ಹಾಸಿಗೆಯನ್ನು ಕ್ಲೀನ್ ಮಾಡಲು ಇಲ್ಲಿವೆ ಸಖತ್ ಸಿಂಪಲ್ ಟಿಪ್ಸ್

First Published Feb 13, 2021, 8:52 AM IST

ಕ್ಲೀನ್ ಆಗಿರುವ, ತೊಳೆದ ಬೆಡ್ ಶೀಟ್ಸ್ ಮೇಲೆ ಮಲಗುವ ಅದ್ಭುತ ಭಾವನೆ ನಮಗೆಲ್ಲರಿಗೂ ತಿಳಿದಿದೆ. ಯಾರನ್ನೂ ಸಂತೋಷಪಡಿಸಲು ಸ್ವಚ್ಛ ಮತ್ತು ಆರಾಮದಾಯಕವಾದ ಹಾಸಿಗೆ ಸಾಕು. ಆದರೆ, ಅನೇಕ ಜನರು ತಮ್ಮ ಹಾಸಿಗೆಯನ್ನು ಎಂದಿಗೂ ಸ್ವಚ್ಛಗೊಳಿಸುವುದಿಲ್ಲ. ಹಾಸಿಗೆಯನ್ನು ಸ್ವಚ್ಚಗೊಳಿಸದಿದ್ದರೆ ಏನೂ ಆಗುವುದಿಲ್ಲ ಎಂದು ಯೋಚಿಸಿರಬಹುದು. ಆದರೆ ಬೆಡ್ ಶೀಟ್‌ನಂತೆ ಹಾಸಿಗೆಯನ್ನು ಸಹ ವಾಶ್ ಮಾಡಬೇಕಾಗಿರುವುದು ತುಂಬಾ ಮುಖ್ಯ. ವರ್ಷಕ್ಕೆ ಎರಡು ಬಾರಿಯಾದರೂ ಹಾಸಿಗೆ ತೊಳೆಯಲು ಮರೆಯದಿರಿ.