MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಪ್ರತಿ ಮರವೂ ದೇವರ ವಾಸಸ್ಥಾನ, ಯಾವ ಮರದಲ್ಲಿ ಯಾವ ದೇವರಿದ್ದಾನೆ?

ಪ್ರತಿ ಮರವೂ ದೇವರ ವಾಸಸ್ಥಾನ, ಯಾವ ಮರದಲ್ಲಿ ಯಾವ ದೇವರಿದ್ದಾನೆ?

ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರಕೃತಿಗೆ ದೇವರ ರೂಪ ನಿಡಲಾಗಿದೆ. ಈ ಕಾರಣಕ್ಕಾಗಿಯೇ ದೇವರು ಮತ್ತು ದೇವತೆಗಳನ್ನು ಮರಗಳು, ಸಸ್ಯಗಳು, ಹೂವುಗಳು ಮತ್ತು ನೀರಿನಲ್ಲಿ ವಾಸಸ್ಥಾನವಾಗಿ ಪೂಜಿಸಲಾಗುತ್ತದೆ. ಇನ್ನು ನಾವು ತಿಳಿದಿರುವಂತೆ ಪ್ರತಿಯೊಂದು ಮರದಲ್ಲೂ ಒಬ್ಬೊಬ್ಬ ದೇವರಿದ್ದಾರೆ ಎಂದು ನಾವು ನಂಬುತ್ತೇವೆ. ಯಾವ ಮರದಲ್ಲಿ ಯಾವ ದೇವರಿದ್ದಾನೆ ತಿಳಿಯೋಣ.

2 Min read
Suvarna News
Published : Nov 06 2022, 01:34 PM IST
Share this Photo Gallery
  • FB
  • TW
  • Linkdin
  • Whatsapp
17

ಹಿಂದೂ ಧರ್ಮದಲ್ಲಿ ದೇವರಂತೆ, ಪ್ರಾಣಿ, ಪಕ್ಷಿ, ಮರ, ಗಿಡಗಳಿಗೂ ವಿಶೇಷ ಸ್ಥಾನ ನೀಡಲಾಗಿದೆ. ಜೀವವಿರುವ ಪ್ರತಿಯೊಂದನ್ನೂ ಸನಾತನ ಧರ್ಮ ದಲ್ಲಿ ಪೂಜ್ಯ ಭಾವದಿಂದ ಕಾಣಲಾಗುತ್ತೆ. ಅದರಲ್ಲೂ ಮರಗಳಲ್ಲಿ ದೇವರಿದ್ದಾನೆ ಎಂದು ನಂಬಲಾಗಿದೆ. ಹಾಗಿದ್ರೆ ಯಾವ ಮರದಲ್ಲಿ ಯಾವ ದೇವರಿದ್ದಾರೆ(God) ಅನ್ನೋದನ್ನು ತಿಳಿಯೋಣ.

27

ಧಾರ್ಮಿಕ ಗ್ರಂಥಗಳ ಪ್ರಕಾರ, ನೆಲ್ಲಿಕಾಯಿ, ತುಳಸಿ ಮತ್ತು ಬಾಳೆ (Banana)ಮರಗಳು ಮತ್ತು ಸಸ್ಯಗಳು ಲಕ್ಷ್ಮಿ ದೇವಿ ಮತ್ತು ವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಅವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ನಿಮ್ಮದಾಗುತ್ತೆ. 
 

37

ಅಲ್ಲದೆ, ಭಗವಾನ್ ವಿಷ್ಣುವನ್ನು(Lord Vishnu) ಮೆಚ್ಚಿಸಲು ಏಕಾದಶಿಯ ದಿನದಂದು ನೆಲ್ಲಿಕಾಯಿ ಮರದಲ್ಲಿ ನೀರನ್ನು ಅರ್ಪಿಸಲಾಗುತ್ತದೆ. ಪ್ರತಿ ಗುರುವಾರ ಬಾಳೆ ಗಿಡದಲ್ಲಿ ಅರಿಶಿನ ಮಿಶ್ರಿತ ನೀರನ್ನು ಅರ್ಪಿಸುವುದರಿಂದ ಭೌತಿಕ ಆನಂದವನ್ನು ತರುತ್ತದೆ ಎಂದು ನಂಬಲಾಗಿದೆ.

47

ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ಕದಂಬ ವೃಕ್ಷದಲ್ಲಿ ವಾಸಿಸುತ್ತಾಳೆಂದು ಹೇಳುತ್ತಾರೆ. ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಪಡೆಯಲು, ಕದಂಬ ವೃಕ್ಷದ ಕೆಳಗೆ ಕುಳಿತು ಯಜ್ಞ ಮಾಡಬೇಕು. ಮಾತೆ ಲಕ್ಷ್ಮಿಯ (Goddess Lakshmi) ಆಶೀರ್ವಾದದಿಂದ, ನಿಮ್ಮ ಮನೆಯಲ್ಲಿ ಸಂತೋಷ ಸದಾ ತುಂಬಿರುತ್ತೆ.

57

ಬಿಲ್ವಪತ್ರೆ ಮತ್ತು ಆಲದ ಮರವು ದೇವತೆಗಳ ದೇವತೆಯಾದ ಮಹಾದೇವನ ವಾಸಸ್ಥಾನವೆಂದು ನಂಬಲಾಗಿದೆ. ಭಗವಾನ್ ಶಿವನಿಗೆ(Lord Shiva) ನಿಯಮಿತವಾಗಿ ಬಿಲ್ವಪತ್ರೆಯನ್ನು ಅರ್ಪಿಸೋದರಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಜೊತೆಗೆ, ತ್ರಯೋದಶಿಯ ದಿನದಂದು ಆಲದ ಮರವನ್ನು ಪೂಜಿಸೋದರಿಂದ ಶಿವನು ತುಂಬಾ ಸಂತೋಷಗೊಳ್ಳುತ್ತಾನೆ.

67

ಭಗವಾನ್ ಶಿವನಿಗೆ ಶಮಿ ಎಲೆಯನ್ನು ಅರ್ಪಿಸಿದರೆ, ಶಿವ ತುಂಬಾ ಸಂತೋಷಪಡುತ್ತಾನೆ. ಇದಲ್ಲದೆ, ಪ್ರತಿ ಶನಿವಾರ ಶಮಿ ಮರದ ಬಳಿ ಸಾಸಿವೆ ಎಣ್ಣೆಯ(Mustard oil) ದೀಪ ಬೆಳಗಿಸುವುದರಿಂದ ಮನೆಗೆ ಬರುವ ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡಬಹುದು. ನಕಾರಾತ್ಮಕ ಶಕ್ತಿಗಳ ಪರಿಣಾಮ ನಿಮ್ಮ ಮನೆಯಿಂದ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.

77

ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿ ಬುಧವಾರ ಗಣೇಶನಿಗೆ(Lord Ganesh) ನಿಯಮಿತವಾಗಿ ಅರಿಶಿನ ಲೇಪಿತ ಗರಿಕೆ ಅರ್ಪಿಸುವುದರಿಂದ ಎಲ್ಲಾ ರೀತಿಯ ತೊಂದರೆಗಳನ್ನು ತಪ್ಪಿಸಬಹುದು ಎನ್ನಲಾಗುತ್ತೆ. ಅಲ್ಲದೇ ಗಣೇಶ ಗರಿಕೆ ಪ್ರಿಯನಾಗಿದ್ದು, ಈ‌ ಹುಲ್ಲನ್ನು ಗಣೇಶನಿಗೆ ಅರ್ಪಿಸಿದರೆ ಮಾನೋಕಾಮನೆಗಳೆಲ್ಲಾ ಈಡೇರುತ್ತದೆ ಎಂದು ನಂಬಲಾಗಿದೆ.
 

About the Author

SN
Suvarna News
ವಾಸ್ತು ಸಲಹೆಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved