Vastu Tips: ಗರ್ಭಿಣಿಯರು ಇದನ್ನ ಪಾಲಿಸಿದ್ರೆ ತಾಯಿ-ಮಗು ಆರೋಗ್ಯವಾಗಿರುತ್ತೆ !
ಗರ್ಭಾವಸ್ಥೆಯಲ್ಲಿ ವಿಶೇಷ ಕಾಳಜಿಯ ಅಗತ್ಯವಿದೆ. ಯಾಕಂದ್ರೆ ಈ ಸಮಯದಲ್ಲಿ ಮಾಡಿದ ಕೆಲಸ ಮಗುವಿನ ಮೇಲೆ ಪರಿಣಾಮ ಬೀರುತ್ತೆ . ಗರ್ಭಾವಸ್ಥೆಯಲ್ಲಿ ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ಮಾಡೋ ಮೂಲಕ ಜನಿಸಿದ ಮಗು ಸದ್ಗುಣಶೀಲ ಮತ್ತು ಸುಸಂಸ್ಕೃತವಾಗಿರುತ್ತೆ.
ತನ್ನ ಮಗು ಆರೋಗ್ಯಕರವಾಗಿ ಮತ್ತು ಸದ್ಗುಣಶೀಲವಾಗಿ ಜನಿಸಬೇಕು ಎಂಬುದು ಪ್ರತಿಯೊಬ್ಬ ತಾಯಿಯ ಬಯಕೆಯಾಗಿದೆ. ಇದಕ್ಕಾಗಿ, ಗರ್ಭಾವಸ್ಥೆಯಲ್ಲಿ(Pregnancy) ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸೋದು ಮುಖ್ಯ. ಗರ್ಭಾವಸ್ಥೆಯಲ್ಲಿ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳನ್ನು ನಿರ್ಲಕ್ಷಿಸಿದ್ರೆ, ನಷ್ಟವನ್ನು ಅನುಭವಿಸಬೇಕಾಗಬಹುದು.
ಕೋಣೆಯಲ್ಲಿ ಶ್ರೀ ಕೃಷ್ಣನ(Sri Krishna) ಚಿತ್ರ ಇರಿಸಿ.
ಗರ್ಭಿಣಿಯರು ತಮ್ಮ ಕೋಣೆಯಲ್ಲಿ ಶ್ರೀಕೃಷ್ಣನ ಬಾಲ್ಯದ ಚಿತ್ರ ಅಥವಾ ವಿಗ್ರಹವನ್ನು ಇಡಬೇಕು. ಗರ್ಭಾವಸ್ಥೆಯಲ್ಲಿ ಶ್ರೀ ಕೃಷ್ಣನ ಚಿತ್ರವನ್ನು ನೋಡುವುದು ಮಹಿಳೆಯ ಮನಸ್ಸನ್ನು ಸಂತೋಷಪಡಿಸುತ್ತೆ. ಅಲ್ಲದೆ, ಜನಿಸಿದ ಮಕ್ಕಳು ಸಹ ಸುಂದರವಾಗಿರುತ್ತಾರೆ.
ಮನೆಯಲ್ಲಿ ನವಿಲು ಗರಿಗಳನ್ನು(Peacock feather) ಇಡಿ
ಮಗುವನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲು ನವಿಲು ಗರಿಗಳನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ನವಿಲುಗರಿ ಶ್ರೀ ಕೃಷ್ಣನಿಗೆ ಸಂಬಂಧಿಸಿದೆ, ಹಾಗಾಗಿ ಇದನ್ನು ಮನೆಯಲ್ಲಿ ಇಡೋದರಿಂದ ತಾಯಿ ಮತ್ತು ಮಗುವಿಗೆ ಒಳ್ಳೆಯದಾಗುತ್ತೆ.
ಅಕ್ಕಿಯನ್ನು(Rice) ಸಿಂಪಡಿಸಿ
ಜೊತೆಗೆ, ಇಡೀ ಮನೆಗೆ ಹಳದಿ ಅಕ್ಕಿಯನ್ನು ಸಿಂಪಡಿಸಬೇಕು. ಜ್ಯೋತಿಷ್ಯದಲ್ಲಿ ಹಳದಿ ಅಕ್ಕಿಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಹಳದಿ ಅಕ್ಕಿಯನ್ನು ಒಂದು ತಟ್ಟೆಯಲ್ಲಿ ಹಾಕಿಟ್ಟರೆ ತಾಯಿ ಮತ್ತು ಮಗುವಿನ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ತಟ್ಟೋದಿಲ್ಲ.
ಈ ಪರಿಹಾರವು ನಕಾರಾತ್ಮಕತೆಯನ್ನು ದೂರವಿರಿಸುತ್ತೆ
ಗರ್ಭಿಣಿಯರು(Pregnant) ತಾಮ್ರ ಅಥವಾ ಕಬ್ಬಿಣದ ವಸ್ತುಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಈ ಕಾರಣದಿಂದಾಗಿ ನಕಾರಾತ್ಮಕ ಶಕ್ತಿಗಳು ತಾಯಿ ಮತ್ತು ಮಗುವಿನಿಂದ ದೂರವಿರುತ್ತವೆ.
ಗರ್ಭಾವಸ್ಥೆಯಲ್ಲಿ, ಗರ್ಭಿಣಿ ಮಹಿಳೆಯ ಕೋಣೆಯಲ್ಲಿ ಬಿಳಿ ಮತ್ತು ತಿಳಿ ಬಣ್ಣಗಳನ್ನು (Light colour) ಹೆಚ್ಚು ಹೆಚ್ಚು ಬಳಸಬೇಕು. ತಿಳಿ ಬಣ್ಣಗಳು ಮನಸ್ಸು ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.
ಈ ಕೆಲಸವನ್ನು ತಪ್ಪಿಯೂ ಮಾಡಬೇಡಿ
ಇಡೀ ಗರ್ಭಾವಸ್ಥೆಯಲ್ಲಿ, ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಪಾದಗಳನ್ನು ದಕ್ಷಿಣ ದಿಕ್ಕಿಗೆ (South)ಮುಖ ಮಾಡಿ ಮಲಗಬಾರದು. ಜ್ಯೋತಿಷ್ಯದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ ಮಲಗಿ. ಗರ್ಭಿಣಿ ಮಹಿಳೆ ತನ್ನ ಕೂದಲನ್ನು ತೆರೆದಿಟ್ಟು ಮಲಗಬಾರದು.