರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿದರು. ಅವರು Instagram ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿದೆ. ಮೂರು ದಿನಗಳ ಹಿಂದೆ ಪೋಸ್ಟ್ ಮಾಡಿರುವ ಈ ಪೋಸ್ಟ್‌ನ್ನು ಸುಮಾರು 8,000 ಜನರು ಇಷ್ಟಪಟ್ಟಿದ್ದಾರೆ.
ವಿವಿಧ ರಾಜ್ಯಗಳ ಪುರುಷರು ಮತ್ತು ಮಹಿಳೆಯರನ್ನು ಕಲ್ಪಿಸಿಕೊಳ್ಳುವುದರಿಂದ ಹಿಡಿದು ದೆಹಲಿಯ ಮಾಲಿನ್ಯದ ವಿರುದ್ಧದ ಹೋರಾಟದವರೆಗೆ, ಕಲಾವಿದರು AI- ರಚಿತವಾದ ಚಿತ್ರಗಳೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ. ಈಗ, ಜಯೇಶ್ ಸಚ್‌ದೇವ್ ಎಂಬ ಕಲಾವಿದ AI ಅನ್ನು ಬಳಸಿಕೊಂಡು ವಧುವಿನಂತೆ ಧರಿಸಿರುವ ಗಗನಯಾತ್ರಿಗಳನ್ನು ದೃಶ್ಯೀಕರಿಸಿದ್ದಾರೆ.
ಜಯೇಶ್ ಸಚ್‌ದೇವ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ 4 ಚಿತ್ರಗಳಲ್ಲಿ, ಗಗನಯಾತ್ರಿಗಳು ವಧುಗಳಂತೆ ಅಲಂಕರಿಸಲ್ಪಟ್ಟಿರುವುದನ್ನು ಕಾಣಬಹುದು. ಮಹಿಳೆಯರು ಕಸೂತಿಯಿಂದ ಅಲಂಕರಿಸಲ್ಪಟ್ಟ ಸ್ಪೇಸ್‌ಸೂಟ್‌ಗಳನ್ನು ಧರಿಸಿದ್ದರು ಮತ್ತು ಅವರಲ್ಲಿ ಕೆಲವರು ಆಭರಣಗಳನ್ನು ಸಹ ಧರಿಸಿದ್ದರು. ಕೆಲವು ಚಿತ್ರಗಳಲ್ಲಿ, ಗಗನಯಾತ್ರಿಗಳು ಧರಿಸಿರುವ ಹೆಲ್ಮೆಟ್‌ಗಳನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ.
ಇದು ತುಂಬಾ ಚೆನ್ನಾಗಿದೆ. ನಿಮ್ಮ ಕಲ್ಪನೆ ಮತ್ತು ಈ ಕಲೆಯಲ್ಲಿ ವ್ಯಕ್ತಗೊಂಡ ತಾಂತ್ರಿಕ ಪರಿಪೂರ್ಣತೆ ಅದ್ಭುತ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು ಸ್ಟಾರ್ ಪ್ಲಸ್ ಬಹೂ ಇನ್ ನಾಸಾ ಎಂದು ತಮಾಷೆ ಮಾಡಿದ್ದಾರೆ. ಈ ಕಲ್ಪನೆ ಬಹಳ ಆಸಕ್ತಿರಕವಾಗಿದೆ. ಭವಿಷ್ಯದಲ್ಲಿ ಗಗನಯಾತ್ರಿ ಆಗಲು ಬಯಸುತ್ತಿರುವ ನನಗೆ ಇದು ಸ್ಫೂರ್ತಿಯುತವಾಗಿದೆ ಎಂದಿದ್ಧಾರೆ ಮತ್ತೊಬ್ಬರು.
'ಮಹತ್ವಾಕಾಂಕ್ಷೆಯ ಗಗನಯಾತ್ರಿಯಾಗಿ, ಈ ರೀತಿಯ ಪ್ರಾತಿನಿಧ್ಯವು ನಿಜವಾಗಿಯೂ ಅದ್ಭುತವಾಗಿದೆ. ಈ ಕಲಾಕೃತಿಗಳನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು' ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು 'ಇದೊಂದು ವಿಶಿಷ್ಟ ಪರಿಕಲ್ಪನೆಯಾಗಿದೆ...ನಾನು ಅದನ್ನು ಪ್ರೀತಿಸುತ್ತಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ.