ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಾವು ಚಾಟ್ ಜಿಪಿಟಿ ಬಳಸುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ ಎಂದು ಕೇಳಿದಾಗ, ಚಾಟ್ ಜಿಪಿಟಿ 'ಕರ್ನಾಟಕ ಮಾಡೆಲ್' ಅನುಸರಿಸಲು ಸಲಹೆ ನೀಡಿತು ಎಂದು ತಿಳಿಸಿದರು. 

ಬೆಂಗಳೂರು: ಇಂದು ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ತಾವು ಚಾಟ್ ಜಿಪಿಟಿ ಬಳಕೆ ಮಾಡುತ್ತಿರೋದರ ಬಗ್ಗೆ ಹೇಳಿಕೊಂಡಿದ್ದಾರೆ. ಇಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿ ‌ಸದಸ್ಯೆ ಭಾರತಿ ಶೆಟ್ಟಿ ಅವರು ಆಡಳಿತ ಸುಧಾರಣೆಯಲ್ಲಿ ಎಐ ಬಳಕೆಯ ವಿಷಯನ್ನು ಪ್ರಸ್ತಾಪ ಮಾಡಿದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ನಾನೇ ಚಾಟ್ ಜಿಪಿಟಿ ಬಳಸಿದ್ದೇನೆ. ನನ್ನ ಭಾಷಣದ ಬಗ್ಗೆ ಆಪ್ತ ಸಹಾಯಕನಿಗೆ ಕೇಳುತ್ತಿದ್ದೆ. ಯಾಕೆ ಅವರಿಗೆ ಕೇಳ್ತೀರಿ ಎಂದ ನನ್ನ ಮಗಳು, ಚಾಟ್ ಜಿಪಿಟಿ ಹೇಗೆ ಬಳಸಬೇಕು ಎಂದು ತೋರಿಸಿಕೊಟ್ಟಳು. ನಾನು ಅಸ್ಸಾಂಗೆ ಹೋಗಿದ್ದ ಸಂದರ್ಭದಲ್ಲಿ ಚಾಟ್ ಜಿಪಿಟಿ ಬಳಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಅಸ್ಸಾಂ ಚುನಾವಣೆ ಗೆಲ್ಲೋದು ಹೇಗೆ?

ನಾನು ಅಸ್ಸಾಂ ಗೆ ಹೋದಾಗ How to win ಅಸ್ಸಾಂ ಎಲೆಕ್ಷನ್ ಅಂತ ಕೇಳಿದೆ. ಅದನ್ನೆಲ್ಲಾ ಇಟ್ಕೊಂಡು ನಾವು ಎಲೆಕ್ಷನ್ ಮಾಡೋಕೆ ಆಗುತ್ತಾ? ಬೇಕಾದರೆ ನೀವೂ ನನ್ನ ಜೊತೆ ಬನ್ನಿ ಇಲ್ಲೇ ಕೂರೋಣ ನಾನೇ ಮೊಬೈಲ್ ನಲ್ಲಿ ತೋರಿಸ್ತೀನಿ. ಅಸ್ಸಾಂ ಚುನಾವಣೆ ಗೆಲ್ಲೋದು ಹೇಗೆ ಅಂದರೆ ಕರ್ನಾಟಕ ಮಾಡೆಲ್ ಫಾಲೋ ಮಾಡಿ ಅಂತ ತೋರಿಸತ್ತೆ ಎಂದ ಡಿಕೆ ಶಿವಕುಮಾರ್ ತಿಳಿಸಿದರು.

ಚಾಟ್ ಜಿಪಿಟಿ ಹೇಳಿದಂತೆ ಮಾಡೋಕೆ ಆಗಲ್ಲ

How to win ಅಸ್ಸಾಂ ಎಲೆಕ್ಷನ್ ಅಂತ ಹಾಕಿದೆ. ಅದರದ್ದೇ ಒಂದು ರಿಪೋರ್ಟ್ ಬಂತು. ಅದರ ಮೇಲೆ ಚುನಾವಣೆ ಮಾಡೋಕೆ ಆಗುತ್ತಾ ಎಂದ ಉಪಮುಖ್ಯಮಂತ್ರಿಗಳು, ಚಾಟ್ ಜಿಪಿಟಿ ಹೇಳಿದಂತೆ ಮಾಡೋಕೆ ಆಗಲ್ಲ ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಬಿಜೆಪಿಯ ರವಿಕುಮಾರ್, ಎಲೆಕ್ಷನ್ ಗೆಲ್ಲೋಕೆ ನಿಮ್ಮದೇ ಆದ ಸ್ಟ್ರಾಜಟಿ ಇದೆ ಎಂದು ಕಿಚಾಯಿಸಿದರು. ಮಾತು ಮುಂದುವರಿಸಿದ ಡಿಕೆ ಶಿವಕುಮಾರ್, ನಾವು ಇಲ್ಲಿಂದ ಹೊರಗೆ ಹೋಗೋಣ, ಬೇಕಿದ್ರೆ ಮೊಬೈಲ್ ನಲ್ಲಿ ತೋರಿಸತ್ತೇನೆ. If u go to Karnataka model u will win election ಅಂತ ಹೇಳತ್ತದೆ. ಹಾಗೆಲ್ಲಾ ಮಾಡಲು ಆಗುತ್ತಾ ಎಂದು ಹೇಳುವ ಮೂಲಕ ಕರ್ನಾಟಕ ಮಾಡೆಲ್ ನಲ್ಲಿ ಅಸ್ಸಾಂ ಎಲೆಕ್ಷನ್ ಗೆಲ್ಲೋಕೆ ಆಗಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಸೈಬರ್ ಅಪರಾಧಗಳ ಕುರಿತು ಸದನಕ್ಕೆ ಮಾಹಿತಿ ನೀಡಿದ ಪರಮೇಶ್ವರ್

ಕಳೆದ ಐದು ವರ್ಷದಲ್ಲಿ ನಡೆದ ಸೈಬರ್ ಅಪರಾಧಗಳ ಕುರಿತು ಗೋವಿಂದರಾಜು ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಟೆಕ್ನಾಲಜಿ 15 ವರ್ಷದಿಂದ ಈಚೆಗೆ ಹೆಚ್ಚಾಗಿದೆ. ಅದರ ಜೊತೆ ಫ್ರಾಡ್ ಹೇಗೆ ಮಾಡಬಹುದು ಅಂತನೂ ತಿಳಿದುಕೊಂಡರು. ಟೆಕ್ನಾಲಜಿ ಉಪಯೋಗ ಮಾಡಿ ಅಪರಾದ ಕಂಡು ಹಿಡಿದಿದ್ದು ನಾವೇ ಮೊದಲು. ಸೈಬರ್ ಕ್ರೈಂ ಪೊಲೀಸ್ ಠಾಣೆ ಮಾಡಿದ್ದು ನಾವೇ ಎಂದು ತಿಳಿಸಿದರು.

2024 ರಲ್ಲಿ 22,483 ಪ್ರಕರಣಗಳು ಆಗಿವೆ. ದೊಡ್ಡ ಕಂಪನಿ ಎರಡನೇ ಹುದ್ದೆಯಲ್ಲಿರುವವರಿಗೆ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಅವರಿಂದ 30 ಕೋಟಿ ಹಣ ದೋಚಿದ್ದಾರೆ. ಈಗಾಗಲೇ ಅವರನ್ನ ಅರೆಸ್ಟ್ ಮಾಡಿದ್ದಾರೆ. ಇಷ್ಟು ದೊಡ್ಡ ಹಣದ ಪ್ರಕರಣ ಇದಾಗಿದೆ. ಬೇರೆ ರಾಜ್ಯದ ಒಂದು ಇಡೀ ಹಳ್ಳಿ ಇದೇ ಕೆಲಸ ಮಾಡುತ್ತಿದೆ. ನನ್ನ ಅಕೌಂಟ್, ನಿಮ್ಮ ಅಕೌಂಟ್ ಕೂಡ ಸೇಫ್ ಇಲ್ಲ ಎಂದರು.

ಇದನ್ನೂ ಓದಿ: ಪೌರ ಕಾರ್ಮಿಕರ ಸಂಬಳ ಕೇಳಿ ಶಾಕ್ ಆದ್ರು ಬೆಂಗಳೂರಿಗರು; ಡಿಗ್ರಿ ಮಾಡೋದೆಲ್ಲಾ ವೇಸ್ಟ್ ಅಂದ್ರು!

ಸಿಐಡಿ, ಜೈಲಿಗೆ ಸಪರೇಟ್ ಡಿಜಿಪಿ ಇರ್ತಾರೆ. ಅದರಂತೆ ಸೈಬರ್ ಗೂ ಸಪರೇಟ್ ಡಿಜಿಪಿ ಮಾಡಿದ್ದೇವೆ. ಇದಕ್ಕಾಗಿಯೇ ಒಂದು ವಿಂಗ್ ಮಾಡುತ್ತಿದ್ದೇವೆ. 2021 ರಲ್ಲಿ 446 ಕೋಟಿ ಫ್ರಾಡ್ ಆಗಿದೆ. ಇದರಲ್ಲಿ 97 ಕೋಟಿ ರಿಕವರಿ ಮಾಡಿದ್ದೇವೆ. 2024 ರಲ್ಲಿ 2399 ಕೋಟಿ ಫ್ರಾಡ್ ಆಗಿದೆ. ಇದರಲ್ಲಿ 395 ಕೋಟಿ ರಿಕವರಿ ಮಾಡಿದ್ದೇವೆ. 2025 ರಲ್ಲಿ 2200 ಕೋಟಿ ಫ್ರಾಡ್ ಆಗಿದೆ. ಇದರಲ್ಲಿ 231 ಕೋಟಿ ರಿಕವರಿ ಮಾಡಿದ್ದೇವೆ. 2025 ರಲ್ಲಿ 345 ಪ್ರಕರಣದ ಪೈಕಿ 215 ಕೋಟಿ ವಂಚನೆಯಾಗಿದೆ. ಮ್ಯೂಲ್ ಅಕೌಂಟ್ ಗಳು 41 ಸಾವಿರ ಪತ್ತೆ ಹಚ್ಚಿದ್ದೇವೆ.ಈ ವಿಚಾರವಾಗಿ ಈಗಾಗಲೇ ಕ್ರಮ ತೆಗೆದುಕೊಳುತ್ತಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಕ್ಷಮಿಸಿದ್ರೂ ತಿದ್ದಿಕೊಳ್ಳಲಿಲ್ಲ: ಇನಿಯನ ಜೊತೆಗಿನ ಪಲ್ಲಂಗದಾಟಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಹೆಂಡ್ತಿ