- Home
- Astrology
- Vaastu
- ಗುಡ್ ಲಕ್ ಹೆಚ್ಚಿಸುವ 'ಪಂಚ; ಗಿಡಗಳು, ಮನೆಯಲ್ಲಿಟ್ಟರೆ ನೆಗೆಟಿವ್ ಎನರ್ಜಿ ದೂರ, ಫುಲ್ ಪಾಸಿಟಿವಿಟಿ
ಗುಡ್ ಲಕ್ ಹೆಚ್ಚಿಸುವ 'ಪಂಚ; ಗಿಡಗಳು, ಮನೆಯಲ್ಲಿಟ್ಟರೆ ನೆಗೆಟಿವ್ ಎನರ್ಜಿ ದೂರ, ಫುಲ್ ಪಾಸಿಟಿವಿಟಿ
ತುಂಬಾ ಜನರಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ಗಿಡಗಳು ನಮ್ಮ ಮನೆಗೆ ಬರೀ ಸೌಂದರ್ಯವನ್ನು ಮಾತ್ರ ನೀಡುವುದಿಲ್ಲ, ಬದಲಾಗಿ ಮನೆಯಲ್ಲಿರುವ ನೆಗೆಟಿವಿಟಿಯನ್ನು ಕೂಡ ಕಡಿಮೆ ಮಾಡುತ್ತವೆ. ಈ ಹಸಿರು ಗಿಡಗಳನ್ನು ನೋಡಿದಾಗ ನಮ್ಮ ಮನಸ್ಸಿಗೂ ಖುಷಿ ಸಿಗುತ್ತದೆ.
15

Image Credit : Getty
ಬಿದಿರು
ಫೆಂಗ್ ಶೂಯಿ ಪ್ರಕಾರ ಬಿದಿರಿನ ಗಿಡವನ್ನು ಅದೃಷ್ಟ ತರುವ ಸಸ್ಯ ಎಂದು ಪರಿಗಣಿಸಲಾಗಿದೆ. ಬಿದಿರಿನ ಗಿಡಗಳ ಕಟ್ಟುಗಳನ್ನು ಕೆಂಪು ದಾರದಿಂದ ಕಟ್ಟಿ ಮನೆ ಅಥವಾ ಕಚೇರಿಯಲ್ಲಿ ಇಡುವುದು ತುಂಬಾ ಶುಭ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ಮನೆಯ ಸದಸ್ಯರ ಆಯಸ್ಸನ್ನು ಹೆಚ್ಚಿಸುತ್ತದೆ. ಆದರೆ ಈ ಗಿಡವನ್ನು ಇಡುವ ಪಾತ್ರೆಯಲ್ಲಿ ನೀರು ಮತ್ತು ಕಲ್ಲುಗಳೆರಡೂ ಇರುವಂತೆ ನೋಡಿಕೊಳ್ಳಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : freepik
ಜೆಡ್ ಪ್ಲಾಂಟ್
ದುಂಡಗಿನ ಎಲೆಗಳನ್ನು ಹೊಂದಿರುವ ಜೇಡ್ ಪ್ಲಾಂಟ್ ಅನ್ನು ಕೂಡಾ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ಗಿಡವನ್ನು ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ಇಡಬೇಕು. ಅಲ್ಲದೆ, ಇದು ಒಂದು ಮೀಟರ್‌ಗಿಂತ ಹೆಚ್ಚು ಬೆಳೆಯದಂತೆ ನೋಡಿಕೊಳ್ಳಬೇಕು. ಜೇಡ್ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
35
Image Credit : PINTEREST
ಮನಿ ಪ್ಲಾಂಟ್
ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಕುಟುಂಬದಲ್ಲಿ ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಮನಿ ಪ್ಲಾಂಟ್ ಎಷ್ಟು ಹಸಿರಾಗಿರುತ್ತದೆಯೋ, ನಿಮ್ಮ ಮನೆಯ ಆರ್ಥಿಕ ಸ್ಥಿತಿಯೂ ಅಷ್ಟೇ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ. ಇದನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.
45
Image Credit : unsplash
ಶಮಿ ಗಿಡ
ಶಮಿ ಗಿಡವು ಶನಿದೇವನಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡಬೇಕು ಮತ್ತು ಪ್ರತಿದಿನ ಪೂಜಿಸಬೇಕು. ಶಮಿ ಗಿಡವನ್ನು ನೆಡುವುದರಿಂದ ಮನೆಯಿಂದ ರೋಗಗಳು ಅಥವಾ ಇತರ ತೊಂದರೆಗಳು ದೂರವಾಗುತ್ತವೆ ಮತ್ತು ಸಾಲದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
55
Image Credit : Instagram
ತುಳಸಿ
ತುಳಸಿ ಗಿಡವನ್ನು ಶಾಸ್ತ್ರಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂದು ನಂಬಲಾಗಿದೆ. ಇದರ ಎಲೆಗಳನ್ನು ಶೀತ-ಕೆಮ್ಮಿನಿಂದ ಹಿಡಿದು ಅನೇಕ ರೋಗಗಳ ನಿವಾರಣೆಗೆ ಬಳಸಲಾಗುತ್ತದೆ. ಆದರೆ ತುಳಸಿ ಗಿಡವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.
Latest Videos

