ವಜೈನಾ ಕ್ಲೀನ್ ಮಾಡಲು ಸಾಬೂನ್ ಬಳಸುವಾಗ ಹುಷಾರ್ !
ಆರೋಗ್ಯವಾಗಿರಲು ಯೋನಿಯ ಸ್ವಚ್ಚತೆಯೂ ತುಂಬಾನೆ ಮುಖ್ಯವಾಗಿದೆ. ಹಾಗಂತ ವಜೈನಾ ಸ್ವಚ್ಚತೆಗೆ ಸಾಬೂನು, ಬಾಡಿ ವಾಶ್ ಬಳಕೆ ಮಾಡೋದು ತುಂಬಾನೆ ಹಾನಿಕಾರಕವಾಗಿದೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡಿ…
ಯೋನಿ (vagina) ದೇಹದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಅಂಗವಾಗಿದೆ. ಹಾಗಾಗಿ ಮಹಿಳೆಯರು ತಮ್ಮ ದೇಹದ ಜೊತೆಗೆ ಯೋನಿಯ ಕಾಳಜಿ ಮತ್ತು ಶುಚಿತ್ವದ ಬಗ್ಗೆಯೂ ಕಾಳಜಿ ವಹಿಸಬೇಕು. ಅನೇಕ ಮಹಿಳೆಯರು ಯೋನಿಯನ್ನು ಸ್ವಚ್ಛಗೊಳಿಸಲು ಸಾಬೂನನ್ನು ಬಳಸುತ್ತಾರೆ. ಇದು ತುಂಬಾ ಅಪಾಯಕಾರಿಯಾಗಬಹುದು. ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿಯೋಣ.
ಸೋಂಕು ಉಂಟಾಗಬಹುದು
ಸಾಬೂನಿನಲ್ಲಿರುವ ರಾಸಾಯನಿಕವು (Chemical) ಯೋನಿಯ ಪಿಎಚ್ ಮಟ್ಟವನ್ನು ಹಾಳು ಮಾಡುತ್ತದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾ ಬೆಳೆಯಲು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಇದನ್ನು ಬಳಕೆ ಮಾಡದೇ ಇರುವುದು ಉತ್ತಮವಾಗಿದೆ.
ತುರಿಕೆ ಮತ್ತು ಶುಷ್ಕತೆ
ಸಾಬೂನಿನ ಬಳಕೆಯಿಂದ, ಯೋನಿಯಲ್ಲಿ ತುರಿಕೆ ಮತ್ತು ಶುಷ್ಕತೆಯಂತಹ (druness and itching) ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಬೂನಿನ ಬದಲಿ ಸ್ವಚ್ಚ ನೀರಿನಿಂದ ಕ್ಲೀನ್ ಮಾಡೋದು ಉತ್ತಮ.
ಕಿರಿಕಿರಿ ಮತ್ತು ಊತ
ಯೋನಿಯ ಮೇಲೆ ಸಾಬೂನಿನ ಬಳಕೆಯು ಶುಷ್ಕತೆಗೆ ಕಾರಣವಾಗುತ್ತದೆ, ಇದು ಯೋನಿಯ ಮೇಲೆ ಕಿರಿಕಿರಿ ಮತ್ತು ಊತವನ್ನು ಉಂಟುಮಾಡುತ್ತದೆ. ಅಲ್ಲದೇ ವಜೈನಾದ ಸುತ್ತಲೂ ದದ್ದುಗಳಿಗೆ ಸಹ ಕಾರಣವಾಗುತ್ತೆ. ಹಾಗಾಗಿ ಹುಷಾರಾಗಿರಿ.
pH ಮಟ್ಟವು ಹದಗೆಡುತ್ತದೆ
ಸಾಬೂನಿನಲ್ಲಿರುವ ರಾಸಾಯನಿಕವು ಯೋನಿಯ ಪಿಎಚ್ ಮಟ್ಟವನ್ನು (pH level) ಹಾಳು ಮಾಡುತ್ತದೆ. ನೈಸರ್ಗಿಕ ಆಮ್ಲ ಅಂದರೆ ಪಿಹೆಚ್ ಮಟ್ಟವು ಯೋನಿಯಲ್ಲಿ ಹೆಚ್ಚಾಗಿರುತ್ತದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ದೂರವಿರಿಸುತ್ತದೆ, ಇದರಿಂದ ಉತ್ತಮ ಬ್ಯಾಕ್ಟೀರಿಯಾ ಬೆಳೆಯುತ್ತದೆ.
ಸಾದಾ ನೀರಿನಿಂದ ಸ್ವಚ್ಛಗೊಳಿಸಿ
ವಾಶ್ ರೂಮ್ ಗೆ ಹೋದ ನಂತರ ಯೋನಿಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಇಲ್ಲಿನ ಚರ್ಮವು ತುಂಬಾನೆ ಹೆಚ್ಚು ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ಸಾದಾ ನೀರನ್ನು ಬಳಸುವುದು ಸರಿ.
ಡಿಯೋ ಅಥವಾ ಸುಗಂಧ ದ್ರವ್ಯವನ್ನು ಬಳಸೋದೆ ಬೇಡ
ಅನೇಕ ಮಹಿಳೆಯರು ತಮ್ಮ ಪಾದಗಳ ನಡುವೆ ಸುಗಂಧ ದ್ರವ್ಯ ಅಥವಾ ಡಿಯೋ (deodorant) ಬಳಸುವ ಅಭ್ಯಾಸವನ್ನು ಹೊಂದಿದ್ದಾರೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದರಲ್ಲಿರುವ ಕೆಮಿಕಲ್ ನಿಂದಾಗಿ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಕಾಟನ್ ಫ್ಯಾಬ್ರಿಕ್ ಒಳ ಉಡುಪುಗಳು
ಯೋನಿಯನ್ನು ಆರೋಗ್ಯಕರವಾಗಿಡಲು ನೀವು ಮಾಡಬೇಕಾಗಿರುವ ಮುಖ್ಯ ಕೆಲಸ ಅಂದ್ರೆ, ಸಂಶ್ಲೇಷಿತ ಬಟ್ಟೆಯಿಂದ ಮಾಡಿದ ಒಳ ಉಡುಪುಗಳ ಬದಲು ಕಾರ್ಟಾನ್ ಅಥವಾ ಹತ್ತಿ ಬಟ್ಟೆಯಿಂದ ಮಾಡಿದ ಒಳ ಉಡುಪುಗಳನ್ನು (innerwear) ಧರಿಸಿ. ಇದರಿಂದ ವಜೈನಾಗೆ ಉಸಿರಾಡಲು ಸಾಧ್ಯವಾಗುತ್ತೆ.