ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ: ವಿಡಿಯೋ
ತಂದೆಯೊಬ್ಬರು ಕಾಂಡೋಮ್ ತರಲು ತನ್ನ ಚಿಕ್ಕ ಮಗನನ್ನು ಮೆಡಿಕಲ್ ಶಾಪ್‌ಗೆ ಕಳುಹಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಪೋಷಕರ ಜವಾಬ್ದಾರಿ ಮತ್ತು ಮಕ್ಕಳಿಗೆ ನೀಡಬೇಕಾದ ಶಿಕ್ಷಣದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಕಾಂಡೋಮ್
ತಂದೆಯೋರ್ವ ಕಾಂಡೋಮ್ ತೆಗೆದುಕೊಂಡು ಬರಲು ಚಿಕ್ಕ ವಯಸ್ಸಿನ ಮಗನನ್ನು ಮೆಡಿಕಲ್ ಶಾಪ್‌ಗೆ ಕಳುಹಿಸಿರುವ ಆಘಾತಕಾರಿ ಘಟನೆಯ ವಿಡೊಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಹೊಸ ಚರ್ಚೆಗೆ ಗ್ರಾಸವಾಗಿದೆ. ತಂದೆಗೆ ನಿಮ್ಮೂರಿನಲ್ಲಿ ಬ್ಲಿಂಕ್ ಇಟ್, ಸ್ವಿಗ್ಗಿ ಅಂತಹ ಆನ್‌ಲೈನ್ ಸೌಲಭ್ಯಗಳಿಲ್ಲವೇ ಎಂದು ಕೇಳಿದ್ದಾರೆ.
ಕಾಂಡೋಮ್ ತೆಗೆದುಕೊಳ್ಳಲು ನಾಚಿಕೆವೇ?
ಮೆಡಿಕಲ್ ಶಾಪ್‌ನ ವ್ಯಕ್ತಿ ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಆ ಬಾಲಕನ ಮುಖವನ್ನು ರಿವೀಲ್ ಮಾಡಿದ್ದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಡೋಮ್ ತೆಗೆದುಕೊಳ್ಳಲು ನಾಚಿಕೆವೇ? ಭಯವೇ ಎಂದು ಬಾಲಕನ ತಂದೆಯನ್ನು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.
ವೈರಲ್ ವಿಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬರು ಚೀಟಿ ಓಪನ್ ಮಾಡುತ್ತಾ, ಅದರೊಳಗೆ ಬರೆದಿರೋದನ್ನು ತೋರಿಸುತ್ತಾರೆ. ಬಾಲಕ ತೆಗೆದುಕೊಂಡು ಬಂದ ಚೀಟಿಯಲ್ಲಿ "ಡುರೆಕ್ಸ್ ಕಾಂಡೋಮ್, ಒನ್ ಪೀಸ್" ಎಂದು ಬರೆಯಲಾಗಿತ್ತು. ಈ ಚೀಟಿ ತೋರಿಸುತ್ತಾ, ಇದನ್ನು ಯಾರು ಕೊಟ್ರು ಎಂದು ಬಾಲಕನನ್ನು ಮೆಡಿಕಲ್ ಶಾಪ್ ವ್ಯಕ್ತಿ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಬಾಲಕ, ತಂದೆ ಈ ಚೀಟಿ ಕೊಟ್ಟು ಔಷಧಿ ತೆಗೆದುಕೊಂಡು ಬರುವಂತೆ ಕಳುಹಿಸಿದ್ದಾರೆ ಎಂದು ಹೇಳುತ್ತಾನೆ.
ಕಾಂಡೋಮ್ ಶಿಕ್ಷಣ
ಮಕ್ಕಳ ಕೈಯಿಂದ ಏನು ತರೀಸಬೇಕು ಅನ್ನೋದು ಪೋಷಕರಿಗೆ ಗೊತ್ತಿರಬೇಕು. ಒಂದು ವೇಳೆ ಮೆಡಿಕಲ್ ಶಾಪ್, ನಿಮ್ಮ ಕಾಂಡೋಮ್ ಪ್ಯಾಕೇಟ್‌ನ್ನು ಕವರ್‌ನಲ್ಲಿ ಹಾಕಿ ಕೊಡದೇ ಹಾಗೇ ಕಳುಹಿಸಿದ್ರೆ ಏನು ಮಾಡ್ತೀರಿ? ನಿಮ್ಮ ಖಾಸಗಿತನ ಎಲ್ಲರ ಮುಂದೆ ಹರಾಜು ಆಗುತ್ತಿತ್ತು. ಸೂಕ್ತ ಸಮಯದಲ್ಲಿ ಮಕ್ಕಳಿಗೆ ಕಾಂಡೋಮ್ ಬಗ್ಗೆ ತಿಳುವಳಿಕೆ ನೀಡಬೇಕೇ ಹೊರತು ಹೀಗೆ ಅಲ್ಲ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋ ಬಗ್ಗೆ ಒಂದಿಷ್ಟು ಅನುಮಾನ
ಈ ವಿಡಿಯೋವನ್ನು mrcreator8228 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇಂದು ಕೆಲವರು ಲೈಕ್ಸ್ ಮತ್ತು ವ್ಯೂವ್‌ಗಾಗಿ ಏನು ಮಾಡಲು ಬೇಕಾದ್ರೂ ರೆಡಿಯಾಗ್ತಾರೆ. ಇದು ನಿಜವಾದ ಘಟನೆಯೋ ಅಥವಾ ವ್ಯೂವ್‌ಗಾಗಿ ಮಾಡಿದ ಘಟನೆನಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

