- Home
- Astrology
- Vaastu
- ಸಿಕ್ಕಾಪಟ್ಟೆ ಸಾಲ ಇದೆಯಾ? ಒಂದು ಚಮಚ ಜೀರಿಗೆಯಿಂದ ಈ ಸಣ್ಣ ಕೆಲಸ ಮಾಡಿದ್ರೆ ಹಣದ ಸಮಸ್ಯೆ ಮಂಗಮಾಯ!
ಸಿಕ್ಕಾಪಟ್ಟೆ ಸಾಲ ಇದೆಯಾ? ಒಂದು ಚಮಚ ಜೀರಿಗೆಯಿಂದ ಈ ಸಣ್ಣ ಕೆಲಸ ಮಾಡಿದ್ರೆ ಹಣದ ಸಮಸ್ಯೆ ಮಂಗಮಾಯ!
Financial success tips in Kannada: ಸಾಮಾನ್ಯವಾಗಿ ನಾವು ಜೀರಿಗೆಯನ್ನು ಅಡುಗೆಯ ರುಚಿ ಹೆಚ್ಚಿಸಲು ಅಥವಾ ಆರೋಗ್ಯಕ್ಕಾಗಿ ಬಳಸುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಒಂದು ಚಮಚ ಜೀರಿಗೆಗೆ ಆರ್ಥಿಕ ಸಂಕಷ್ಟಗಳನ್ನು ದೂರಮಾಡುವ ಅದ್ಭುತ ಶಕ್ತಿಯಿದೆ.
ಎಲ್ಲರ ಮನೆಯಲ್ಲೂ ಲಭ್ಯ ಜೀರಿಗೆ
ಎಲ್ಲರ ಮನೆಯಲ್ಲೂ ಲಭ್ಯ ಜೀರಿಗೆ
ಜೀರಿಗೆ ಬಗ್ಗೆ ಹೊಸದಾಗಿ ಹೇಳಬೇಕಾದ್ದೇನೂ ಇಲ್ಲ. ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಈ ಜೀರಿಗೆ ಖಂಡಿತವಾಗಿಯೂ ಇದ್ದೇ ಇರುತ್ತದೆ.
ಅಡುಗೆಗೆ ಮಾತ್ರವಲ್ಲ, ವಾಸ್ತು ಪ್ರಕಾರವೂ ಒಳಿತು
ಅಡುಗೆಗೆ ಮಾತ್ರವಲ್ಲ, ವಾಸ್ತು ಪ್ರಕಾರವೂ ಒಳಿತು
ಅನೇಕ ಮಂದಿ ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದುಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರವಾಗಿಯೂ ಇದು ಅನೇಕ ಪ್ರಯೋಜನಗಳನ್ನು ನೀಡುತ್ತದಂತೆ.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ
ಒಂದು ಚಮಚ ಜೀರಿಗೆಯು ಸಾಲದ ಬಾಧೆಗಳನ್ನು ದೂರಮಾಡಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಹಾಗಾಗಿ ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಸಾಲದ ಬಾಧೆಯಿದ್ದರೆ
ಸಾಲದ ಬಾಧೆಯಿದ್ದರೆ
ಸಾಲದ ಬಾಧೆಯಿಂದ ತತ್ತರಿಸುತ್ತಿರುವವರು ಈ ಜೀರಿಗೆಯನ್ನು ತೆಗೆದುಕೊಂಡು, ಏಕಾಂತ ಪ್ರದೇಶಕ್ಕೆ ಹೋಗಿ ಮಣ್ಣಿನಲ್ಲಿ ಹೂತುಹಾಕುತ್ತಾ, ಸಾಲಗಳು ತೀರಲಿ ಎಂದು ಬೇಡಿಕೊಳ್ಳಬೇಕಂತೆ. ಇದರಿಂದ ಆರ್ಥಿಕ ಸಮಸ್ಯೆಗಳು ದೂರಾಗುತ್ತವೆ.
ಕೆಲಸಗಳು ಪೂರ್ಣಗೊಳ್ಳಬೇಕೆಂದರೆ
ಕೆಲಸಗಳು ಪೂರ್ಣಗೊಳ್ಳಬೇಕೆಂದರೆ
ಒಂದು ಚಮಚ ಜೀರಿಗೆಯನ್ನು ತೆಗೆದುಕೊಂಡು, ಅದನ್ನು ನಿಮ್ಮ ತಲೆಯ ಮೇಲೆ ಏಳು ಬಾರಿ ಸುತ್ತಿ (ದೃಷ್ಟಿ ತೆಗೆಯುವಂತೆ), ನಂತರ ಅದನ್ನು ಹರಿಯುವ ನೀರಿನಲ್ಲಿ ಹಾಕುವುದು ತುಂಬಾ ಒಳ್ಳೆಯದಂತೆ. ಇದರಿಂದ ನಿಮ್ಮ ಮೇಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಕೆಲಸಗಳು ಪೂರ್ಣಗೊಳ್ಳುತ್ತವೆ.
ಹಣದ ಸಮಸ್ಯೆ ಕಡಿಮೆಯಾಗಲು
ಹಣದ ಸಮಸ್ಯೆ ಕಡಿಮೆಯಾಗಲು
ನೀವು ಸಾಲದ ಬಾಧೆಗಳನ್ನು ಎದುರಿಸುತ್ತಿದ್ದರೆ, ಶುಕ್ರವಾರದ ದಿನ ಜೀರಿಗೆಯನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಮುಖ್ಯ ದ್ವಾರಕ್ಕೆ (ಮುಂಭಾಗದ ಬಾಗಿಲಿಗೆ) ನೇತುಹಾಕಬೇಕಂತೆ. ಇದರಿಂದ ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ.
ಈ ಸಮಯದಲ್ಲೂ ಜೀರಿಗೆ ಉಪಯೋಗಕ್ಕೆ ಬರುತ್ತೆ
ಈ ಸಮಯದಲ್ಲೂ ಜೀರಿಗೆ ಉಪಯೋಗಕ್ಕೆ ಬರುತ್ತೆ
ಅಷ್ಟೇ ಅಲ್ಲದೆ, ಕೆಲವೊಮ್ಮೆ ಇತರರ ಕೆಟ್ಟ ದೃಷ್ಟಿ ಮನುಷ್ಯರ ಮೇಲೆ ಹಾಗೂ ಅವರ ಮನೆಯ ಮೇಲೆ ಇರುತ್ತದೆ. ಇದರಿಂದ ಅವರು ಯಾವುದೇ ಕೆಲಸ ಮಾಡಿದರೂ ಕೈಗೂಡುವುದಿಲ್ಲ. ಅಂತಹ ಸಮಯದಲ್ಲಿಯೂ ಜೀರಿಗೆ ಕೆಲಸ ಮಾಡುತ್ತದಂತೆ.
