MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • Tsitakakantsa: ಪ್ರಕೃತಿಯ ವಿನಾಶದ ಮುನ್ನುಡಿಯೇ? 12 ಶತಮಾನಗಳಿಂದ ಅಲುಗಾಡದ ಮರ ಈಗ ಸಾಯುತ್ತಿದೆ! ಕಾರಣವೇನು?

Tsitakakantsa: ಪ್ರಕೃತಿಯ ವಿನಾಶದ ಮುನ್ನುಡಿಯೇ? 12 ಶತಮಾನಗಳಿಂದ ಅಲುಗಾಡದ ಮರ ಈಗ ಸಾಯುತ್ತಿದೆ! ಕಾರಣವೇನು?

ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಬಿಕ್ಕುತ್ತಿದೆ. ಮಡಗಾಸ್ಕರ್‌ನ 'ಕಾಡಿನ ತಾಯಿ' ಎಂದೇ ಕರೆಯುವ  ಬೃಹತ್ ಮರವೊಂದು ಕಣ್ಮರೆಯಾಗುತ್ತಿದೆೀ.ಬರೋಬ್ಬರಿ ಹನ್ನೆರಡು ಶತಮಾನಗಳ ಕಾಲ ಬದುಕಿ, ಜೀವಿ ವೈವಿದ್ಯಕ್ಕೆ ಆಸರೆಯಾಗಿತ್ತು. ಪ್ರಕೃತಿ ಮಹಾ ವಿನಾಶಕ್ಕೆ ಮುನ್ನುಡಿಯೇ?

2 Min read
Author : Ravi Janekal
Published : Jun 09 2026, 12:03 PM IST
Share this Photo Gallery
  • FB
  • TW
  • Linkdin
  • Whatsapp
13
Tsitakakantsa: 12 ಶತಮಾನಗಳ ಕಾಲ ಬದುಕಿದ್ದ ಮರ ಈಗ ಸಾಯುತ್ತಿದೆ..!
Image Credit : Asianet News

Tsitakakantsa: 12 ಶತಮಾನಗಳ ಕಾಲ ಬದುಕಿದ್ದ ಮರ ಈಗ ಸಾಯುತ್ತಿದೆ..!

ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಬಿಕ್ಕುತ್ತಿದೆ. ಮಡಗಾಸ್ಕರ್‌ನ 'ಕಾಡಿನ ತಾಯಿ' ಎಂದೇ ಕರೆಯುವ ಬೃಹತ್ ಮರವೊಂದು ಕಣ್ಮರೆಯಾಗುತ್ತಿದೆೀ ಮರ ನೂರು ಇನ್ನೂರು ವರ್ಷದ್ದಲ್ಲ, ಒಂದು ಎರಡು ಶತಮಾನದ್ದಲ್ಲ, ಬರೋಬ್ಬರಿ ಹನ್ನೆರಡು ಶತಮಾನಗಳ ಕಾಲ, ಅಂದರೆ ಸುಮಾರು ಒಂದು ಸಾವಿರ ವರ್ಷಗಳ ಕಾಲ ಬದುಕಿ, ಜೀವಿ ವೈವಿದ್ಯಕ್ಕೆ ಆಸರೆಯಾಗಿ ಅದೆಷ್ಟೋ ಕಥೆಗಳನ್ನು ತನ್ನ ಎದೆಯಲ್ಲಿಟ್ಟುಕೊಂಡು ಬದುಕಿದ್ದ , ಈ ಭೂಮಿಯ ಅತಿ ದೊಡ್ಡ ಬಾವೊಬ್ಯಾಬ್‌ಗಳಲ್ಲಿ ಒಂದಾದ ತ್ಸಿಟಕಾಕಂತ್ಸಾ(Tsitakakantsa) ಈಗ ನಿಧಾನವಾಗಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಕಾರಣವೇನು?
Image Credit : Asianet News

ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಕಾರಣವೇನು?

ಅಕ್ಟೋಬರ್ 2025ರಲ್ಲಿ ಮೊದಲ ಬಾರಿಗೆ ಮರದಿಂದ ಕೊಳೆಯುವಿಕೆಯ ಭಯಂಕರ ವಾಸನೆ ಹೊರಹೊಮ್ಮಿತು. ಬುಡದಲ್ಲಿ ಕಪ್ಪು ದ್ರವ ಸುರಿಯುತ್ತಿತ್ತು. ಇತ್ತೀಚೆಗೆ ಅದು ತನ್ನ ಮುಖ್ಯ ಕೊಂಬೆಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಬಾವೊಬ್ಯಾಬ್‌ಗಳ ಪ್ರಪಂಚ ಪ್ರಸಿದ್ಧ ತಜ್ಞೆ ಸಿರಿಲ್ ಕಾರ್ನು (ನಿರ್ದೇಶಕಿ, 'ಮಾಮೋಡಿ, ದಿ ಲಾಸ್ಟ್ ಬಾವೊಬಾಬ್ ಡಿಗ್ಗರ್') ಅವರು 'ಒಬ್ಬ ತಜ್ಞನಾಗಿ, ಮಡಗಾಸ್ಕರ್‌ನಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ಬಾವೊಬಾಬ್ ತ್ಸಿಟಕಾಕಂತ್ಸಾದ ಬದಲಾಯಿಸಲಾಗದ ಅವನತಿಯನ್ನು ಅಪಾರ ದುಃಖದಿಂದ ದೃಢೀಕರಿಸುತ್ತೇನೆ' ಎಂದು ಭಾವುಕರಾಗಿ ಹೇಳುತ್ತಾರೆ.

ವಿಮಾನದಿಂದ ತೆಗೆದ ಚಿತ್ರಗಳಲ್ಲಿ ಕಾಂಡದ ಮೇಲ್ಭಾಗದಲ್ಲಿ ದೊಡ್ಡ ರಂಧ್ರ ಕಂಡುಬಂದಿದೆ. 2025ರ ಆರಂಭದಲ್ಲಿ ಬಂದ ಉಷ್ಣವಲಯದ ಬಿರುಗಾಳಿ ಜೂಡ್ ಆ ರಂಧ್ರವನ್ನು ನೀರಿನಿಂದ ತುಂಬಿಸಿ, ಮರದ ಒಳಗಿನ ತಿರುಳನ್ನು ಕೊಳೆಯುವಂತೆ ಮಾಡಿರಬಹುದು ಎಂದು ಸಂಶೋಧಕರು ಊಹಿಸುತ್ತಿದ್ದಾರೆ. ಆದರೆ ಬಾವೊಬ್ಯಾಬ್‌ಗಳು ಒಂದೇ ದಿನ ಕಣ್ಮರೆಯಾಗುವುದಿಲ್ಲ. ಅವು ನಿಧಾನವಾಗಿ, ಛಿದ್ರವಾಗಿ, ಭೂಮಿಗೆ ಮರಳುತ್ತವೆ. ತಜ್ಞರ ಪ್ರಕಾರ, ಈ ದೈತ್ಯವು ಇನ್ನು 2 ರಿಂದ 3 ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಬಹುದು. ಇದು ಕೇವಲ ಒಂದು ಮರದ ಸಾವಲ್ಲ.

ಇದು ಲಕ್ಷಾಂತರ ವರ್ಷಗಳ ಮಡಗಾಸ್ಕರ್‌ನ ಅನನ್ಯ ಜೀವವೈವಿಧ್ಯತೆಗೆ, ಸ್ಥಳೀಯ ಸಂಸ್ಕೃತಿಗೆ ಮತ್ತು ಪ್ರಕೃತಿಯ ಸ್ಮಾರಕಕ್ಕೆ ಆಗುತ್ತಿರುವ ದೊಡ್ಡ ನಷ್ಟ. 'ಕಾಡಿನ ತಾಯಿ' ಈಗ ತನ್ನ ಕೊನೆಯ ದಿನಗಳನ್ನು ಬದುಕುತ್ತಿದ್ದಾಳೆ.

Related Articles

Related image1
Snake Free Countries: ಈ ದೇಶಗಳಲ್ಲಿ ಒಂದೂ ಹಾವಿಲ್ಲ; ಇದು ಪ್ರಕೃತಿಯ ಪವಾಡವೋ ಅಥವಾ ವಿಜ್ಞಾನವೋ?
Related image2
Doomsday Fish: ತಮಿಳುನಾಡಿನಲ್ಲಿ ದೇವರ ಮೀನು! ಪ್ರಕೃತಿ ವಿಕೋಪಕ್ಕೆ ಮುನ್ನುಡಿ? ಭಾರಿ ಸಾವುನೋವಿನ ಸೂಚನೆ?
33
ನೋಡಲು ಇನ್ನೂ ಸಮಯವಿದೆ!
Image Credit : Asianet News

ನೋಡಲು ಇನ್ನೂ ಸಮಯವಿದೆ!

ಅವಳನ್ನು ನೋಡಲು ಇನ್ನೂ ಸಮಯವಿದೆ... ಆದರೆ ಅದು ಬಹಳ ಕಡಿಮೆ. ಪ್ರಕೃತಿಯ ಈ ಮಹಾಕಾವ್ಯದ ಕೊನೆಯ ಅಧ್ಯಾಯವನ್ನು ನೋಡುವಾಗ ನಮ್ಮ ಮನಸ್ಸು ಒಂದು ಪ್ರಶ್ನೆ ಕೇಳದೇ ಇರದು; ನಾವು ಇನ್ನೂ ಎಷ್ಟು ದೈತ್ಯರನ್ನು ಕಳೆದುಕೊಳ್ಳಬೇಕು?

ಮೂಲ ಬರಹ:

ಹಸೀನಾ ಜಿಯೋವಾನಿ

ಸಿಂಡಿಗೇಟ್ ಮೀಡಿಯಾ ಇಂಕ್.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವೈರಲ್ ಸುದ್ದಿ
ಪ್ರಾಕೃತಿಕ ವಿಕೋಪಗಳು
Latest Videos
Recommended Stories
Recommended image1
ಸಿಎಂ ವಿಜಯ್ ಟೀಕಿಸಿದ ಖ್ಯಾತ ಯೂಟ್ಯೂಬರ್ ಮರಿದಾಸ್ ಬಂಧನ, ಸಿಡಿದೆದ್ದ ತಮಿಳುನಾಡು ಬಿಜೆಪಿ!
Recommended image2
ಭಕ್ತ ಕುಂಬಾರನ ಸ್ಟೈಲ್‌ನಲ್ಲಿ ಚಪಾತಿ ಹಿಟ್ಟು ಕಲಸಿದ ಮನೆಗೆಲಸದ ಮಹಿಳೆ; ಮನೆಯವರಿಗೆಲ್ಲಾ ವಾಂತಿ-ಬೇಧಿ!
Recommended image3
Bear Sighting: ಕಾಡಿನಿಂದ ನಾಡಿಗೆ ನುಗ್ಗಿದ ಕರಡಿ, ಜನರಲ್ಲಿ ಆತಂಕ! 94 ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ!
Related Stories
Recommended image1
Snake Free Countries: ಈ ದೇಶಗಳಲ್ಲಿ ಒಂದೂ ಹಾವಿಲ್ಲ; ಇದು ಪ್ರಕೃತಿಯ ಪವಾಡವೋ ಅಥವಾ ವಿಜ್ಞಾನವೋ?
Recommended image2
Doomsday Fish: ತಮಿಳುನಾಡಿನಲ್ಲಿ ದೇವರ ಮೀನು! ಪ್ರಕೃತಿ ವಿಕೋಪಕ್ಕೆ ಮುನ್ನುಡಿ? ಭಾರಿ ಸಾವುನೋವಿನ ಸೂಚನೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved