ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡ್ಬೇಡಿ

ಶಿವ ಬಿಲ್ವ ಪತ್ರೆ ಪ್ರಿಯ. ಈಶ್ವರನ ಕೃಪೆಬೇಕೆನ್ನುವವರು ಶಿವಲಿಂಗಕ್ಕೆ ಬಿಲ್ವ ಪತ್ರೆ ಅರ್ಪಣೆ ಮಾಡ್ತಾರೆ. ಆದ್ರೆ ಬಿಲ್ಬಪತ್ರೆ ಅರ್ಪಿಸುವಾಗ ಕೆಲ ಎಚ್ಚರಿಕೆ ವಹಿಸಬೇಕು. ಹಾಗೆ ಬೇರೆ ಬೇರೆ ಇಷ್ಟ ಈಡೇರಲು ಬೇರೆ ಬೇರೆ ರೀತಿಯಲ್ಲಿ ಬಿಲ್ವಪತ್ರೆ ಅರ್ಪಣೆ ಮಾಡ್ಬೇಕು.
 

Importance Of Bilva Patra which is favorite to lord shiva

ಶ್ರಾವಣ ಮಾಸ ಶುರುವಾಗ್ತಿದ್ದರೆ ಬಿಲ್ವ ಪತ್ರೆಗೆ ಬೇಡಿಕೆ ಹೆಚ್ಚಾಗುತ್ತದೆ. ಶಿವನ ಪೂಜೆಯಲ್ಲಿ ನೀರಿನ ಜೊತೆ ಬಿಲ್ವ ಪತ್ರೆ ಬಳಕೆಯಾಗ್ಬೇಕು. ಯಾವುದೇ ಹೂವಿಲ್ಲವೆಂದ್ರೂ ಬಿಲ್ವಪತ್ರೆ ಇರಲೇಬೇಕು. ಬಿಲ್ವ ಪತ್ರೆಗೆ ಪುರಾಣದ ಕಥೆಯಿದೆ. ಸಮುದ್ರ ಮಂಥನದಲ್ಲಿ ಬಿಲ್ವಪತ್ರೆಯನ್ನು ಬಳಕೆ ಮಾಡಲಾಯ್ತು. ಶಿವ ವಿಷ ಸೇವನೆ ಮಾಡಿದಾಗ ಅದ್ರ ಪ್ರಭಾವ ಕಡಿಮೆ ಮಾಡಲು ಬಿಲ್ವ ಪತ್ರೆ ನೀಡಲಾಯ್ತು. ಹಾಗಾಗಿ ಅಲ್ಲಿಂದ ಶಿವನ ಆರಾಧನೆಯಲ್ಲಿ ಬಿಲ್ವ ಪತ್ರೆಗೆ ಮೊದಲ ಸ್ಥಾನವಿದೆ. ಇದ್ರಲ್ಲಿ ಮೂರು ಎಲೆಗಳು ಒಟ್ಟಿಗೆ ಇರುವುದ್ರಿಂದ ಅದನ್ನು ಬಿಲ್ವಪತ್ರೆ ಎಂದು ಕರೆಯಲಾಗುತ್ತದೆ. ಇದನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಕೆ ಮಾಡಲಾಗುತ್ತದೆ. ಬಿಲ್ವ ಪತ್ರೆಯಲ್ಲಿ ಔಷಧಿ ಗುಣವೂ ಇದೆ. ಬಿಲ್ವ ಪತ್ರೆಯನ್ನು ಶಿವನ ಪೂಜೆಗೆ ಬಳಸಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಬಿಲ್ವಪತ್ರೆಯನ್ನು ಪೂಜೆ ವೇಳೆ ಬಳಸುವ ಮೊದಲು ಕೆಲ ಸಂಗತಿ ತಿಳಿದಿರಬೇಕು. ತಪ್ಪಾಗಿ ಪತ್ರೆ ಹಾಕಿದ್ರೆ ಶಿವನ ಕೃಪೆ ಭಕ್ತರಿಗೆ ಪ್ರಾಪ್ತಿಯಾಗುವುದಿಲ್ಲ. ನಾವಿಂದು ಬಿಲ್ವ ಪತ್ರೆಯನ್ನು ಹೇಗೆ ಆರಿಸಬೇಕು ಮತ್ತು ಯಾವ ಯಾವ ಕಾರಣಕ್ಕೆ ಅದನ್ನು ಹೇಗೆ ಶಿವನಿಗೆ ಅರ್ಪಿಸಬೇಕು ಎನ್ನುವ ಬಗ್ಗೆ ಹೇಳ್ತೇವೆ.

ಮುರಿದ, ಹರಿದ ಬಿಲ್ವ ಪತ್ರೆ (Bel Patra) ಎಲೆ : ಭಗವಂತ ಶಿವ (Shiva) ನ ಆರಾಧನೆಯಲ್ಲಿ  ಮೂರು ಎಲೆ ಒಟ್ಟಿಗೆ ಇರುವ ಬಿಲ್ವ ಪತ್ರೆಯನ್ನು ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಎರಡು ಅಥವಾ ಒಂದು ಎಲೆ ಇರುವ ಬಿಲ್ವ ಪತ್ರೆಯನ್ನು ಬಳಸಬಾರದು. ಹಾಗೆಯೇ ಎಲೆ ಶುದ್ಧವಾಗಿರಬೇಕು. ಅಲ್ಲಲ್ಲಿ ಹರಿದಿರುವ ಅಥವಾ ರಂಧ್ರವಾಗಿರುವ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಬಾರದು.  ಬಿಲ್ವ ಪತ್ರೆಯನ್ನು ನೀರಿನಲ್ಲಿ ತೊಳೆದು ಮತ್ತೆ ಮತ್ತೆ ಬಳಸಬಹುದು. ಆದ್ರೆ ನೀರಿ (Water) ನಲ್ಲಿ ಸ್ವಚ್ಛಗೊಳಿಸದೆ ಅದನ್ನು ಪದೇ ಪದೇ ಬಳಸುವಂತಿಲ್ಲ. ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿದಾಗ ಅದರ ಜೊತೆ ನೀರನ್ನು ಹಾಕಬೇಕು. 

ಮದುವೆ ವಿಳಂಬವಾದ್ರೆ ಬಿಲ್ವಪತ್ರೆ ಹೀಗೆ ಅರ್ಪಿಸಿ : ಮದುವೆ ವಿಳಂಬವಾದರೆ ಬಿಲ್ವ ಪತ್ರಯನ್ನು ಶಿವನಿಗೆ ಅರ್ಪಿಸಿ ಪರಿಹಾರ ಕಂಡುಕೊಳ್ಳಬಹುದು. ಮದುವೆ ವಿಳಂಬವಾದವರು 108 ಎಲೆಗಳನ್ನು ತೆಗೆದುಕೊಂಡು ಪ್ರತಿ ಬೇಲ್ವ ಪತ್ರೆಯ ಮೇಲೆ ಶ್ರೀಗಂಧದಿಂದ ರಾಮ ಎಂದು ಬರೆಯಬೇಕು. ಅದನ್ನು ಶಿವಲಿಂಗದ ಮೇಲೆ ಹಾಕ್ತಾ  ಓಂ ನಮಃ ಶಿವಾಯ ಎಂದು ಮಂತ್ರ ಪಠಣ ಮಾಡ್ಬೇಕು. 108 ಬಿಲ್ವ ಪತ್ರೆಯನ್ನು ಅರ್ಪಿಸಿದ ನಂತ್ರ ಬೇಗ ಮದುವೆಯಾಗ್ಲಿ ಎಂದು ಭೋಲೇನಾಥನನ್ನು  ಪ್ರಾರ್ಥಿಸಿ. ಇದನ್ನು ಶ್ರಾವಣ ಸೋಮವಾರ ಅಥವಾ ಶಿವರಾತ್ರಿ ಅಥವಾ ಶ್ರಾವಣ ಪ್ರದೋಷದಂದು ಮಾಡಿದರೆ ಬೇಗ ಶುಭ ಫಲ ಪ್ರಾಪ್ತಿಯಾಗುತ್ತದೆ.

ಮನೆಯಿಂದ ಹೊರಟಾಗ ಈ ಕೆಲಸ ಮಾಡಿದ್ರೆ ಅದೃಷ್ಟ ಜೊತೆಗಿರೋದ್ರಲ್ಲಿ ಡೌಟೇ ಇಲ್ಲ!

ಗಂಭೀರ ಕಾಯಿಲೆಗೆ ಪರಿಹಾರ : ಆರೋಗ್ಯ ಸಮಸ್ಯೆಗಳಿಗೂ ಬಿಲ್ವಪತ್ರೆಯಿಂದ ಪರಿಹಾರವಿದೆ.  ಶ್ರಾವಣ ಮಾಸದಲ್ಲಿ ಯಾವುದೇ ದಿನ ಒಂದು ಬಟ್ಟಲಿನಲ್ಲಿ 108 ಬಿಲ್ವ ಪತ್ರೆ ಮತ್ತು ಶ್ರೀಗಂಧದ ಪುಡಿ ತೆಗೆದುಕೊಳ್ಳಿ. ಪ್ರತಿ ಬಿಲ್ವ ಪತ್ರೆಯನ್ನು ಶ್ರೀಗಂಧದ ಪುಡಿಯಲ್ಲಿ ಮುಳುಗಿಸಿ ಶಿವಲಿಂಗಕ್ಕೆ ಅರ್ಪಿಸಿ ಮತ್ತು ಓಂ ಹೌಂ ಜೂನ್ ಸಾ ಎಂಬ ಮಂತ್ರವನ್ನು ಜಪಿಸುತ್ತಾ ಇರಿ. ಕೊನೆಯಲ್ಲಿ ಆರೋಗ್ಯ ನೀಡುವಂತೆ ಶಿವನನ್ನು ಪ್ರಾರ್ಥಿಸಿದರೆ. ಇದರಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ. ಶಿವನ ಕೃಪೆ ನಿಮಗಾಗುತ್ತದೆ.

ಹೋಮದ ಆಹುತಿ ವೇಳೆ ಸ್ವಾಹಾ ಎಂದು ಹೇಳೋದ್ಯಾಕೆ?

ವಂಶಾಭಿವೃದ್ಧಿಗೆ ಬಿಲ್ವಪತ್ರೆ : ಮಕ್ಕಳ ಸಮಸ್ಯೆಯಾಗ್ತಿದೆ, ವಂಶಾಭಿವೃದ್ಧಿಯಾಗ್ತಿಲ್ಲ ಎನ್ನುವವರು  ಬಿಲ್ವ ಪತ್ರೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಯಸ್ಸಿನಷ್ಟು ಬಿಲ್ವ ಪತ್ರೆಯನ್ನು ತೆಗೆದುಕೊಳ್ಳಬೇಕು. ನಂತ್ರ ಒಂದು ಬಟ್ಟಲಿನಲ್ಲಿ ಸ್ವಲ್ಪ ಹಾಲು ಹಾಕಬೇಕು. ಪ್ರತಿ ಬಿಲ್ವ ಪತ್ರೆಯನ್ನು ಅದರಲ್ಲಿ ಮುಳುಗಿಸಿ ಮತ್ತು ಶಿವಲಿಂಗದ ಮೇಲೆ ಅರ್ಪಿಸಬೇಕು. ಓಂ ನಮೋ ಭಗವತೇ ಮಹಾದೇವಾಯ ಮಂತ್ರವನ್ನು ಜಪಿಸಬೇಕು. ಬಟ್ಟಲಿನಲ್ಲಿ ಉಳಿದ ಹಾಲನ್ನು ಕೂಡ ಶಿವ ಲಿಂಗಕ್ಕೆ ಅರ್ಪಿಸಿ ಮತ್ತು ಶಿವಲಿಂಗದ ಮೇಲೆ ಜಲವನ್ನು ಅರ್ಪಿಸಿ. ನಂತ್ರ ಮಗು ಪ್ರಾಪ್ತಿಗೆ ಪ್ರಾರ್ಥನೆ ಮಾಡಿ. ಶ್ರಾವಣ ಮಾಸದ ಯಾವುದೇ ದಿನ ಇದನ್ನು ನೀವು ಮಾಡ್ಬಹುದು. 
 

Latest Videos
Follow Us:
Download App:
  • android
  • ios