MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • ಮೂರು ಜನಪ್ರಿಯ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, ನೀವು ಬಳಸುತ್ತಿದ್ದೀರಾ?

ಮೂರು ಜನಪ್ರಿಯ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, ನೀವು ಬಳಸುತ್ತಿದ್ದೀರಾ?

ಕೇಂದ್ರ ಸರ್ಕಾರ ಇದೀಗ ಆ್ಯಪ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮೂರು ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ವರದಿಗಳು ಹರಿದಾಡುತ್ತಿದ್ದಂತೆ ಕೇಂದ್ರ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿದೆ. ಯಾವ ಆ್ಯಪ್ ಬ್ಯಾನ್, ಕಾರಣವೇನು?

1 Min read
Author : Chethan Kumar
Published : Jul 03 2026, 04:45 PM IST
Share this Photo Gallery
  • FB
  • TW
  • Linkdin
  • Whatsapp
15
ಮೂರು ಆ್ಯಪ್‌ಗಳು ಬ್ಯಾನ್
Image Credit : our own

ಮೂರು ಆ್ಯಪ್‌ಗಳು ಬ್ಯಾನ್

ಕೇಂದ್ರ ಸರ್ಕಾರ ಮತ್ತೆ ಆ್ಯಪ್‌ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಪ್ರಮುಖವಾಗಿ ಭಾರತದಲ್ಲಿ ಜನಪ್ರಿಯವಾಗಿರುವ ಮೂರು ಚೀನಾ ಮೂಲದ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಇ-ರಿಕ್ಷಾಗಳ ಬ್ಯಾಟರಿ ಹ್ಯಾಕಿಂಗ್ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಿಂದ ಬ್ಯಾನ್
Image Credit : google

ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಿಂದ ಬ್ಯಾನ್

BAT-BMS, Epoch Li-ion ಹಾಗೂ Lossigy ಎಂಬ ಮೂರು ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸೈಬರ್ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್‌ನಿಂದ ತಕ್ಷಣವೇ ತೆಗೆದು ಹಾಕಲು ಆದೇಶ ನೀಡಿದೆ.

Related Articles

Related image1
Kartavya App: ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು! ಸಿಎಂ ಸೂಚನೆಗೂ ಬೆಲೆ ಇಲ್ಲವೇ?
Related image2
Tantan Dating App; ₹1.66 ಕೋಟಿ ಹೂಡಿಕೆ… ಲಾಭ ಕೇವಲ ₹4,250! ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿ ಮಾತು ಕೇಳಿ ಬೆತ್ತಲಾದ ಟೆಕ್ಕಿ!
35
ಆ್ಯಪ್ ಬ್ಯಾನ್‌ಗೆ ಕಾರಣವೇನು?
Image Credit : Asianet News

ಆ್ಯಪ್ ಬ್ಯಾನ್‌ಗೆ ಕಾರಣವೇನು?

ಪಶ್ಚಮ ಬಂಗಾಳ ಸೇರಿದಂತೆ ಹಲವೆಡೆ ಕಡಿಮೆ ಬೆಲೆಯಲ್ಲಿ ಇ ರಿಕ್ಷಾ ಜನರಿಗೆ ಸೇವೆ ನೀಡುತ್ತಿದೆ. ಆದರೆ ಈ ರೀತಿಯ ಇ ರಿಕ್ಷಾಗಳಿಗೆ ಚೀನಾ ನಿರ್ಮಿತ ಬ್ಯಾಟರಿ (ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್) ಅಳವಡಿಸಲಾಗಿದೆ. ಹಲವರು ಬ್ಯಾಟರಿ ಚಾಲಿತ ಇ ರಿಕ್ಷಾಗಳನ್ನು ಬಳಸುತ್ತಿದ್ದಾರೆ. ತಾಂತ್ರಿಕವಾಗಿ ಇವುಗಳಲ್ಲಿ ಯಾವುದೇ ಪಾಸ್‌ವರ್ಡ್ ಆಗಲಿ ಅಥವಾ ಸುರಕ್ಷಿತ ಅಥೆಂಟಿಕೇಶನ್ ವ್ಯವಸ್ಥೆಯಾಗಲಿ ಇರುವುದಿಲ್ಲ. ಇದು ಒಪನ್ ಬ್ಲೂಟೂತ್ ನೆಟ್‌ವರ್ಕ್‌ನಂತೆ ಕಾರ್ಯನಿರ್ವಹಿಸುವುದರಿಂದ, 10 ರಿಂದ 15 ಮೀಟರ್ ವ್ಯಾಪ್ತಿಯಲ್ಲಿ ಯಾರು ಬೇಕಾದರೂ ಈ ‘BAT-BMS’ ನಂತಹ ಆ್ಯಪ್ ಬಳಸಿ ಇ-ರಿಕ್ಷಾದ ಲಿಥಿಯಂ ಬ್ಯಾಟರಿಗೆ ಕನೆಕ್ಟ್ ಆಗಬಹುದು.

45
ಗೂಗಲ್‌ಗೆ ಖಡಕ್ ಸೂಚನೆ ನೀಡಿದ ಕೇಂದ್ರ
Image Credit : our own

ಗೂಗಲ್‌ಗೆ ಖಡಕ್ ಸೂಚನೆ ನೀಡಿದ ಕೇಂದ್ರ

ಹೀಗೆ ಕನೆಕ್ಟ್ ಆದವರು ಬ್ಯಾಟರಿಯಿಂದ ಹೋಗುವ ಪವರ್ ಸಪ್ಲೈ ಕಟ್ ಮಾಡಲು ಸಾಧ್ಯವಾಗುತ್ತಿತ್ತ. ಆ್ಯಪ್ ಮೂಲಕವೇ ಈ ರೀತಿ ಮಾಡಲು ಸಾಧ್ಯವಾಗುತ್ತಿದ್ದ ಕಾರಣ ಮಾರ್ಗ ಮಧ್ಯೆ ಇ ರಿಕ್ಷಾ ಸ್ಥಗಿತಗೊಳ್ಳುತ್ತಿತ್ತು. ಈ ಮಾಹಿತಿ ಕೇಂದ್ರ ಸರ್ಕಾರಕ್ಕೆ ಸಿಗುತ್ತಿದ್ದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ವೇಳೆ ಗೂಗಲ್ ಗಾಗೂ ಆ್ಯಪಲ್‌ಗೆ ಖಡಕ್ ಸೂಚನೆ ನೀಡಿದೆ.

55
ಐಟಿ ಕಾರ್ಯದರ್ಶಿಯಿಂದ ಸ್ಪಷ್ಟನೆ
Image Credit : our own

ಐಟಿ ಕಾರ್ಯದರ್ಶಿಯಿಂದ ಸ್ಪಷ್ಟನೆ

ಕೇಂದ್ರ ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ, ಅಪಾಯಕಾರಿ ಆ್ಯಪ್‌ಗಳ ಬಗ್ಗೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಸಾರ್ವಜನಿಕರ ಸುರಕ್ಷತೆ, ದೇಶದ ಭದ್ರತೆಗೆ ಧಕ್ಕೆ ಬರುವ ಯಾವುದೇ ಆ್ಯಪ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಕೃಷ್ಣನ್ ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕೇಂದ್ರ ಸರ್ಕಾರ
ಭಾರತ ಸುದ್ದಿ
ತಂತ್ರಜ್ಞಾನ

Latest Videos
Recommended Stories
Recommended image1
ಜಗತ್ತು 5ಜಿ ಸ್ಪೀಡ್‌ಅಲ್ಲಿ ಇರೋವಾಗ, ನಿಮ್ಮಲ್ಲೂ ಇರ್ಬೇಕು 5ಜಿ ಫೋನ್‌: ಸ್ಯಾಮ್‌ಸಂಗ್‌-ಒನ್‌ಪ್ಲಸ್‌ಅಲ್ಲಿ ಯಾವುದು ಬೆಸ್ಟ್‌..
Recommended image2
ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 16 ಸರಣಿ ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಅತ್ಯುತ್ತಮ ಫೀಚರ್
Recommended image3
ಆಪಲ್ ಇತಿಹಾಸದಲ್ಲೇ ಮೊದಲ ಮಡಚಬಹುದಾದ ಫೋನ್ 'ಐಫೋನ್ ಅಲ್ಟ್ರಾ'; ಬೆಲೆ ಕೇಳಿದ್ರೆ ಕಣ್ಣು ತಿರುಗುತ್ತೆ, ಫೀಚರ್ಸ್ ಮಾತ್ರ ಅದ್ಭುತ!
Related Stories
Recommended image1
Kartavya App: ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು! ಸಿಎಂ ಸೂಚನೆಗೂ ಬೆಲೆ ಇಲ್ಲವೇ?
Recommended image2
Tantan Dating App; ₹1.66 ಕೋಟಿ ಹೂಡಿಕೆ… ಲಾಭ ಕೇವಲ ₹4,250! ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿ ಮಾತು ಕೇಳಿ ಬೆತ್ತಲಾದ ಟೆಕ್ಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved