MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ವಾಟರ್ ಪ್ಲಾಂಟ್ ಮನೆಯಲ್ಲಿದ್ರೆ ಈ ತಪ್ಪು ಮಾಡ್ಬೇಡಿ, ಜೋರಾಗುತ್ತೆ ರಾಹು - ಕೇತು ಅಬ್ಬರ

ವಾಟರ್ ಪ್ಲಾಂಟ್ ಮನೆಯಲ್ಲಿದ್ರೆ ಈ ತಪ್ಪು ಮಾಡ್ಬೇಡಿ, ಜೋರಾಗುತ್ತೆ ರಾಹು - ಕೇತು ಅಬ್ಬರ

ನಿಮ್ಮ ಮನೆಯಲ್ಲೂ ವಾಟರ್ ಪ್ಲಾಂಟ್ ಇದ್ರೆ ಅದನ್ನು ನಿಮ್ಮಿಷ್ಟದಂತೆ ಬೆಳೆಸಬೇಡಿ. ನೀವು ಮಾಡುವ ಕೆಲ ತಪ್ಪುಗಳು ವಾಸ್ತುದೋಷಕ್ಕೆ ಕಾರಣವಾಗುತ್ತವೆ. ಇದ್ರಿಂದ ನಾನಾ ಸಮಸ್ಯೆ ಎದುರಾಗುತ್ತದೆ. 

2 Min read
Author : Roopa Hegde
Published : May 18 2026, 04:42 PM IST
Share this Photo Gallery
  • FB
  • TW
  • Linkdin
  • Whatsapp
16
ವಾಟರ್ ಪ್ಲಾಂಟ್ ವಾಸ್ತು
Image Credit : Asianet News

ವಾಟರ್ ಪ್ಲಾಂಟ್ ವಾಸ್ತು

ವಾಟರ್ ಪ್ಲಾಂಟ್ ಮನೆಯ ಸೌಂದರ್ಯ ಹೆಚ್ಚಿಸೋದಲ್ದೆ ಸಕಾರಾತ್ಮಕ ಶಕ್ತಿಗೆ ಕಾರಣವಾಗುತ್ವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಡಲಾಗ್ತಿದೆ. ಮನಿ ಪ್ಲಾಂಟ್ , ಬಿದಿರಿನಂತಹ ನೀರಿನ ಗಿಡಗಳನ್ನು ಗಾಜಿನ ಬಾಟಲಿಯಲ್ಲಿ ಬೆಳೆಸಲಾಗ್ತಿದೆ. ಈ ಗಿಡಗಳಿಗೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲ ವಿಷಯಗಳ ಬಗ್ಗೆ ಗಮನ ಹರಿಸದಿದ್ರೆ ರಾಹು – ಕೇತುವಿನ ಕಾಟ ಹೆಚ್ಚಾಗುತ್ತದೆ.

Add Asianetnews Kannada as a Preferred SourcegooglePreferred
26
ನೀರು ಬದಲಿಸಿ
Image Credit : Asianet News

ನೀರು ಬದಲಿಸಿ

ನೀರಿನ ಬಾಟಲಿಯಲ್ಲಿ ಬೆಳೆಯುವ ಈ ವಾಟರ್ ಪ್ಲಾಂಟ್ ಗಳನ್ನು ಬೆಳೆಸುವಾಗ ಇರುವ ಆಸಕ್ತಿ ನಂತ್ರ ಇರೋದಿಲ್ಲ. ಬಾಟಲಿಗೆ ಹಾಕಿದ ನೀರನ್ನು ಬಹುತೇಕರು ಬದಲಿಸೋದಿಲ್ಲ. ತಿಂಗಳವರೆಗೆ ಬಾಟಲಿ ನೀರು ಬದಲಾಗೋದಿಲ್ಲ. ಅನೇಕರು ಮಾಡುವ ಈ ತಪ್ಪು ದೋಷಕ್ಕೆ ಕಾರಣವಾಗುತ್ತದೆ. ಇದ್ರಿಂದ ರಾಹು ಕೋಪಗೊಳ್ತಾನೆ. ಕೊಳಕು ಹಾಗೂ ವಾಸನೆ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ನೀವು ನಾಲ್ಕರಿಂದ ಐದು ದಿನಕ್ಕೊಮ್ಮೆ ನೀರು ಬದಲಿಸಿ.

Related Articles

Related image1
Chanakya Niti: ನಿಮ್ಮ ಬಗ್ಗೆ ಇನ್ನೊಬ್ಬರು ಏನು ಯೋಚನೆ ಮಾಡ್ತಿದ್ದಾರೆ… ಹೀಗೆ ತಿಳಿಯಿರಿ
Related image2
ಬುಧ ಮತ್ತು ಶುಕ್ರರ ಸಂಯೋಗದಿಂದ ಲಕ್ಷ್ಮಿ ನಾರಾಯಣ ರಾಜಯೋಗ, ಮೇ 29 ರಿಂದ 5 ರಾಶಿಗೆ ಉದ್ಯೋಗ, ಬ್ಯಾಂಕ್ ಬ್ಯಾಲೆನ್ಸ್‌ ಡಬಲ್
36
ಕೊಳೆಯುವ ಎಲೆ
Image Credit : Asianet News

ಕೊಳೆಯುವ ಎಲೆ

ವಾಟರ್ ಪ್ಲಾಂಟ್ ಎಲೆಗಳ ಬಗ್ಗೆಯೂ ಗಮನ ಹರಿಸಬೇಕು. ಎಲೆಗಳು ಹಳದಿಯಾದ್ರೆ, ಕೊಳೆತ್ರೆ ಜನರು ಅದನ್ನು ತೆಗೆಯೋದಿಲ್ಲ. ಕೊಳೆತ ಎಲೆ ಗಿಡದ ಮೇಲಿದ್ರೆ ಕೇತುವಿನ ಪ್ರಭಾವ ಹೆಚ್ಚಾಗುತ್ತದೆ. ಇದು ಕುಟುಂಬದಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಎಲೆ ಹಳದಿ ಅಥವಾ ಒಣಗಿದಂತೆ ಕಂಡುಬಂದ ತಕ್ಷಣ ಅದನ್ನು ಕತ್ತರಿಸಿ.

46
ಸೂರ್ಯನ ಬೆಳಕು
Image Credit : Asianet News

ಸೂರ್ಯನ ಬೆಳಕು

ಪ್ರತಿಯೊಂದು ಗಿಡಕ್ಕೂ ನೀರು ಹಾಗೂ ಸೂರ್ಯನ ಬೆಳಕು ಅಗತ್ಯವಿರುತ್ತದೆ. ಮನೆಯ ಮೂಲೆಯಲ್ಲಿ ಗಿಡವಿದ್ರೆ ಅದಕ್ಕೆ ಸೂರ್ಯನ ಬೆಳಕು ಸರಿಯಾಗಿ ಸಿಗೋದಿಲ್ಲ. ಸೂರ್ಯನ ಬೆಳಕಿನ ಕೊರತೆ ಸಸ್ಯಕ್ಕೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಇದರಿಂದ ಉದ್ವಿಗ್ನತೆ ಮತ್ತು ಸಂಘರ್ಷ ಹೆಚ್ಚಾಗುತ್ತದೆ. ತಾಜಾ ಬೆಳಕು ಸಿಗುವ ಹಾಗೂ ಸೂರ್ಯನ ಬೆಳಕಿರುವ ಜಾಗದಲ್ಲಿ ಗಿಡ ಬೆಳೆಸಿ.

56
ಈ ತಪ್ಪು ಮಾಡಬೇಡಿ
Image Credit : Asianet News

ಈ ತಪ್ಪು ಮಾಡಬೇಡಿ

ವಾಟರ್ ಪ್ಲಾಂಟ್ ನೆಡಲು ಸರಿಯಾದ ವಿಧಾನವಿದೆ. ವರ್ಣರಂಜಿತ ಹಾಗೂ ಪ್ಲಾಸ್ಟಿಕ್ ಪಾಟ್ ನಲ್ಲಿ ವಾಟರ್ ಪ್ಲಾಂಟ್ ಬೆಳೆಸಬಾರದು. ಇದು ಗಂಭೀರ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ವಾಟರ್ ಪ್ಲಾಂಟ್ ಬೆಳೆಸಿದ್ರೆ ಅದು ಧನಾತ್ಮಕ ಶಕ್ತಿಯನ್ನು ತೆಗೆಯುತ್ತದೆ. ವಾಟರ್ ಪ್ಲಾಂಟನ್ನು ಯಾವಾಗಲೂ ಗಾಜಿನ ಅಥವಾ ಸೆರಾಮಿಕ್ ಮಡಕೆಗಳಲ್ಲಿ ಇಡಬೇಕು.

66
ದಿಕ್ಕು ಮುಖ್ಯ
Image Credit : Asianet News

ದಿಕ್ಕು ಮುಖ್ಯ

ವಾಸ್ತು ಶಾಸ್ತ್ರದ ಪ್ರಕಾರ, ವಾಟರ್ ಪ್ಲಾಂಟ್ ಗಳನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು. ವಿಶೇಷವಾಗಿ, ಅವುಗಳನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬಾರದು. ತಪ್ಪು ದಿಕ್ಕಿನಲ್ಲಿ ಸಸ್ಯವನ್ನು ಬೆಳೆಸಿದ್ರೆ ಆರ್ಥಿಕ ತೊಂದರೆಗಳು ಉಂಟಾಗಬಹುದು. ವಾಸ್ತು ಪ್ರಕಾರ, ನೀರು ತುಂಬಿದ ಸಸ್ಯಗಳನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು

Latest Videos
Recommended Stories
Recommended image1
ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದರೆ ಕೈಯಲ್ಲಿ ಕಾಸು ನಿಲ್ಲದು, ಅಶುಭ ಕಟ್ಟಿಟ್ಟ ಬುತ್ತಿ!
Recommended image2
ಧನ ಲಕ್ಷ್ಮಿ ನಿಮ್ಮನೇಲಿ ಕಾಲು ಮುರ್ಕೊಂಡು ಕೂರಬೇಕಾ? ಮನೆಯ ಈ ಮೂಲೆ ಎಂದಿಗೂ ಖಾಲಿ ಬಿಡ್ಬೇಡಿ!
Recommended image3
ಗುಡ್ ಲಕ್ ಹೆಚ್ಚಿಸುವ 'ಪಂಚ; ಗಿಡಗಳು, ಮನೆಯಲ್ಲಿಟ್ಟರೆ ನೆಗೆಟಿವ್ ಎನರ್ಜಿ ದೂರ, ಫುಲ್ ಪಾಸಿಟಿವಿಟಿ
Related Stories
Recommended image1
Chanakya Niti: ನಿಮ್ಮ ಬಗ್ಗೆ ಇನ್ನೊಬ್ಬರು ಏನು ಯೋಚನೆ ಮಾಡ್ತಿದ್ದಾರೆ… ಹೀಗೆ ತಿಳಿಯಿರಿ
Recommended image2
ಬುಧ ಮತ್ತು ಶುಕ್ರರ ಸಂಯೋಗದಿಂದ ಲಕ್ಷ್ಮಿ ನಾರಾಯಣ ರಾಜಯೋಗ, ಮೇ 29 ರಿಂದ 5 ರಾಶಿಗೆ ಉದ್ಯೋಗ, ಬ್ಯಾಂಕ್ ಬ್ಯಾಲೆನ್ಸ್‌ ಡಬಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved