- Home
- Technology
- What's New
- ಒಂದು ಕಿಮೀ ಪ್ರದೇಶದಲ್ಲಿ ಕೃತಕ ಮಳೆ ಸುರಿಸಲು ಎಷ್ಟು ಖರ್ಚಾಗುತ್ತೆ? ತಿಳಿದರೆ ಶಾಕ್ ಆಗುತ್ತೆ!
ಒಂದು ಕಿಮೀ ಪ್ರದೇಶದಲ್ಲಿ ಕೃತಕ ಮಳೆ ಸುರಿಸಲು ಎಷ್ಟು ಖರ್ಚಾಗುತ್ತೆ? ತಿಳಿದರೆ ಶಾಕ್ ಆಗುತ್ತೆ!
ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದಾಗಿ ಮಳೆಯ ಪ್ರಮಾಣ ವರ್ಷ ವರ್ಷವೂ ಕಡಿಮೆಯಾಗುತ್ತದೆ. ವಾಡಿಕೆಯಂತೆ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಸವಾಲಾಗಿದೆ.

ಕೃತಕ ಮಳೆ ಸುರಿಸಲು ಎಷ್ಟು ಖರ್ಚಾಗುತ್ತೆ?
ಎನ್‌ನಿನೋ ಪರಿಣಾಮದಿಂದ ಈ ವರ್ಷವೂ ಮುಂಗಾರು ಮಳೆಯ ಕೊರತೆ ಆಗುವ ಆತಂಕ ಎದುರಾಗಿರುವ ಹೊತ್ತಲ್ಲಿ ದೆಹಲಿಯಲ್ಲಿ ಕೃತಕ ಮಳೆಯನ್ನ ಬಳಸಲು ಸಿದ್ಧತೆ ನಡೆಸುತ್ತಿದೆ. ಈ ರೀತಿ ಕೃತಕ ಮಳೆ ಸೃಷ್ಟಿಸಲು ಸಾಧ್ಯವೇ? ಎಷ್ಟು ಖರ್ಚಾಗುತ್ತದೆ ಎಂದೆಲ್ಲ ಜನರು ಅಶ್ಚರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಕೃತಕವಾಗಿ ಮಳೆ ಸೃಷ್ಟಿಸುವ ಯೋಜನೆಯು ಸಾಕಷ್ಟು ದುಬಾರಿಯಾಗಿದೆ. ಕೇವಲ ಒಂದು ಕಿಮೀ ವ್ಯಾಪ್ತಿಯಲ್ಲಿ ಮಳೆ ಸೃಷ್ಟಿಸಲು ಎಷ್ಟು ಖರ್ಚಾಗುತ್ತದೆ ಗೊತ್ತೆ? ಈ ಲೇಖದಲ್ಲಿ ಅದರ ಬಗ್ಗೆ ವಿವರವಾಗಿ ತಿಳಿಯೋಣ.
ಒಂದು ಚ.ಕಿಮೀ ಕೃತಕ ಮಳೆ ಸುರಿಸಲು ಎಷ್ಟು ಖರ್ಚು?
ಮೋಡ ಬಿತ್ತನೆಯ ವೆಚ್ಚವು ಕಾರ್ಯಾಚರಣೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಅಂದರೆ ಇಡೀ ನಗರ ವ್ಯಾಪ್ತಿ ಹೊಂದಿರುವ ದೊಡ್ಡ ಯೋಜನೆಗಳಿಗೆ ಕಾರ್ಯಾಚರಣೆಗೆ ಪ್ರತಿ ಚದರ ಕಿಲೋಮೀಟರಿಗೆ ₹20,000 ರಷ್ಟು ಕಡಿಮೆ ವೆಚ್ಚವಾಗಬಹುದು, ಆದರೆ ವಿಮಾನ ಪ್ರಯಾಣ, ರಾಸಾಯನಿಕಗಳು ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಪರಿಗಣಿಸಿದಾಗ, ವೆಚ್ಚವು ಪ್ರತಿ ಚದರ ಕಿಲೋಮೀಟರಿಗೆ ₹1,00,000 ಕ್ಕೆ ಹೆಚ್ಚಬಹುದು.
ಕೃತಕ ಮಳೆಗಾಗಿಯೇ ವಿಶೇಷ ವಿಮಾನಗಳು
ಕೃತಕ ಮಳೆಗಾಗಿ ಬಳಸುವ ವಿಶೇಷ ವಿಮಾನಗಳು ಹಾರಾಟ ನಡೆಸುವುದು ತುಂಬಾ ದುಬಾರಿಯಾಗಿದೆ. ಇದಕ್ಕೆಂದೇ ಮಾರ್ಪಡಿಸಿದ ಸೆಸ್ನಾ ವಿಮಾನವನ್ನು ಬಳಸಿಕೊಂಡು ಒಂದು ಮೋಡ ಬಿತ್ತನೆ ಹಾರಾಟಕ್ಕೆ ಸುಮಾರು ₹60 ಲಕ್ಷದಿಂದ ₹64 ಲಕ್ಷ ವೆಚ್ಚವಾಗುತ್ತದೆ. ಇದು ಒಂದೇ ಕಾರ್ಯಾಚರಣೆಯಲ್ಲಿ ಸುಮಾರು 300 ಚದರ ಕಿಲೋಮೀಟರ್ ಪ್ರದೇಶವನ್ನು ಕ್ರಮಿಸಬಹುದು. ದೆಹಲಿಯ ವಿಸ್ತೀರ್ಣ ಸರಿಸುಮಾರು 1483 ಚದರ ಕಿಲೋಮೀಟರ್ ಆಗಿರುವುದರಿಂದ, ಇಡೀ ನಗರದಲ್ಲಿ ಒಮ್ಮೆ ಕೃತಕ ಮಳೆ ಸುರಿಸಲು ಅಂದಾಜು ಬಜೆಟ್ 13 ರಿಂದ 15 ಕೋಟಿ ರೂ ಬೇಕಾಗುತ್ತದೆ! ಇದು ಒಂದೇ ಮಳೆ ಸುರಿಸಲು ಆದ ಖರ್ಚು. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ 10 ದಿನಗಳಿಗೊಮ್ಮೆ ಕೃತಕ ಮಳೆಯನ್ನು ಸುರಿಸಲು 250 - 300 ದಶಲಕ್ಷ ರೂಪಾಯಿಗಳಷ್ಟು ಖರ್ಚಾಗಬಹುದು.
ಸಾಮಾನ್ಯ ವಿಮಾನಗಳಿಂದ ಮೋಡ ಬಿತ್ತನೆ ಮಾಡಲಾಗುವುದಿಲ್ಲ ಏಕೆ?
ಸಾಮಾನ್ಯ ವಿಮಾನಗಳು ಮೋಡ ಬಿತ್ತನೆ ಮಾಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆಗೆ ವಿಶೇಷವಾಗಿ ಮಾರ್ಪಡಿಸಿದ ವಿಮಾನಗಳು, ತರಬೇತಿ ಪಡೆದ ಪೈಲಟ್‌ಗಳು, ವಾಯುಯಾನ ಪರವಾನಗಿಗಳು, ಇಂಧನ ಮತ್ತು ನಿರ್ವಹಣಾ ಬೆಂಬಲದ ಅಗತ್ಯವಿರುತ್ತದೆ.
ಮೋಡ ಬಿತ್ತನೆಗೆ ಬಳಸುವುದೇನು?
ಕೃತಕ ಮಳೆಯು ಸಿಲ್ವರ್ ಅಯೋಡೈಡ್, ಡ್ರೈ ಐಸ್ ಮತ್ತು ವಿಶೇಷ ಲವಣಗಳಂತಹ ವಸ್ತುಗಳನ್ನು ಅವಲಂಬಿಸಿದೆ, ಇವುಗಳನ್ನು ಸರಿಯಾದ ಮೋಡಗಳ ಮೇಲೆ ಸಿಂಪಡಿಸಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

