MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • Mobile Charging Tips: ಮೊಬೈಲ್ ಫುಲ್ ಸ್ಪೀಡ್‌ನಲ್ಲಿ ಚಾರ್ಜ್ ಆಗಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ!

Mobile Charging Tips: ಮೊಬೈಲ್ ಫುಲ್ ಸ್ಪೀಡ್‌ನಲ್ಲಿ ಚಾರ್ಜ್ ಆಗಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ!

ಇತ್ತೀಚಿನ ದಿನಗಳಲ್ಲಿ Smart phoneಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಬ್ಯುಸಿ ಜೀವನಶೈಲಿಯಲ್ಲಿ Phone battery ಖಾಲಿಯಾಗುವುದು ಸಾಮಾನ್ಯ ಸಮಸ್ಯೆ. ವೇಗವಾಗಿ Charge ಮಾಡಬೇಕೆಂದಿದ್ದರೆ ಕೆಲವು ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು.

1 Min read
Author : Sushma Hegde
Published : Jun 19 2026, 03:40 PM IST
Share this Photo Gallery
  • FB
  • TW
  • Linkdin
  • Whatsapp
17
ಉತ್ತಮ ಚಾರ್ಜರ್ ಬಳಸುವುದು ಮುಖ್ಯ
Image Credit : stockPhoto

ಉತ್ತಮ ಚಾರ್ಜರ್ ಬಳಸುವುದು ಮುಖ್ಯ

ಮೊಬೈಲ್ ವೇಗವಾಗಿ ಚಾರ್ಜ್ ಆಗಲು ಫೋನ್, ಚಾರ್ಜರ್ ಮತ್ತು ಕೇಬಲ್ ಮೂರು ಕೂಡ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಬೇಕು. ಯಾವಾಗಲೂ ಕಂಪನಿಯ ಮೂಲ (Original) ಅಥವಾ ಪ್ರಮಾಣೀಕೃತ (Certified) ಫಾಸ್ಟ್ ಚಾರ್ಜರ್ ಬಳಸುವುದು ಉತ್ತಮ. ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ಫೋನ್‌ಗೆ ಹಾನಿಯನ್ನೂ ಉಂಟುಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ವಾಲ್ ಸಾಕೆಟ್ ಬಳಸಿದರೆ ಹೆಚ್ಚು ವೇಗ
Image Credit : Getty

ವಾಲ್ ಸಾಕೆಟ್ ಬಳಸಿದರೆ ಹೆಚ್ಚು ವೇಗ

ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ USB ಪೋರ್ಟ್ ಮೂಲಕ ಚಾರ್ಜ್ ಮಾಡುವುದಕ್ಕಿಂತ ನೇರವಾಗಿ ವಾಲ್ ಸಾಕೆಟ್‌ಗೆ ಚಾರ್ಜರ್ ಸಂಪರ್ಕಿಸಿದರೆ ಹೆಚ್ಚು ವಿದ್ಯುತ್ ಪೂರೈಕೆಯಾಗುತ್ತದೆ. ಇದರ ಪರಿಣಾಮ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ.

37
ಫೋನ್ ಸ್ವಿಚ್ ಆಫ್ ಮಾಡಿದರೆ ಇನ್ನೂ ಉತ್ತಮ
Image Credit : Getty

ಫೋನ್ ಸ್ವಿಚ್ ಆಫ್ ಮಾಡಿದರೆ ಇನ್ನೂ ಉತ್ತಮ

ಚಾರ್ಜಿಂಗ್ ವೇಳೆ ಫೋನ್ ಆಫ್ ಮಾಡಿದರೆ ಬ್ಯಾಟರಿಗೆ ನೇರವಾಗಿ ವಿದ್ಯುತ್ ಹರಿದು ವೇಗವಾಗಿ ಚಾರ್ಜ್ ಆಗುತ್ತದೆ. ಕರೆಗಳು, ನೋಟಿಫಿಕೇಶನ್‌ಗಳು ಅಥವಾ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು ಬ್ಯಾಟರಿಯನ್ನು ಬಳಸುವುದಿಲ್ಲ.

47
ಏರ್‌ಪ್ಲೇನ್ ಮೋಡ್ ಆನ್ ಮಾಡಿ
Image Credit : freepik

ಏರ್‌ಪ್ಲೇನ್ ಮೋಡ್ ಆನ್ ಮಾಡಿ

ಫೋನ್ ಆನ್‌ನಲ್ಲೇ ಇರಬೇಕಾದರೆ ಏರ್‌ಪ್ಲೇನ್ ಮೋಡ್ ಬಳಸಬಹುದು. ಇದರಿಂದ ಮೊಬೈಲ್ ನೆಟ್‌ವರ್ಕ್, ವೈ-ಫೈ ಮತ್ತು ಬ್ಲೂಟೂತ್ ಕಾರ್ಯನಿರ್ವಹಿಸುವುದಿಲ್ಲ. ಚಾರ್ಜಿಂಗ್ ಸಮಯವು ಕಡಿಮೆಯಾಗಬಹುದು.

