- Home
- Viral News
- ಚಿಕ್ಕಪುಟ್ಟ ಕಾರಣಕ್ಕೆಲ್ಲಾ ಆತ್ಮ*ಹತ್ಯೆ ಮಾಡಿಕೊಳ್ಳಲ್ಲ, ಹೇಳಲಾಗದ್ದೇ ಇತ್ತು; ನೆಟ್ಟಿಗರು ಯಾಕೆ ಹೀಗಂತಿದಾರೆ ಗೊತ್ತಾ?
ಚಿಕ್ಕಪುಟ್ಟ ಕಾರಣಕ್ಕೆಲ್ಲಾ ಆತ್ಮ*ಹತ್ಯೆ ಮಾಡಿಕೊಳ್ಳಲ್ಲ, ಹೇಳಲಾಗದ್ದೇ ಇತ್ತು; ನೆಟ್ಟಿಗರು ಯಾಕೆ ಹೀಗಂತಿದಾರೆ ಗೊತ್ತಾ?
ಮೊನ್ನೆ, ಜನವರಿ 30ರಂದು ಕೂಡ ಆದಾಯ ಇಲಾಖೆ ಅಧಿಕಾರಿಗಳು ಸಿಜೆ ರಾಯ್ ಅವರ ಕಚೇರಿಯಲ್ಲಿ ಲೆಕ್ಕಪತ್ರ ತಪಾಸಣೆ ನಡೆಸುತ್ತಿದ್ದಾಗ, ಸಿಜೆ ರಾಯ್ ಅವರು ಅತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅದಕ್ಕೆ ನಿಖರ ಕಾರಣ ಇನ್ನೂವರೆಗೆ ಗೊತ್ತಾಗಿಲ್ಲ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾ ಚರ್ಚೆ ಜೋರಾಗಿದೆ.

ಪ್ರತಿಷ್ಠಿತ ಉದ್ಯಮಿ, ಕೇರಳ ಹಾಗೂ ಕರ್ನಾಟಕ ಎರಡೂ ಕಡೆಗಳಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಸಿಜೆ ರಾಯ್ (CJ Roy) ಅವರು ಮೊನ್ನೆ (30 ಜನವರಿ 2026) ಸಾವಿಗೆ ಶರಣಾಗಿದ್ದು ಗೊತ್ತೇ ಇದೆ.
ಕೇರಳ ಮೂಲದ ಉದ್ಯಮಿ ಸಿಜೆ ರಾಯ್ ಅವರ ಕಚೇರಿ ಬೆಂಗಳೂರು ನಗರದ ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ಇದೆ. ಅಲ್ಲಿ ಅನೇಕ ವರ್ಷಗಳಲ್ಲಿ ಆಗಾಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದರು. ಕಾರಣ, ಉದ್ಯಮಿ ಸಿಜೆ ರಾಯ್ ಅವರು ಆದಾಯಕ್ಕೆ ಮೀರಿದ ಗಳಿಕೆ ಅನುಭವಿಸುತ್ತಿರುವುದು ಎನ್ನಲಾಗಿದೆ.
ಮೊನ್ನೆ ಜನವರಿ 30ರಂದು ಕೂಡ ಆದಾಯ ಇಲಾಖೆ ಅಧಿಕಾರಿಗಳು ಸಿಜೆ ರಾಯ್ ಅವರ ಕಚೇರಿಯಲ್ಲಿ ಲೆಕ್ಕಪತ್ರ ತಪಾಸಣೆ ನಡೆಸುತ್ತಿದ್ದಾಗ, ಸಿಜೆ ರಾಯ್ ಅವರು ಅತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅದಕ್ಕೆ ನಿಖರ ಕಾರಣ ಇನ್ನೂವರೆಗೆ ಗೊತ್ತಾಗಿಲ್ಲ. ಆದರೆ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬಹುದು.
ಆದರೆ, ಅವರ ಆಪ್ತರಲ್ಲಿ ಹಲವರು ಹೇಳುವ ಪ್ರಕಾರ, ಸಿಜೆ ರಾಯ್ ಅವರು ಚಿಕ್ಕಪುಟ್ಟ ಕಾರಣಗಳಿಗೆಲ್ಲಾ ಸಾವಿಗೆ ಶರಣಾಗುವಷ್ಟು ವೀಕ್ ಮೈಡೆಂಡ್ ವ್ಯಕ್ತಿ ಅಲ್ಲವೇ ಅಲ್ಲ. ಅಂಥವರು ಸಡನ್ನಾಗಿ ಸಾಯುವ ನಿರ್ಧಾರ ಮಾಡಿದ್ದಾರೆ ಎಂದರೆ, ಅದು ಖಂಡಿತವಾಗಿಯೂ ದೊಡ್ಡ ಕಾರಣವೇ ಆಗಿರುತ್ತದೆ. ಕುಬೇರನಂತೆ ಬದುಕು ಸಾಗಿಸುತ್ತಿದ್ದ ವ್ಯಕ್ತಿ ಸಿಜೆ ರಾಯ್ ಅವರು ಆತ್ಮ*ಹತ್ಯೆ ಮಾಡಿಕೊಳ್ಳುವಂತಹ ಕಾರಣ ಅದೇನು ಆಗಿರಬಹುದು ಎಂದು ಜನಸಾಮಾನ್ಯರು ಚರ್ಚೆ ಮಾಡತೊಡಗಿದ್ದಾರೆ.
ಪೊಲೀಸ್ ತನಿಖೆ ಮೂಲಕ ಸತ್ಯಾಂಶ ಯಾವತ್ತೋ ಹೊರಗೆ ಬರಬಹುದು. ಆದರೆ, ಖಂಡಿತವಾಗಿಯೂ ಅವರಯ ತಮ್ಮ ಜೀವಕ್ಕೇ ಸಂಚಕಾರ ಆಗುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ ಅಲ್ಲೇನೋ ಬಹುದೊಡ್ಡ ಸಮಸ್ಯೆಗೇ ಸಿಲುಕಿದ್ದಾರೆ ಸಿಜೆ ರಾಯ್. ಇಲ್ಲ ಅಂದರೆ, ಅವರ ಕುಟುಂಬಕ್ಕೂ ಗೊತ್ತಿಲ್ಲದೇ ಅವರು ಆ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಏನರ್ಥ?
ಸಿಜೆ ರಾಯ್ ಕುಟುಂಬದವರಿಗೆ ಅವರು ಎದುರಿಸುತ್ತಿರುವ ಸಮಸ್ಯೆ ಗೊತ್ತಿಲ್ಲದಿರಬಹುದು ಅಥವಾ ಗೊತ್ತಿದ್ದರೂ ಹೊರಜಗತ್ತಿಗೆ ಹೇಳಲು ಅಸಾಧ್ಯ ಎಂಬಂತಿರಬಹುದು. ಆದರೆ, ಅಷ್ಟು ಸುಲಭವಾಗಿ ಪರಿಹಾರ ಸಾಧ್ಯವಿಲ್ಲ ಎಂಬಂತೆ ಆ ಪ್ರಾಬ್ಲಂ ಇರುವ ಕಾರಣಕ್ಕೇ ಸಿಜೆ ರಾಯ್ ಅವರು ಅಂಥಹ ಕಠಿಣ ಎನ್ನಬಹುದಾದ ನಿರ್ಧಾರ ತೆಗೆದುಕೊಂಡಿದ್ದಂತೂ ಸ್ಪಷ್ಟ.
ಇಲ್ಲ ಅಂದರೆ. ಕೆಲವರು ಹೇಳುತ್ತಿರುವಂತೆ ಅದು 'ಕರ್ಮ ಫಲ' ಇರಬಹುದು. ಅಥವಾ, ಆ ಕ್ಷಣದ ಆಕಸ್ಮಿಕ ನಿರ್ಧಾರವೂ ಆಗಿರಬಹುದು. ಆದರೆ, ಹೋಗಿರುವ ಜೀವ ಮತ್ತೆ ಮರಳಿ ಬರಲಂತೂ ಸಾಧ್ಯವಿಲ್ಲ. ಸಾವಿನ ಜೊತೆಗೆ ಕಾರಣ ಕೂಡ ಮಣ್ಣಾಗಿ ಹೋದರೂ ಅಚ್ಚರಿಯೇನಿಲ್ಲ. ಆದರೆ, ರಿಯಲ್ ಎಸ್ಟೇಟ್ ಮೂಲಕ ಅಷ್ಟೊಂದು ಹಣ ಗಳಿಸಿ, ಎಲ್ಲೆಲ್ಲೋ ಹೂಡಿಕೆ ಮಾಡಿ, ಸಾಕಷ್ಟು ಬಿಸಿನೆಸ್‌ಗಳಿಗೆ ಬಂಡವಾಳ ಹಾಕಿ ನಡೆಸುತ್ತ, ಹಲವು ಸಿನಿಮಾ-ಕಿರುತೆರೆ ಶೋಗಳಿಗೆ ಪ್ರಾಯೋಜಕತ್ವ ಮಾಡುತ್ತ ಬಾಳಿ ಬದುಕಿದವರು ಇದ್ದಕ್ಕಿದ್ದಂತೆ ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ ಎಂದರೆ ಶಾಕಿಂಗ್ ಸಂಗತಿಯೇ ಸರಿ. ಆದರೆ, ಸದ್ಯಕ್ಕಂತೂ ಸಿಜೆ ರಾಯ್ ಅವರ ಸಾವು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

