Malaika Vasupal: ನೈದಿಲೆಗಿಂತಲೂ ಸುಂದರಿ ಉಪಾಧ್ಯಕ್ಷನ ಬೆಡಗಿ ಮಲೈಕಾ ವಸುಪಾಲ್
ಉಪಾಧ್ಯಕ್ಷನ ಬೆಡಗಿ ಮಲೈಕಾ ವಸುಪಾಲ್ ಹೊಸ ಫೋಟೊ ಶೂಟ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಮಿಂಚಿ, ಇದೀಗ ಹಿರಿತೆರೆಯಲ್ಲಿ ಮೋಡಿ ಮಾಡುತ್ತಿರುವ ಚೆಲುವೆ ಮಲೈಕಾ ವಸುಪಾಲ್ (Malaika Vasupal), ಇದೀಗ ತಮ್ಮ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ.
ಬಿಳಿ ಬಣ್ಣದ ಶರ್ಟ್ ಧರಿಸಿ, ಅದರ ಜೊತೆಗೆ ಜೀನ್ಸ್ ಧರಿಸಿ ಕೈಯಲ್ಲಿ ಹೂವು ಹಿಡಿದು ಪೋಸ್ ನೀಡಿದ್ದು, ಹೊಸ ಫೋಟೊ ಶೂಟಲ್ಲಿ ಮಲೈಕಾ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ಮಲೈಕಾ ವಸುಪಾಲ್ ತಮ್ಮ ಫೋಟೊಗಳ ಜೊತೆಗೆ ಪ್ರೀತಿಯಿಂದ ನೋಡಿದಾಗ ಎಲ್ಲವೂ ಸುಂದರವಾಗಿರುತ್ತದೆ ಎಂದು ಕ್ಯಾಪ್ಶನ್ ಬೇರೆ ಹಾಕಿದ್ದಾರೆ. ನಟಿಯ ಫೋಟೊಸ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಫ್ಯಾನ್ಸ್ ಕಾಮೆಂಟ್ ಮಾಡಿ, ಚಂದ್ರನ ಬೆಳದಿಂಗಳು ಇಲ್ಲದೆಯೂ,ಅರಳಿರುವ ಮುದ್ದಾದ ನೈದಿಲೆ, ನಿಮ್ಮ ಮುಖಭಾವದಲ್ಲಿ ಒಂದು ರೀತಿಯ ಮಾಂತ್ರಿಕತೆ ಇದೆ - ಅದು ಕೇವಲ ಸೌಂದರ್ಯವಲ್ಲ, ನಿಮ್ಮ ನಗುವಿನ ಹಿಂದಿನ ಮೋಡಿ ಮತ್ತು ನಿಮ್ಮ ಕಣ್ಣುಗಳಲ್ಲಿನ ಬೆಳಕು ನಿಮ್ಮ ಸುತ್ತಲಿನ ಎಲ್ಲವನ್ನೂ ಬೆಳಗಿಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಮುಂಗಾರು ಮಳೆ ನೋಡಲು ಚೆಂದ, ಅದರಂತೆ ಆ ನಿಮ್ಮ ನೋಟವು ಮನ ಕೆಡಿಸಲು ಚೆಂದ ಎನ್ನುತ್ತಾ ಕನ್ನಡದ ಮಿಲ್ಕಿ ಬ್ಯೂಟಿ ಮಲೈಕಾ ವಸುಪಾಲ್ ಅಂದವನ್ನು ಹಾಡಿ ಹೊಗಳಿದ್ದಾರೆ.
ಮಲೈಕಾ ವಸುಪಾಲ್ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಈ ಸೀರಿಯಲ್ ನಲ್ಲಿ ಎಡವಟ್ಟು ಲೀಲಾ ಆಗಿ ಸಖತ್ ಜನಪ್ರಿಯತೆ ಪಡೆದರು. ಅಲ್ಲಿಂದಲೇ ಸಿನಿಮಾಗೂ ಎಂಟ್ರಿ ಕೊಟ್ಟರು.
ಮೊದಲ ಬಾರಿ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ ವಿದ್ಯಾಪತಿ ಸಿನಿಮಾದಲ್ಲಿ ಡಾ. ನಾಗಭೂಷಣ್ ಗೆ (Dr Nagabhushan)ನಾಯಕಿಯಾದರು. ಮುಂದಿನ ಸಿನಿಮಾ ಯಾವುವು ಎಂದು ಸದ್ಯ ಅಭಿಮಾನಿಗಳು ಕಾಯುತ್ತಿದ್ದಾರೆ.