AI ಮೇಲೆ ಅವಲಂಬಿತರಾಗಿದ್ದವರಿಗೆ ಓಪನ್ಎಐ ಶಾಕ್, ವಿಡಿಯೋ ಜನರೇಟರ್ ಸೊರಾ ಸ್ಥಗಿತ
AI ಮೇಲೆ ಅವಲಂಬಿತರಾಗಿದ್ದವರಿಗೆ ಓಪನ್ಎಐ ಶಾಕ್, ವಿಡಿಯೋ ಜನರೇಟರ್ ಸೊರಾ ಸ್ಥಗಿತ, ಚಾಟ್‌ಜಿಪಿಟಿ ಮೂಲಕ ಕ್ರಾಂತಿ ಮಾಡಿರುವ ಓಪನ್ಎಐ ಇದೀಗ ಸೊರಾ ಸೇವೆ ನಿಲ್ಲಿಸಿದೆ. ಚಾಟಜಿಪಪಿಟಿ ವಿಡಿಯೋ ಫೀಚರ್ಸ್ ಕೂಡ ಲಭ್ಯವಿಲ್ಲ

ಓಪನ್ಎಐ ವಿಡಿಯೋ ಜನರೇಟರ್ ಸ್ಥಗಿತ
ವಿಶ್ವದಲ್ಲಿ ಇದೀಗ ಎಐ ಕ್ರಾಂತಿಯಾಗಿದೆ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಎಐ ಸೇವೆಗಳನ್ನು ಬಳಸುತ್ತಿದ್ದಾರೆ. ಕಚೇರಿ ಸೇರಿದತೆ ಎಲ್ಲಾ ಕ್ಷೇತ್ರದಲ್ಲಿ ಎಐ ಬಳಕೆಯಾಗುತ್ತಿದೆ. ಪರಿಣಾಮ ಹಲವರು ಕೆಲಸಕ್ಕೆ ಕುತ್ತು ಬರುತ್ತಿದೆ. ಎಐ ಆಗಮನದ ಬಳಿಕ ಬಹುತೇಕರು ಎಐ ಮೇಲೆ ಅವಲಂಬಿತರಾಗಿದ್ದಾರೆ. ಈ ಪೈಕಿ ಓಪನ್ಎಐನ ಚಾಟ್‌ಜಿಪಿಟಿ ಬಹುತೇಕರು ಬಳಸುತ್ತಿದ್ದಾರೆ. ಇದೇ ಒಪನ್ ಎಐ ತನ್ನ ವಿಡಿಯೋ ಜನರೇಟರ್ ಸೇವೆ ಸ್ಥಗಿತಗೊಳಿಸಿದೆ.
ಸೊರಾ ಆ್ಯಪ್ ಸ್ಥಗಿತ
ಓಪನ್ಎಐ ಸಂಸ್ಥೆ ಚಾಟ್‌ಜಿಪಿಟಿ ಹಲವು ಅಪ್‌ಡೇಟ್‌ನೊಂದಿಗೆ ಲಭ್ಯವಿದೆ. ಆದರೆ ವಿಡಿಯೋ ಜನರೇಟರ್ ಸೊರಾ ಆ್ಯಪ್ ಸ್ಥಗಿತಗೊಳಿಸಲಾಗಿದೆ. ಓಪನ್ ಓಐ ದಿಢೀರ್ ಈ ನಿರ್ಧಾರವನ್ನು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸೊರಾ ಆ್ಯಪ್ ಸ್ಥಗಿತ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದೆ.
ವಿಡಿಯೋ ಕ್ರಿಯೇಶನ್‌ನಿಂದ ರೊಬೋಟಿಕ್ಸ ಬದಲಾವಣೆ
ಓಪನ್ ಎಐ ಇದೀಗ ವಿಡಿಯೋ ಕ್ರಿಯೇಶನ್‌ನಿಂದ ರೊಬೋಟಿಕ್ಸ್ ಹಾಗೂ ಆರ್ಟಿಫೀಶಿಯಲ್ ಜನರಲ್ ಇಂಟಲಿಜೆನ್ಸ್ ಕಡೆ ಹೆಚ್ಚು ಗಮನಕೇಂದ್ರೀಕರಿಸಿದೆ. ಇದರ ಜೊತೆಗೆ ವಿಡಿಯೋ ಕ್ರಿಯೇಶನ್ ವೆಚ್ಚ ದುಬಾರಿಯಾಗುತ್ತಿರುವ ಕಾರಣ ಓಪನ್ಎಐ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಚಾಟ್‌ಜಿಪಿಟಿಯಲ್ಲಿ ವಿಡಿಯೋ ಲಭ್ಯವಿಲ್ಲ
ಸಣ್ಣ ವಿಡಿಯೋ ಸೇರಿದಂತೆ ತಕ್ಷಣಕ್ಕೆ ಚಾಟ್‌ಜಿಪಿಟಿ ಕೂಡ ಬಳಕೆದಾರರಿಗೆ ವಿಡಿಯೋ ಸೇವೆ ನೀಡುತ್ತಿತ್ತು. ಸೊರಾ ಸ್ಥಗಿತದಿಂದ ಇನ್ನು ಮುಂದೆ ಚಾಟ್‌ಜಿಪಿಟಿಯಲ್ಲಿ ವಿಡಿಯೋ ಫೀಚರ್ಸ್ ಲಭ್ಯವಿರುವುದಿಲ್ಲ. ಸೊರಾ ಸ್ಥಗಿತದಿಂದ ಡಿಸ್ನಿ ಜೊತೆಗಿನ ಡೀಲ್ ಕೂಡ ಮುರಿದು ಬಿದ್ದಿದೆ.
ಸೊರಾ ವಿಡಿಯೋ ಸೇವ್ ಕುರಿತು ಕಂಪನಿ ಮಾಹಿತಿ
ಸೊರಾ ಆ್ಯಪ್ ಸ್ಥಗಿತ ಘೋಷಣೆಯಾಗಿದೆ. ಇದೀಗ ಕಂಪನಿ ಶೀಘ್ರದಲ್ಲೇ ಸೊರಾ ಬಳಸಿ ಸೃಷ್ಟಿಸಿರುವ ಎಐ ವಿಡಿಯೋಗಳನ್ನು ಸೇವ್ ಮಾಡುವುದು ಹೇಗೆ, ಉಳಿಸಿಕೊಳ್ಳುವುದು ಹೇಗೆ ಅನ್ನೋ ಕುರಿತು ಮಾರ್ಗಸೂಚಿ ನೀಡಲಿದೆ. ಸೊರಾ ಆ್ಯಪ್ ಹಾಗೂ ಎಪಿಐ ಸಂಪೂರ್ಣ ಸ್ಥಗಿತ ಕುರಿತು ಮಾಹಿತಿ ನೀಡಲಿದೆ.
ಸೊರಾ ವಿಡಿಯೋ ಸೇವ್ ಕುರಿತು ಕಂಪನಿ ಮಾಹಿತಿ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