57
ಚಾರ್ಜಿಂಗ್ ವೇಳೆ ಫೋನ್ ಬಳಸಬೇಡಿ
Image Credit : stockPhoto

ಚಾರ್ಜಿಂಗ್ ವೇಳೆ ಫೋನ್ ಬಳಸಬೇಡಿ

ಚಾರ್ಜ್ ಆಗುತ್ತಿರುವಾಗ ವಿಡಿಯೋ ನೋಡುವುದು, ಗೇಮ್ ಆಡುವುದು ಅಥವಾ ಸೋಷಿಯಲ್ ಮೀಡಿಯಾ ಬಳಸುವುದು ಬ್ಯಾಟರಿಯ ಮೇಲೆ ಹೆಚ್ಚುವರಿ ಒತ್ತಡ ತರುತ್ತದೆ. ಇದರಿಂದ ಚಾರ್ಜಿಂಗ್ ನಿಧಾನವಾಗುವುದರ ಜೊತೆಗೆ ಫೋನ್ ಹೆಚ್ಚು ಬಿಸಿಯಾಗಬಹುದು.

67
ಫೋನ್ ಕವರ್ ತೆಗೆದು ಚಾರ್ಜ್ ಮಾಡಿ
Image Credit : stockPhoto

ಫೋನ್ ಕವರ್ ತೆಗೆದು ಚಾರ್ಜ್ ಮಾಡಿ

ದಪ್ಪ ಅಥವಾ ರಬ್ಬರ್ ಕವರ್‌ಗಳು ಫೋನ್‌ನಲ್ಲಿನ ಉಷ್ಣತೆಯನ್ನು ಹೊರಹೋಗದಂತೆ ತಡೆಯುತ್ತವೆ. ಬ್ಯಾಟರಿ ಹೆಚ್ಚು ಬಿಸಿಯಾದರೆ ಚಾರ್ಜಿಂಗ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಚಾರ್ಜ್ ಮಾಡುವಾಗ ಕವರ್ ತೆಗೆದು ಇಡುವುದು ಉತ್ತಮ.

77
ಸರಿಯಾದ ಸ್ಥಳದಲ್ಲಿ ಚಾರ್ಜ್ ಮಾಡಿ
Image Credit : Getty

ಸರಿಯಾದ ಸ್ಥಳದಲ್ಲಿ ಚಾರ್ಜ್ ಮಾಡಿ

ಬೆಡ್, ಸೋಫಾ ಅಥವಾ ತಲೆಯಣೆಯ ಮೇಲೆ ಫೋನ್ ಇಟ್ಟು ಚಾರ್ಜ್ ಮಾಡುವುದನ್ನು ತಪ್ಪಿಸಿ. ಇವು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಬದಲಿಗೆ ಸಮತಟ್ಟಾದ ಮೇಲ್ಮೈ ಮೇಲೆ ಫೋನ್ ಇಟ್ಟು ಚಾರ್ಜ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಮೊಬೈಲ್
ಗ್ಯಾಜೆಟ್‌ಗಳು
ಸ್ಮಾರ್ಟ್‌ಫೋನ್
ಐಫೋನ್

Latest Videos
Recommended Stories
Recommended image1
AI impact on Indian job market ಭಾರತದಲ್ಲಿ ಶೇ. 37ರಷ್ಟು ಆರಂಭಿಕ ಹಂತದ ಕೆಲಸಗಳು ಈಗ ಎಐ ಪಾಲು!
Recommended image2
ಎಐ ಸಾಮ್ರಾಜ್ಯದಲ್ಲಿ ಕರ್ನಾಟಕದ ಅಚ್ಚರಿಯ ಜಿಗಿತ! ಆವಿಷ್ಕಾರಗಳಲ್ಲಿ ಏಷ್ಯಾದಲ್ಲೇ 2ನೇ ಸ್ಥಾನ ಪಡೆದ ಬೆಂಗಳೂರು!
Recommended image3
ಬಾಹ್ಯಾಕಾಶದಿಂದ Jio ಹೈ-ಸ್ಪೀಡ್ ಇಂಟರ್ನೆಟ್: 1,600 ಕ್ಕೂ ಹೆಚ್ಚು ಸ್ಯಾಟಲೈಟ್ ಉಡಾವಣೆಗೆ ಅಂಬಾನಿ ಮೆಗಾ ಪ್ಲಾನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved